Allu Arjun: ಹದಿನೈದು ದಿನ ಬಿಟ್ಟು ಮನೆಗೆ ಬಂದಾಗ ಮಗಳು ವೆಲ್‌ಕಂ ಮಾಡಿದ್ದು ಹೀಗೆ!

Suvarna News   | Asianet News
Published : Jan 31, 2022, 04:47 PM IST
Allu Arjun: ಹದಿನೈದು ದಿನ ಬಿಟ್ಟು ಮನೆಗೆ ಬಂದಾಗ ಮಗಳು ವೆಲ್‌ಕಂ ಮಾಡಿದ್ದು ಹೀಗೆ!

ಸಾರಾಂಶ

ತೆಲುಗಿನ ಸ್ಟಾರ್‌ ನಟ ಅಲ್ಲು ಅರ್ಜುನ್‌ಗೆ ಪುಟಾಣಿ ಮಗಳು ಅರ್ಹ ಅಂದರೆ ಪ್ರಾಣ. ಹದಿನೈದು ದಿನದ ಬಳಿಕ ಮರಳಿದ ತನಗೆ ಪುಟ್ಟ ಮಗಳು ಹೇಗೆ ಸ್ವಾಗತ ಮಾಡಿದ್ಲು ಅನ್ನೋದನ್ನು ಅಲ್ಲು ಅರ್ಜುನ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.  

ಅಲ್ಲು ಅರ್ಜುನ್‌ (Allu Arjun) ಸೌತ್‌ ಇಂಡಿಯನ್‌ ಸಿನಿಮಾ (Cinema) ಇಂಡಸ್ಟ್ರಿಯ ಜನಪ್ರಿಯ ನಟ. ಪುಷ್ಪ (Pushpa) ಬಿಡುಗಡೆಯ ಬಳಿಕ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೌತ್‌ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಅನ್ನುವ ಖ್ಯಾತಿಯೂ ಇವರಿಗಿದೆ. ಅಲ್ಲು ಅರ್ಜುನ್‌ ಅವರದು ಸಿನಿಮಾ ಹಿನ್ನೆಲೆ ಇರುವ ಕುಟುಂಬ. ಇವರ ತಂದೆ ಅಲ್ಲು ಅರವಿಂದ್‌ ಸಿನಿಮಾ ನಿರ್ಮಾಪಕರು. ಅಲ್ಲು ಅರ್ಜುನ್ ಅಜ್ಜ ಅಲ್ಲು ರಾಮಲಿಂಗಯ್ಯ ತೆಲುಗು ಸಿನಿಮಾ ರಂಗದಲ್ಲಿ ಕಾಮಿಡಿಯನ್‌ (Comedian) ಆಗಿ ಗುರುತಿಸಿಕೊಂಡವರು. ಇದೀಗ ಈ ತಲೆಮಾರಿನ ಅತ್ಯಂತ ಕಿರಿಯ ಸದಸ್ಯೆ ಅರ್ಹ ತಾನೂ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಲು ಹೊರಟಿದ್ದಾಳೆ. ಈಕೆ ಅಲ್ಲು ಅರ್ಜುನ್‌ ಹಾಗೂ ಸ್ನೇಹಾ ರೆಡ್ಡಿ ಪುತ್ರಿ. ಸಮಂತಾ ನಟನೆಯ ಶಕುಂತಲಂ (Shakuntalam) ಚಿತ್ರದಲ್ಲಿ ಈಕೆ ರಾಜಕುಮಾರ ಭರತನ ಪಾತ್ರ ಮಾಡಲಿದ್ದಾಳೆ. ಈ ಪುಟಾಣಿಯ ಬಗ್ಗೆ ಅಲ್ಲು ಅವರು ಮಾಡಿರುವ ಟ್ವೀಟ್‌ (Tweet) ಹೃದಯ ಕರಗಿಸುವಂತಿದೆ. 

ಅದಾಗಿದ್ದು ಹೀಗೆ. ಅಲ್ಲು ಅರ್ಜುನ್‌ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದರು. ಸುಮಾರು 16 ದಿನಗಳ ಕಾಲ ಪತ್ನಿ ಮತ್ತು ಮಗಳಿಂದ ದೂರವಿದ್ದರು. ದುಬೈ (Dubai) ನಲ್ಲಿದ್ದ ಅಲ್ಲು ಅವರು ಇದೀಗ ತನ್ನ ಮನೆಗೆ ವಾಪಾಸಾಗಿದ್ದಾರೆ. ಪುಟಾಣಿ ಅರ್ಹಾಗೆ (Arha) ಮುದ್ದಿನ ಅಪ್ಪನನ್ನು ಬಿಟ್ಟಿರುವುದು ಕಷ್ಟ. ಆದರೂ ಚಿಕ್ಕ ವಯಸ್ಸಿಗೇ ಅಪ್ಪನ ಕೆಲಸದ ಬಗ್ಗೆ ತಿಳಿದುಕೊಂಡಿರುವ ಅವಳು ಬೇಜಾರಾದರೂ ಅಪ್ಪನನ್ನು ಪ್ರೀತಿಯಿಂದ ಕಳುಹಿಸಿ ಕೊಡುತ್ತಾಳೆ. ಬೇಗ ಬರೋದಾಗಿ ಅಪ್ಪ ಅರ್ಜುನ್‌ ಅವಳಿಗೆ ಭರವಸೆ ಕೊಡುತ್ತಾರೆ. ಆದರೆ ಈ ಸಲ ಮಾತ್ರ ಹಾಗೆ ಹೋದ ಅಪ್ಪ ಮರಳಿ ಬಂದಿದ್ದು ಬರೋಬ್ಬರಿ 16 ದಿನಗಳ ಬಳಿಕ. ಅಷ್ಟು ದಿನ ಅಪ್ಪನನ್ನು ಬಿಟ್ಟಿದ್ದು ಅಪ್ಪ ಮರಳಿದಾಗ ಮಗಳ ಖುಷಿ ತಡೆಯದಾಯ್ತು. ಅವಳು ಮುದ್ದಾಗಿ ಅಪ್ಪನನ್ನು ವೆಲ್‌ಕಂ ಮಾಡಿದ್ದಾಳೆ. ಆ ಕ್ಷಣಗಳನ್ನು ಸೆರೆಹಿಡಿದು ಅಲ್ಲು ಅರ್ಜುನ್‌ ಅವರು ಸೋಷಿಯಲ್‌ ಮೀಡಿಯಾ (Social media) ದಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಒಳ ಉಡುಪು-ದೇವರ ಬಗ್ಗೆ ಉಡಾಫೆ ಮಾತು; ಕ್ಷಮೆ ಕೇಳಿದ ನಟಿ ಶ್ವೇತಾ!

ಅಪ್ಪ ಬರುತ್ತಿದ್ದಾರೆ ಅಂತ ಗೊತ್ತಾಗಿದ್ದೇ ಅರ್ಹಾ ಹೂವು, ಎಲೆಗಳನ್ನು ಒಟ್ಟು ಮಾಡಿ ಹಾಲ್‌ನಲ್ಲಿ ತನ್ನ ಪಾಡಿಗೆ ಕೂತು ಅವುಗಳಲ್ಲಿ ಡಿಸೈನ್‌ ಮಾಡಿದ್ದಾಳೆ. 'ವೆಲ್‌ಕಂ ನಾನಾ' ಎಂದು ಹೂಗಳಲ್ಲೇ ಬರೆದು ಅಲಂಕರಿಸಿದ್ದಾಳೆ. ಹದಿನಾರು ದಿನಗಳ ಕಾಲ ಮಗಳನ್ನು ಬಿಟ್ಟಿದ್ದ ಅಪ್ಪನಿಗೆ ಈ ಪ್ಲೆಸೆಂಟ್ ಸರ್ಪೈಸ್ ಕೊಟ್ಟ ಖುಷಿ ಅಷ್ಟಿಷ್ಟಲ್ಲ. ಮಗಳನ್ನು ತಬ್ಬಿ ಮುದ್ದಾಡಿ ಅವಳಿಗೆ ಚೆಂದದ ಗಿಫ್ಟ್‌ ಕೊಟ್ಟು ಅವಳು ವೆಲ್‌ಕಂ ಮಾಡಿದ ರೀತಿಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಫೋಟೋವನ್ನು ಇನ್‌ಸ್ಟಾದಲ್ಲಿ (Instagram) ಶೇರ್ ಮಾಡಿಕೊಂಡು, 'ಹದಿನಾರು ದಿನಗಳ ಬಳಿಕ ವಿದೇಶದಿಂದ ಬಂದಾಗ ಸಿಕ್ಕ ಸ್ವೀಟೆಸ್ಟ್‌ ವೆಲ್‌ಕಂ' ಅಂತ ಬರೆದುಕೊಂಡಿದ್ದಾರೆ. ಇದರಲ್ಲಿ ತನ್ನ ಪಿಂಕ್‌ ಬಣ್ಣದ ನೈಟ್‌ಡ್ರೆಸ್‌ನಲ್ಲೇ ಅರ್ಹಾ 'ವೆಲ್‌ಕಂ ನಾನಾ' ಎಂದು ಹೂವು, ಎಲೆಗಳಲ್ಲಿ ಬರೆದು ಅದರ ಎದುರು ನಿಂತಿದ್ದಾಳೆ. ಪುಟಾಣಿ ಮಗುವಿನ ಮುದ್ದಾದ ಫೋಟೋ ಅಲ್ಲು ಫ್ಯಾನ್ಸ್‌ ಮನ ಗೆದ್ದಿದೆ. 

Allu Arjun : ಪುಷ್ಪಾ ನಂತರ ಅಲ್ಲು ಅರ್ಜುನ್-ಪೂಜಾ ಮೋಡಿ...ಮಿಂಚಿನ ಟ್ರೇಲರ್

ಅಲ್ಲು ಅರ್ಜುನ್‌ ಅವರು ಕೆಲವು ದಿನಗಳ ಹಿಂದೆ ಯಾವುದೋ ಕೆಲಸದ ಮೇಲೆ ದುಬೈಗೆ ತೆರೆಳಿದ್ದರು. ರಜೆಯನ್ನು ಎನ್‌ಜಾಯ್‌ ಮಾಡಲು ಹೋಗಿದ್ದಾ ಅಥವಾ ಕೆಲಸದ ಮೇಲೆ ಅಲ್ಲಿಗೆ ಹೋಗಿದ್ದಾ ಅನ್ನೋದು ಗೊತ್ತಿಲ್ಲ. ಆದರೆ ಕೆಲವು ದಿನಗಳ ಹಿಂದೆ ಅಲ್ಲಿನ ಸ್ಕೈ ಪೂಲ್‌ ಮುಂದೆ ನಿಂತಿರುವ ಫೋಟೋ ಪೋಸ್ಟ್‌ ಮಾಡಿದ್ದರು. ಮತ್ತೊಂದು ಕಡೆ ಅಲ್ಲು ಅರ್ಜುನ್‌-ರಶ್ಮಿಕಾ (Rashmika Mandanna) ನಟನೆಯ 'ಪುಷ್ಪ' ಚಿತ್ರ ವಿಶ್ವದೆಲ್ಲೆಡೆ ಜಯಭೇರಿ ಬಾರಿಸುತ್ತಿರುವ ಹೊತ್ತಲೇ ಅಲ್ಲು ಅವರು ತನ್ನ ಸಂಭಾವನೆಯನ್ನೂ ಏರಿಸಿಕೊಂಡಿದ್ದಾರೆ. ಆ ಮೂಲಕ ಪ್ರಭಾಸ್‌ (Prabhas) ಬಳಿಕ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸಿನಿಮಾ ರಂಗದಲ್ಲಿ ಅಷ್ಟೆಲ್ಲ ಎತ್ತರಕ್ಕೇರಿದರೂ ಅವರು ಫ್ಯಾಮಿಲಿಯನ್ನು ಕಡೆಗಣಿಸಿಲ್ಲ. ಪುಟಾಣಿ ಮಗಳ ಜೊತೆಗೆ ಸಮಯ ಕಳೆಯುವ ಖುಷಿ ಬೇರ್ಯಾವುದರಿಂದಲೂ ಸಿಗೋದಿಲ್ಲ ಅಂತ ಆಗಾಗ ಹೇಳ್ತಿರೋದು ಅವರ ಮಗಳ ಮೇಲಿನ ಪ್ರೀತಿಗೆ ಸಾಕ್ಷಿಯಂತಿದೆ. 

ಮಗನ ಡಿವೋರ್ಸ್‌ ಬಗ್ಗೆ ನಾನು ಏನೂ ಹೇಳಿಲ್ಲ, ಸುದ್ದಿ ಸುಳ್ಳು: Nagarjuna

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ