ಸೂಸನ್ ಖಾನ್ ಜೊತೆ ದಾಂಪತ್ಯಕ್ಕೆ ವಿಚ್ಛೇದನ ನೀಡಿದ ಬಳಿಕ ಹೃತಿಕ್ ರೋಶನ್ ಹೊಸ ಹುಡುಗಿ ಜೊತೆ ಸುತ್ತಾಡ್ತಾ ಇದಾರೆ. ಆಕೆ ಯಾರು? ಬನ್ನಿ ನೋಡೋಣ.
ದಶಕಗಳ ಕಾಲ ದಾಂಪತ್ಯ (Marriage) ನಡೆಸಿ, ಎರಡು ಮಕ್ಕಳ ತಂದೆಯಾಗಿದ್ದರೂ ಹೃತಿಕ್ ರೋಶನ್ (Hrithik Roshan) ಇಂದಿಗೂ ಭಾರತದ ಪಡ್ಡ ಹುಡುಗಿಯರ ಹಾರ್ಟ್‌ಥ್ರೋಬ್. ಬಾಲಿವುಡ್ನ ಮೋಸ್ಟ್ ಹ್ಯಾಂಡ್ಸಮ್, ಗ್ರೀಕ್ ಗಾಡ್ (Greek god) ಎಂದೇ ಈತನ ಖ್ಯಾತಿ. ಎರಡು ವರ್ಷಗಳ ಹಿಂದೆ ಇವನಿಗೂ ಪತ್ನಿ ಸೂಸನ್‌ಗೂ (Susanne) ವಿಚ್ಛೇದನ ಆಗಿತ್ತು. ಮಕ್ಕಳು ಸೂಸನ್ ಜೊತೆಗೆ ವಾಸಿಸುತ್ತಿದ್ದಾರೆ. ಮಕ್ಕಳಿಗಾಗಿ ಆಗಾಗ ಹೃತಿಕ್ ಮತ್ತು ಸೂಸನ್ ಜೊತೆಯಾಗಿ ಇರುವುದುಂಟು. ಈಗ ವಿಷಯ ಅದಲ್ಲ. ಹೃತಿಕ್ ಹೊಸ ಗರ್ಲ್ಫ್ರೆಂಡ್ (Girl friend) ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಜನವರಿ 28ರ ರಾತ್ರಿ ಹೊಸ ಗರ್ಲ್ಫ್ರೆಂಡ್ ಜೊತೆ ಹೃತಿಕ್ ಡಿನ್ನರ್ಗೆ ಹೋಗಿದ್ದರು. ಊಟ ಮುಗಿಸಿ ಬರುವಾಗ, ಇಬ್ಬರು ಕೈ ಕೈ ಹಿಡಿದುಕೊಂಡು ಆಚೆ ಬಂದಿದ್ದರು. ಇದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು ಇದೀಗ ಈ ವಿಚಾರ ಚರ್ಚೆಗೆ ಬಿಸಿ ಬಿಸಿ ಟಾಪಿಕ್ ಆಗಿದೆ. ವಿಚ್ಛೇದನದ ಬಳಿಕ ಹೃತಿಕ್ ರೋಷನ್ ಹೆಸರು ಯಾರೊಂದಿಗೂ ತಳುಕು ಹಾಕಿಕೊಂಡಿರಲಿಲ್ಲ. ತನ್ನ ಇಬ್ಬರು ಮಕ್ಕಳೊಂದಿಗೆ ಸಮಯ ಕಳೆಯುವ ಫೋಟೊಗಳು ಹರಿದಾಡಿದ್ದು ಬಿಟ್ಟರೆ, ಹೃತಿಕ್ ರೋಷನ್ ರೂಮರ್‌ಗಳಿಗೆ ಸಿಕ್ಕಿಕೊಂಡಿರಲಿಲ್ಲ.
ಈ ಹುಡುಗಿ ಯಾರು ಅಂತ ಈಗ ಗೊತ್ತಾಗಿದೆ. ಈಕೆ ಸಬಾ ಆಜಾದ್ (Saba Azad). ಈಕೆ ಸಿನಿಮಾ (Cinema) ಹಾಗೂ ರಂಗಭೂಮಿ ನಟಿ. ಇವರಿಬ್ಬರೂ ಹೋಟೆಲ್‌ನಲ್ಲಿ ಜೊತೆಯಾಗಿ ಡಿನ್ನರ್ ಮಾಡಿದ್ದು, ಡೇಟಿಂಗ್ ಮಾಡುತ್ತಿರುವುದು ಈಗ ಸುದ್ದಿ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿವೆ. 1989ರ ಜನವರಿ 1ರಂದು ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ JANAM ಎನ್ನುವ ಗುಂಪು 'ಹಲ್ಲಾ ಬೋಲ್' ಹೆಸರಿನಲ್ಲಿ ಬೀದಿ ನಾಟಕ ಮಾಡುತ್ತಿತ್ತು. ಈ ವೇಳೆ ಗುಂಪೊಂದು ನಾಟಕಗಾರರ ಮೇಲೆ ಹಲ್ಲೆ ಮಾಡಿತ್ತು. ಇದರಲ್ಲಿ ಪ್ರಸಿದ್ಧ ನಾಟಕಗಾರ ಸಫ್ದರ್ ಹಾಶ್ಮಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆ ಫಲಿಸದೆ ಸಫ್ದರ್ ಹಾಶ್ಮಿ (Safdar Hashmi) ಸಾವನ್ನಪ್ಪಿದ್ದರು. ಇವರ ಸಂಬಂಧಿಯೇ ಸಬಾ ಅಜಾದ್. ಈಕೆ ಕೂಡ ರಂಗಭೂಮಿಯಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. 2008ರಲ್ಲಿ ಸಬಾ ಆಜಾದ್ 'ದಿಲ್ ಕಬಡ್ಡಿ' (Dil Kabaddi) ಅನ್ನುವ ಸಿನಿಮಾ ಮೂಲಕ ಬಾಲಿವುಡ್ (Bollywood) ಪ್ರವೇಶ ಮಾಡಿದ್ದರು. ಬಳಿಕ 2011ರಲ್ಲಿ ತೆರೆಕಂಡ 'ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ' ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಸಾಕಷ್ಟು ಮ್ಯೂಸಿಕ್ ವಿಡಿಯೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
BB15: ವೇದಿಕೆ ಮೇಲೆ ಕಣ್ಣೀರಿಟ್ಟ ಸಲ್ಮಾನ್ ಖಾನ್, ಶೆಹನಾಜ್ ಗಿಲ್ ವಿಡಿಯೋ ವೈರಲ್!
‘ಹೃತಿಕ್ ರೋಷನ್ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ರಹಸ್ಯವಾಗಿ ಇಡಲು ಆದ್ಯತೆ ನೀಡುತ್ತಾರೆ. ಆದರೆ ಸದ್ಯ ನಟಿ ಸಬಾ ಆಜಾದ್ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರೆ ಅದರಲ್ಲಿ ವಿಶೇಷತೆ ಏನಾದರೂ ಇರಬಹುದು. ಅಂದರೆ ಮದುವೆಯಾಗಲೂ ಆಲೋಚನೆ ಮಾಡಿರಬಹುದು. ಅಥವಾ ಲಿವಿಂಗ್ ಟುಗೆದರ್ ನಡೆಸುತ್ತಿರಬಹುದು. ಏನೇ ಇದ್ದರೂ ಹೃತಿಕ್ ಅಥವಾ ಸಬಾ ಇಬ್ಬರಲ್ಲಿ ಒಬ್ಬರು ಹೇಳಬೇಕಷ್ಟೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ಹೃತಿಕ್ ‘ವಿಕ್ರಮ್ ವೇದ’ ರಿಮೇಕ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ತಮಿಳಲ್ಲಿ ತೆರೆಗೆ ಬಂದ ‘ವಿಕ್ರಮ್ ವೇದ’ (Vikram Veda) ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ವಿಕ್ರಮ್ ಆಗಿ ಮಾಧವನ್ ಕಾಣಿಸಿಕೊಂಡರೆ, ವೇದ ಆಗಿ ವಿಜಯ್ ಸೇತುಪತಿ (Vijay Sethupathy) ಮಿಂಚಿದ್ದರು. ಇವರ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಅದನ್ನು ರಿಮೇಕ್ ಮಾಡಲು ಬಾಲಿವುಡ್ ಮಂದಿ ಮುಂದೆ ಬಂದಿದ್ದಾರೆ. ಹೃತಿಕ್ ರೋಷನ್ ಈ ಸಿನಿಮಾದಲ್ಲಿ ವೇದ ಎಂಬ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್ಡೇ ಅಂಗವಾಗಿ ಜನವರಿ 10ರಂದು ಲುಕ್ ರಿಲೀಸ್ ಆಗಿತ್ತು. ಈ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.