ಬಾಲಿವುಡ್‌ ಆಫರ್ ಬಂದಿದ್ದು, ನಾನು ರಿಜೆಕ್ಟ್ ಮಾಡಿದ್ದೂ ನಿಜ; ನಟ ಮಹೇಶ್ ಬಾಬು ಶಾಕಿಂಗ್ ಹೇಳಿಕೆ!

By Shriram Bhat  |  First Published Mar 14, 2024, 8:26 PM IST

ತೆಲುಗು ಸ್ಟಾರ್ ನಟ ಮಹೇಶ್‌ ಬಾಬು ಅವರಿಗೆ ಹಿಂದಿ ಚಿತ್ರರಂಗ ಸಾಕಷ್ಟು ಬಾರಿ ಆಫರ್ ನೀಡಿತ್ತು ಎಂಬ ಬಗ್ಗೆ ಈ ಮೊದಲು ಕೂಡ ಸಾಕಷ್ಟು ಬಾರಿ ಸುದ್ದಿಯಾಗಿತ್ತು. ಆದರೆ, ಅದು ಸುದ್ದಿಯ ಬೇರೆಬೇರೆ ಮೂಲಗಳಿಂದ ಬಂದಿತ್ತು. 


ತೆಲುಗು ಸಿನಿಮಾರಂಗದ ಸ್ಟಾರ್ ನಟ, 'ಪ್ರಿನ್ಸ್' ಖ್ಯಾತಿಯ ಮಹೇಶ್‌ ಬಾಬು ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಅಂದರೆ, ಅವರು ಬಾಲಿವುಡ್‌ ಸಿನಿಮಾ ಉದ್ಯಮದ ಬಗ್ಗೆ ಟೀಕೆ ಮಾಡಿದ್ದಾರೆ ಎಂದರ್ಥವಲ್ಲ. ನಟ ಮಹೇಶ್ ಬಾಬು ಮಾತನಾಡಿರುವುದು ತಮಗೆ ಹಿಂದಿ ಚಿತ್ರರಂಗದಿಂದ ಸಾಕಷ್ಟು ಆಫರ್ ಬಂದಿತ್ತು ಎಂಬ ಬಗ್ಗೆ ಹೇಳಿಕೊಂಡದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟ ಮಹೇಶ್ ಬಾಬು ತಮಗೆ ಈಗಾಗಲೇ ಬಹಳಷ್ಟು ಬಾರಿ ಹಿಂದಿ ಚಿತ್ರರಂಗದಿಂದ ಆಫರ್ ಬಂದಿದೆ ಎಂಬ ಸೀಕ್ರೆಟ್ ರೀವೀಲ್ ಮಾಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಮಹೇಶ್ ಬಾಬು. 'ನನಗೆ ಬಾಲಿವುಡ್ ಆಫರ್ ಮಾಡಿತ್ತು. ಆದರೆ ನಾನು ತೆಲುಗು ಚಿತ್ರೋದ್ಯಮಕ್ಕೆ ಹೇಳಿ ಮಾಡಿಸಿದ ನಟ. ನನಗೆ ತೆಲುಗು ಸಿನಿಮಾಗಳ ಇಮೋಶನ್ಸ್‌ ಮಾತ್ರ ಗೊತ್ತು. ನಾನು ಹಿಂದಿಯಿಂದ ಆಫರ್ ಪಡೆದರೂ ಕೂಡ ಅದನ್ನು ಹಿಂದಿ ಭಾಷೆಯಲ್ಲಿ ಪಡೆಯಲಾರೆ' ಎಂದು ತಮಾಷೆಯಾಗಿ, ಮಾರ್ಮಿಕವಾಗಿ ನುಡಿದಿದ್ದಾರೆ.

Tap to resize

Latest Videos

ಉದ್ದ ಕೂದಲು ಉಳಿಸಿಕೊಳ್ಳಲು ಆರ್ಮಿ ಆಫೀಸರ್‌ ಕನಸನ್ನೇ ಕೈ ಬಿಟ್ಟಿದ್ರಾ ಶಾರುಖ್ ಖಾನ್!

ಜತೆಗೆ, ಈಗ ಭಾಷೆ ಅಥವಾ ಬಾರ್ಡರ್‌ ಲೈನ್ ಅಳಿಸಿಹೋಗುತ್ತಿದೆ. ಸದ್ಯ ಸಿನಿಮಾಗಳು ಯಾವ ರೀತಿಯಲ್ಲಿ ಬರುತ್ತಿವೆ ಎಂದರೆ ಸಿನಿಮಾಗಳು ಇಂದು ಕೇವಲ ಭಾರತದ ಸಿನಿಮಾ ಆಗಿವೆ' ಎಂದಿದ್ದಾರೆ. ಹೌದು, ತೆಲುಗು ಸ್ಟಾರ್ ನಟ ಮಹೇಶ್‌ ಬಾಬು ಅವರಿಗೆ ಹಿಂದಿ ಚಿತ್ರರಂಗ ಸಾಕಷ್ಟು ಬಾರಿ ಆಫರ್ ನೀಡಿತ್ತು ಎಂಬ ಬಗ್ಗೆ ಈ ಮೊದಲು ಕೂಡ ಸಾಕಷ್ಟು ಬಾರಿ ಸುದ್ದಿಯಾಗಿತ್ತು. ಆದರೆ, ಅದು ಸುದ್ದಿಯ ಬೇರೆಬೇರೆ ಮೂಲಗಳಿಂದ ಬಂದಿತ್ತು. ಅದರ ಸತ್ಯಾಸತ್ಯತೆ ಬಗ್ಗೆ ಸಹಜವಾಗಿಯೇ ಸಂದೇಹ ಕಾಡುತ್ತಿತ್ತು.

ಸ್ಕೂಲಿನಲ್ಲಿ ತುಂಬಾ ಕುಳ್ಳಗಿದ್ದೆ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ನಟ ವಿಜಯ್ ಸೇತುಪತಿ

ಆದರೆ, ಇದೀಗ ಸ್ವತಃ ಮಹೇಶ್ ಬಾಬು ಈ ಬಗ್ಗೆ ಹೇಳಿ 'ಆಫರ್ ಬಂದಿದ್ದು ನಿಜ' ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೇ ಈ ಸುದ್ದಿ ಫೇಕ್ ಆಗಿರಲಿಲ್ಲ ಎಂಬುದು ಸ್ಪಷ್ಟ. ಆದರೆ, ಯಾವ ಸಂಸ್ಥೆ, ಯಾವ ಡೈರೆಕ್ಟರ್ ಎಂಬುದನ್ನು ಮಹೇಶ್ ಬಾಬು ಹೇಳಿಕೊಂಡಿಲ್ಲ. ಅದರ ಅಗತ್ಯವೂ ಇಲ್ಲ. ನಟ ಮಹೇಶ್ ಬಾಬು ಲುಕ್, ಮ್ಯಾನರಿಸಂ ಹಾಗು ಡೈಲಾಗ್ ಡೆಲಿವರಿ ಸ್ಟೈಲ್ ನೋಡಿದವರು ಸಹಜವಾಗಿಯೇ ಅವರಿಗೆ ಬಾಲಿವುಡ್‌ನಿಂದ ಆಫರ್ ಬರಬೇಕಿತ್ತಲ್ಲಾ ಎಂದು ಹೇಳುತ್ತಾರೆ.

'ಪ್ರಭಾಸ್ ಸಿಕ್ಕಾಪಟ್ಟೆ ಸೋಂಬೇರಿನಾ..' ಪ್ರಶ್ನೆಗೆ ಡಾರ್ಲಿಂಗ್ ಕೊಟ್ಟ ಉತ್ತರ ಏನಿರಬಹುದು?

ಬಾಲಿವುಡ್‌ಗಿಂತ ಹೆಚ್ಚಾಗಿ ಹಾಲಿವುಡ್ ಸಿನಿಮಾ ಮಹೇಶ್ ಬಾಬು ಅವರಿಗೆ ಹೆಚ್ಚು ಸ್ಯೂಟ್ ಆಗುತ್ತದೆ ಎಂಬುದು ಬಹುತೇಕರ ಅನಿಸಿಕೆ. ಅದಕ್ಕೆಲ್ಲಾ ಕಾರಣ, ಮಹೇಶ್ ಬಾಬು ಲುಕ್ ಹಾಗು ನಟನೆ ಎನ್ನಲೇಬೇಕು. ಅವರು ಭಾರತದ ಇತರ ನಟರಿಗೆ ಹೋಲಿಸಿದರೆ ಮುಖವನ್ನು ಹೆಚ್ಚಾಗಿ ಅಲ್ಲಾಡಿಸುವುದಿಲ್ಲ. ಹಾಲಿವುಡ್ ನಟರಂತೆ ಬಾಯನ್ನು ಮಾತ್ರ ಉಪಯೋಗಿಸಿ ಡೈಲಾಗ್ ಹೇಳುತ್ತಾರೆ. 

click me!