ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆಗಿದ್ದು ನಿಜನಾ? ಕೊನೆಗೂ ಮೌನ ಮುರಿದ ಮಲೈಕಾ ಅರೋರಾ ಹೇಳಿದ್ದೇನು?
ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಇವರಿಬ್ಬರೂ ಯಾರಿಗೂ ಡೋಂಟ್ಕೇರ್ ಎನ್ನದೇ ಜೀವನ ನಡೆಸುತ್ತಿದ್ದಾರೆ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮಲೈಕಾ ಜೊತೆ ಟ್ರಿಪ್ಗೆ ಹೋಗುತ್ತಿದ್ದ ಅರ್ಜುನ್ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿದೆ.
ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮಲೈಕಾ ಜೊತೆ ಟ್ರಿಪ್ಗೆ ಹೋಗುತ್ತಿದ್ದ ಅರ್ಜುನ್ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿದೆ. ಅದೇ ಇನ್ನೊಂದೆಡೆ, ಕೆಲವು ದಿನಗಳಿಂದ ನಟಿ ಕುಶಾ ಕಪಿಲಾ ಅವರ ಹೆಸರು ಅರ್ಜುನ್ ಕಪೂರ್ ಜತೆ ಥಳುಕು ಹಾಕಿಕೊಂಡಿದೆ. ಕುಶಾ ಜೊತೆ ಅರ್ಜುನ್ ಕಪೂರ್ (Arjun Kapoor) ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗ ಚಿಕ್ಕ ವಯಸ್ಸಿನ ಕುಶಿ ಜೊತೆ ಹೆಸರು ಕೇಳಿಬರುತ್ತಿದ್ದಂತೆಯೇ ಅವರಿಬ್ಬರ ಸುದ್ದಿ ಸಕತ್ ಕೇಳಿಬರುತ್ತಿದೆ. ಅಷ್ಟಕ್ಕೂ ಇವರಿಬ್ಬರ ಹೆಸರು ಥಳಕು ಹಾಕಲು ಕಾರಣ ಏನೆಂದರೆ, ಈ ಹಿಂದೆ, ಅರ್ಜುನ್ ಕಪೂರ್ ಮತ್ತು ಕುಶಾ ಕಪಿಲಾ ನಿರ್ದೇಶಕ ಕರಣ್ ಜೋಹರ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಲ್ಲಿ ಮಲೈಕಾ ಅರೋರಾ ಬಂದಿರಲಿಲ್ಲ. ಅಷ್ಟೇ ಅಲ್ಲದೇ, ಅರ್ಜುನ ಕಪೂರ್ ಸೋಲೋ ಟ್ರಿಪ್ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸಿ ಈ ರೂಮರ್ಸ್ ಹರಡಲಾಗುತ್ತಿದೆ.
ಕೈಕೊಟ್ಟ ಐಶ್ವರ್ಯ ರೈ, ಮಾಜಿ ಪ್ರೇಮಿ ಸಲ್ಮಾನ್‌ರಿಂದ ಬೆದರಿಕೆ! ನೋವು ತೋಡಿಕೊಂಡ ವಿವೇಕ್ ಓಬಿರಾಯ್
ಈ ನಡುವೆಯೇ, ಮಲೈಕಾ, ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ವದಂತಿಗಳ ನಡುವೆ ಕಪೂರ್ ಫ್ಯಾಮಿಲಿಯ ಸದಸ್ಯರನ್ನು ಸಾಮಾಜಿಕ ಜಾಲತಾಣದಿಂದ ಅನ್ಫಾಲೋ ಮಾಡಿದ್ದರು. ಮಲೈಕಾ ಅವರ ಪೋಸ್ಟ್‌ನ ಸ್ಕ್ರೀನ್‌ಗ್ರಾಬ್, ಸ್ಟ್ರಾಂಗ್ ಎಂಬ ಉಲ್ಲೇಖವನ್ನು ಒಳಗೊಂಡಿತ್ತು, ಇದನ್ನು ರೆಡ್ಡಿಟ್ ಥ್ರೆಡ್‌ನಲ್ಲಿ (reddit thread) ಹಂಚಿಕೊಳ್ಳಲಾಗಿತ್ತು. ಇದರಲ್ಲಿ ಮಲೈಕಾ ಅವರು, ಅರ್ಜುನ್ ಕಪೂರ್ ಸಹೋದರಿಯರಾದ ಜಾನ್ವಿ ಕಪೂರ್, ಅಂಶುಲಾ ಕಪೂರ್ ಮತ್ತು ಖುಷಿ ಕಪೂರ್ ಅವರನ್ನು ಅನ್ಫಾಲೋ ಮಾಡಿದ್ದಾರೆ. ಆದರೆ ಕುತೂಹಲ ಎಂದರೆ ಅರ್ಜುನ್ ಕಪೂರ್ ಅವರನ್ನು ಇನ್ನೂ ಫಾಲೋ ಮಾಡುತ್ತಿದ್ದಾರೆ.
ಆದರೆ ಇದೇ ಮೊದಲ ಬಾರಿಗೆ ಬ್ರೇಕಪ್ ಕುರಿತು ನಟಿ ಮಲೈಕಾ ಮೌನ ಮುರಿದಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಲೈಕಾ ಅರೋರಾ ಅರ್ಜುನ್ ಕಪೂರ್ ಜೊತೆಗಿನ ಬ್ರೇಕ್ ಅಪ್ ಕುರಿತು ಮಾತನಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಅವರು, 'ನಾನು ಈಗ ನನ್ನ ವೈಯಕ್ತಿಕ ವಿಷಯಗಳನ್ನು ಚರ್ಚಿಸಲು ಬಯಸುವುದಿಲ್ಲ. ನಾನು ಏನು ಹೇಳಬೇಕೋ ಅದನ್ನೆಲ್ಲಾ ಹೇಳಿಯಾಗಿದೆ. ಈಗ ಪುನಃ ಏನನ್ನೂ ಸ್ಪಷ್ಟಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಅವರು ಈ ಹಿಂದೆ ಪೋಸ್ಟ್ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಬ್ರೇಕಪ್ ವದಂತಿಗೆ ತೆರೆ ಎಳೆದಿದ್ದರು. ಅದೇನೆಂದರೆ, ಅರ್ಜುನ್ ಅವರು ಮಲೈಕಾ ಅವರ ಹುಟ್ಟುಹಬ್ಬದಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದರು. ಈ ರೋಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡು ಅದರಲ್ಲಿ ಅವರು, 'ಹ್ಯಾಪಿ ಬರ್ತ್‌ಡೇ ಬೇಬಿ !!! ಈ ಚಿತ್ರವು ನಮ್ಮದು, ನೀನು ನಗು, ಸಂತೋಷ, ಬೆಳಕನ್ನು ತರುತ್ತಾ ಇರು, ನಾನು ನಿನ್ನ ಬೆಂಬಲಕ್ಕೆ ಇರುತ್ತೇನೆ ಎಂದಿದ್ದರು. ಅದಕ್ಕೆ ಮಲೈಕಾ ಅವರು ಹಾರ್ಟ್ ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದರು.
ಚೈಯ್ಯ ಚೈಯ್ಯಾ ಡ್ಯಾನ್ಸ್ ಮಾಡಿದ್ದ ರೈಲಿಗೆ ಇಂದು 115ನೇ ಹುಟ್ಟುಹಬ್ಬ! ಶೂಟಿಂಗ್ ಹಿಂದಿದೆ ರೋಚಕ ಕಥೆ