'ನಾನು ಆರ್ಮಿ ಆಫೀಸರ್ ಆಗಬೇಕೆಂದು ಬಯಸಿದ್ದೆ. ಅದಕ್ಕಾಗಿ ನಾನು ಆರ್ಮಿ ಸ್ಕೂಲಿನಲ್ಲಿ ಅಡ್ಮಿಶನ್ ಸಹ ಮಾಡಿಸಿದ್ದೆ. ಅಲ್ಲಿ ನಾನು ಹಾಕಿ, ಫುಟ್‌ಬಾಲ್ ಹಾಗೂ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾಗಿಯಾಗುತ್ತಿದ್ದೆ. ಕಾರಣ, ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರ್ಮಿಗೆ ಸೇರುವುದು ಸುಲಭ ಎಂದು ನನಗೆ ಕೆಲವರು ಸಲಹೆ ನೀಡಿದ್ದರು.
ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. 'ನಾನು ಆರ್ಮಿ ಆಫೀಸರ್ ಆಗಬೇಕೆಂದು ಬಯಸಿದ್ದೆ. ಅದಕ್ಕಾಗಿ ನಾನು ಆರ್ಮಿ ಸ್ಕೂಲಿನಲ್ಲಿ ಅಡ್ಮಿಶನ್ ಸಹ ಮಾಡಿಸಿದ್ದೆ. ಅಲ್ಲಿ ನಾನು ಹಾಕಿ, ಫುಟ್‌ಬಾಲ್ ಹಾಗೂ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾಗಿಯಾಗುತ್ತಿದ್ದೆ. ಕಾರಣ, ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರ್ಮಿಗೆ ಸೇರುವುದು ಸುಲಭ ಎಂದು ನನಗೆ ಕೆಲವರು ಸಲಹೆ ನೀಡಿದ್ದರು. ಜತೆಗೆ, ಆರ್ಮಿ ಸ್ಕೂಲಿನಲ್ಲಿ ಅಥ್ಲೆಟಿಕ್ಸ್ ಸೇರಿದಂತೆ ಎಲ್ಲಾ ಆಟಗಳಿಗೆ ಅವಕಾಶ ಇರುತ್ತೆ ಎಂಬುದು ನನಗೆ ಗೊತ್ತಿತ್ತು.
ನಾನು ಕೊಲ್ಕತಾದ ಆರ್ಮಿ ಸ್ಕೂಲಿನಲ್ಲಿ ಪ್ರವೇಶ ಪಡೆದಿದ್ದ ಕಾರಣವೇ ನಾನು ಆರ್ಮಿ ಆಫೀಸರ್ ಆಗಬೇಕು ಎಂಬುದಾಗಿತ್ತು. ಆದರೆ, ಯಾರೇ ಆದರೂ ಆರ್ಮಿ ಆಫೀಸರ್ ಆಗಬೇಕೆಂದರೆ ಹೇರ್ ಕಟ್ ಮಾಡಬೇಕೆಂದು ಮಾತುಕತೆ ನಡೆಯುತ್ತಿತ್ತು. ಅಷ್ಟರಲ್ಲೆ ನನ್ನ ವಿಷಯದಲ್ಲೂ ಹಾಗೇ ಹೇಳಲಾಯ್ತು. ಕೂದಲು ಕಟ್ ಮಾಡಬೇಕು ಎಂದು ಗೊತ್ತಾಗುತ್ತಿದ್ದಂತೆ ನಾನು ಆರ್ಮಿ ಆಫೀಸರ್ ಆಗುವ ಕನಸನ್ನೇ ಕೈ ಬಿಟ್ಟೆ. ಕಾರಣ, ನಾನು ನನ್ನ ಕೂದಲನ್ನು ತುಂಬಾ ಇಷ್ಟ ಪಡುತ್ತಿದ್ದೆ, ಮತ್ತು ಅದನ್ನು ಚಿಕ್ಕದಾಗಿ ಕಟ್ ಮಾಡಿಸಲು ನನಗೆ ಸುತಾರಾಂ ಇಷ್ಟವಿರಲಿಲ್ಲ. ನನಗೆ ಕೂದಲು ಚಿಕ್ಕದಾಗಿ ಇದ್ದರೆ ಖುಷಿಯಾಗಿರಲು ಸಾಧ್ಯವೇ ಇರಲಿಲ್ಲ' ಎಂದಿದ್ದಾರೆ ನಟ ಶಾರುಖ್ ಖಾನ್.
ಪುನೀತ್ ರಾಜ್‌ಕುಮಾರ್ 'ಜಾಕಿ' ಫೈಟ್ ಬಗ್ಗೆ ವಿವಾದ; ರವಿ ವರ್ಮ ವಿರುದ್ಧ ಪೊಲೀಸ್ ಕಂಪ್ಲೇಂಟ್
ಶಾರುಖ್ ಖಾನ್ ಅವರನ್ನು ಸಂದರ್ಶನ ಮಾಡುತ್ತಿದ್ದ ನಟ ಅನುಪಮ್ ಖೇರ್ ಅವರು 'ಅಂದರೆ, ನಿಮ್ಮ ಮಾತಿನ ಅರ್ಥವೇನು?' ಎನ್ನಲು ಶಾರುಖ್ ಖಾನ್ ಏನೂ ಹೇಳಲು ಇಷ್ಟಪಡಲಿಲ್ಲ. ಅದಕ್ಕೆ ಅನುಪಮ್ ಖೇರ್ ಅವರು 'ಅಂದರೆ, ಕೂದಲು ಕಟ್ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ ನೀವು ಆರ್ಮಿಗೆ ಸೇರಿಕೊಂಡಿಲ್ಲ ಅಂತಾನಾ' ಎನ್ನಲು ನಟ ಶಾರುಖ್ 'ನೋ ನೋ. ಜನರು ಈ ಸಂಗತಿಯನ್ನು ಕಾಂಟ್ರೋವರ್ಸಿ ಮಾಡಬಹುದು' ಎಂದು ನಕ್ಕು ಹೇಳಿದಾಗ ಅನುಪಮ್ ಖೇರ್ ಆ ಮಾತಿಗೆ ಸ್ಪಷ್ಟೀಕರಣ ಕೇಳುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.
ಉತ್ತರ ಕಾಂಡ ಸಿನಿಮಾಕ್ಕೆ ಉತ್ತರ ಕರ್ನಾಟಕದಲ್ಲಿ ಆಡಿಷನ್; ಕೆಆರ್‌ಜಿ ಸ್ಟೂಡಿಯೋಸ್ ಪ್ಲಾನ್!
ಒಟ್ಟಿನಲ್ಲಿ, ನಟ ಶಾರುಖ್ ಖಾನ್ ಅವರಿಗೆ ಅಂದು ಕೂದಲು ತುಂಬಾ ಮುಖ್ಯ ಎನಿಸಿತ್ತು ಎನ್ನಬಹುದು. ಅಥವಾ, ಉದ್ದ ಕೂದಲನ್ನು ಇಷ್ಟಪಡುತ್ತಿದ್ದ ಶಾರುಖ್, ಕೂದಲು ಕಟ್ ಮಾಡಿಸಿಕೊಳ್ಳುವುದಕ್ಕಿಂತ ಆರ್ಮಿ ಆಫೀಸರ್ ಆಗುವ ತಮ್ಮ ಕನಸನ್ನೇ ಕೈ ಬಿಡುವುದು ಬೆಸ್ಟ್ ಎಂದು ನಿರ್ಧರಿಸಿಬಿಟ್ಟರು. ಈಗ ಶಾರುಖ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಬಾಲಿವುಡ್ ಸಿನಿಮಾರಂಗದ ಕಿಂಗ್ ಖಾನ್ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕಾಲೇಜು ದಿನಗಳಲ್ಲಿ ಆರ್ಮಿ ಆಫೀಸರ್ ಆಗಬೇಕೆಂದು ಕನಸು ಕಂಡು ಉದ್ದ ಕೂದಲ ಪ್ರೇಮಿಯಾಗಿ ತಮ್ಮ ಕನಸನ್ನೇ ಬದಲಾಯಿಸಿಕೊಂಡಿದ್ದರು ಎಂಬುದು ತಮಾಷೆ ಎನಿಸಿದರೂ ಸತ್ಯ.
ಏರ್‌ಪೋರ್ಟಲ್ಲಿ ವೃದ್ಧರ ನೋಡಿದ್ರೆ ಶಂಕರ್ ಬ್ಯಾಗ್ ಕಿತ್ಕೊತಿದ್ದ: ಅರುಂಧತಿ ನಾಗ್