ಹುಟ್ಟುತ್ತಲೇ ಕೋಟ್ಯಾಧಿಪತಿಯಾದ ದೀಪಿಕಾ ಪುತ್ರಿ ಭೇಟಿಯಾಗಿ ಕ್ಷೇಮ ವಿಚಾರಿಸಿದ ಮುಕೇಶ್ ಅಂಬಾನಿ

By Suvarna News  |  First Published Sep 10, 2024, 10:58 PM IST

ಹುಟ್ಟುತ್ತಲೇ ಕೋಟಿ ಸಂಪತ್ತಿಗೆ ಒಡತಿಯಾದ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್‌ ಪುತ್ರಿಯನ್ನು ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹೊಸ ತಾಯಿ ಮಗಳ ಕ್ಷೇಮ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
 


ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಹೆಣ್ಣು ಮಗುವಿನ ಪೋಷಕರಾಗಿರುವುದು ಎಲ್ಲರಿಗೂ ಗೊತ್ತೆ ಇದೆ. ಹುಟ್ಟುತ್ತಲೇ ಕೋಟಿ ಸಂಪತ್ತಿಗೆ ಒಡತಿಯಾದ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್‌ ಪುತ್ರಿಯನ್ನು ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹೊಸ ತಾಯಿ ಮಗಳ ಕ್ಷೇಮ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ದೀಪಿಕಾ ಪಡುಕೋಣೆ ಸೆಪ್ಟೆಂಬರ್ 8 ರಂದು ಮುಂಬೈನ ಹೆಚ್‌ ಎನ್‌ ರಿಲಯನ್ಸ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಣೇಶ ಹಬ್ಬದ ಮರುದಿನವೇ ಮನೆಗೆ ಆಗಮಿಸಿದ ಗೌರಿಯನ್ನು ಸ್ವಾಗತಿಸುತ್ತಾ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದರು. 'ಹೆಣ್ಣು ಮಗುವಿಗೆ ಸ್ವಾಗತ 8.9.2024, ರಣ್ವೀರ್ & ದೀಪಿಕಾ ಎಂದು ಬರೆದಿದ್ದ ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ತಮ್ಮದೇ ಮಾಲೀಕತ್ವದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ ಅವರನ್ನು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದಾರೆ. ಮುಕೇಶ್ ಅಂಬಾನಿ ಅವರ ಈ ನಡೆ ಅಂಬಾನಿ ಕುಟುಂಬದ ಜೊತೆ ರಣ್ವೀರ್ ಹಾಗೂ ದೀಪಿಕಾ ಕುಟುಂಬ ಹೊಂದಿರುವ ಬಾಂಧವ್ಯವನ್ನು ತೋರಿಸುತ್ತದೆ. 

Tap to resize

Latest Videos

undefined

ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್‌ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರು ಫೆಬ್ರವರಿ 2024ರಲ್ಲಿ ಪ್ರಗ್ನೆನ್ಸಿ ವಿಚಾರವನ್ನು ಘೋಷಣೆ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ತಮ್ಮ ಮನೆಗೆ ಖುಷಿಯ ಮೂಟೆಯೊಂದು ಬರುವುದೆಂದು ಈ ಜೋಡಿ ಹೇಳಿಕೊಂಡಿದ್ದರು. ಅದರಂತೆ ಸೆಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ದೀಪಿಕಾ ಹಾಗೂ ರಣ್ವೀರ್ ಸಿಂಗ್ 2018ರ ನವಂಬರ್‌ 14 ರಂದು  ಇಟಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಬಾಲಿವುಡ್‌ನ ಫೇವರೇಟ್ ಜೋಡಿಯಾಗಿರುವ ಇವರ ಲವ್‌ ಸ್ಟೋರಿ ಸಂಜಯ್ ಲೀಲಾ ಬನ್ಸಾಲಿ ಅವರ ರೋಮ್ಯಾಂಟಿಕ್ ಡ್ರಾಮಾ ಗೋಲಿಯೋಂಕಿ ರಾಸಲೀಲಾದ ಸೆಟ್‌ನಿಂದ ಶುರುವಾಗಿತ್ತು. ಈ ಸಿನಿಮಾವೂ ಅವರಿಗೆ ಆನ್ ಸ್ಕ್ರೀನ್ ಸೂಪರ್‌ ಜೋಡಿ ಎಂಬ ಪ್ರಸಿದ್ಧಿ ತಂದುಕೊಟ್ಟಿದ್ದಲ್ಲದೇ ಬನ್ಸಾಲಿಯವರ ಇತರ ಬ್ಲಾಕ್‌ಬಸ್ಟರ್‌ ಸಿನಿಮಾಗಳಾದ ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್‌ನಲ್ಲಿಯೂ ಒಟ್ಟಿಗೆ ನಟಿಸುವ ಅವಕಾಶ ನೀಡಿತ್ತು.

ಈ ಜೋಡಿಯ ಮುಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ ದೀಪಿಕಾ ಪಡುಕೋಣೆ ರೋಹಿತ್ ಶೆಟ್ಟಿಯವರ ಬಹು ನಿರೀಕ್ಷಿತ ಸಿಂಗಮ್ ಎಗೇನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪತಿ ರಣವೀರ್ ಸಿಂಗ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ರಣ್ವೀರ್‌ ಸಿಂಗ್, ಆದಿತ್ಯ ಧರ್ ಅವರ ಮಿಲಿಟರಿ ಆಕ್ಷನ್ ಸಿನಿಮಾ ಮತ್ತು ಫರ್ಹಾನ್ ಅಖ್ತರ್ ಅವರ ಕ್ರೈಂ ಡ್ರಾಮಾ ಡಾನ್ 3 ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಹುಟ್ಟುತ್ತಲೇ ಕೋಟಿಯೊಡತಿಯಾಗಿರುವ ದೀಪಿಕಾ
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಟ್ಟು ಆಸ್ತಿ 745 ಕೋಟಿ ರೂ ಇದೆ. ಹೀಗಾಗಿ ಈಗಷ್ಟೇ ಜಗತ್ತಿಗೆ ಕಾಲಿರಿಸಿರುವ ಮುದ್ದು ಮಗಳು ಕೋಟಿಗಳ ಒಡತಿಯಾಗಿದ್ದಾಳೆ. ಮಗಳಿಗಾಗಿಯೇ ಇತ್ತೀಚಿಗಷ್ಟೇ ದೀಪಿಕಾ ದಂಪತಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದು, ಮನೆಯ ನಿರ್ಮಾಣ ಹಾಗೂ ಇಂಟೀರಿಯರ್ ಕೆಲಸ ಕೂಡ ಪೂರ್ಣಗೊಂಡಿದೆ. ದೀಪಿಕಾ ರಣವೀರ್ ದಂಪತಿ ತಮ್ಮ ಹೊಸ ಮನೆಗೆ ಮಗಳನ್ನು ಸ್ವಾಗತಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ದೀಪಿಕಾ ಮತ್ತು ರಣವೀರ್ ಹೆರಿಗೆಯ ಹಿಂದಿನ ದಿನವಾದ ಶುಕ್ರವಾರ ಸಹ ಕುಟುಂಬ ಸಿದ್ಧಿವಿನಾಯಕ ಗಣಪತಿಯ ದರ್ಶನ ಪಡೆದಿದ್ದರು. 

click me!