ಶೋ ದಲ್ಲಿ ಮಲೈಕಾ ' ನನ್ನನ್ನು ಮದುವೆಯಾಗಲು, ನನಗಾಗಿಯೇ ಯಾರಾದರೂ 100% ಸಿದ್ಧವಾಗಿದ್ದರೆ, ಖಂಡಿತ ಮದುವೆ ಆಗುತ್ತೇನೆ' ಎಂದಿದ್ದಾರೆ. ಆಗ ಫರಾಹ್ 'ತುಂಬಾ ಮಂದಿ ಇದ್ದಾರೆ' ಎಂದಿದ್ದಾರೆ.
ಬಾಲಿವುಡ್ (Bollywood)ಜೋಡಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಮತ್ತೊಮ್ಮೆ ಸುದ್ದಿಗೆ ಬಿದ್ದಿದ್ದಾರೆ. ಅವರಿಬ್ಬರೂ 2019 ರಿಂದಲೂ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ. ಅವರಿಬ್ಬರೂ ಅಂದಿನಿಂದಲೂ ಸಾಕಷ್ಟು ಅನ್ಯೋನ್ಯವಾಗಿಯೇ ಇದ್ದಾರೆ. ನಟ ಅರ್ಬಾಜ್ ಖಾನ್ ಜತೆ ಡಿವೋರ್ಸ್ ಆದ ಬಳಿಕ ಮಲೈಕಾ ಅರೋರಾ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದರು. ಆದರೆ, ಮಲೈಕಾ ಬಾಳಿನಲ್ಲಿ ಲವರ್ ಆಗಿ ಅರ್ಜುನ್ ಬಂದ ತಕ್ಷಣ ಮನಸ್ಸು ಬದಲಾಯಿಸಿದ ಆಕೆ, ಅರ್ಜುನ್ ಜತೆ ಸಹಬಾಳ್ವೆ ಮಾಡತೊಡಗಿದ್ದಾರೆ.
ಆದರೆ, ಇತ್ತೀಚೆಗೆ ಮಲೈಕಾ ಅರೋರಾ (Malaika Arora)ಹಾಗು ಅರ್ಜುನ್ ಕಪೂರ್ (Arjun Kapoor)ಮಧ್ಯೆ ಬ್ರೇಕಪ್ ಆಗಿದೆ ಎಂಬ ವದಂತಿ ಹಬ್ಬತೊಡಗಿದೆ. ಇದಕ್ಕೆ ಕಾರಣವಾದದ್ದು ಒಂದು ಟಿವಿ ರಿಯಾಲಿಟಿ ಶೋ. ಹಿಂದಿ ಟೆಲಿವಿಷನ್‌ನಲ್ಲಿ ಪ್ರಸಾರ ಕಾಣುತ್ತಿರುವ 'ಝಲಕ್ ದಿಖಲಾ ಜಾ' ಶೋದಲ್ಲಿ ಮಲೈಕಾ ಅರೋರಾ ಹಾಗೂ ಫರಾಹ್ ಖಾನ್ ಇಬ್ಬರೂ ನಿರ್ಣಾಯಕರಾಗಿ ಅಕ್ಕಪಕ್ಕ ಕುಳಿತಿರುತ್ತಾರೆ. ಈ ವೇಳೆ ಫರಾಹ್ 'ನಿಮ್ಮ ಮದುವೆಯ ಪ್ಲಾನ್ ಏನಿದೆ' ಎಂದು ಮಲೈಕಾಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಮಲೈಕಾ ಹೇಳಿರುವ ಮಾತೇ ಈಗ ಅರ್ಜುಣ್-ಮಲೈಕಾ ಬ್ರೇಕ್-ಅಪ್ ಸುದ್ದಿಗೆ ಕಾರಣವಾಗಿದೆ.
ದೇವರ ರೂಪದಲ್ಲಿ ಕನ್ನಡಕ್ಕೆ ಬರುತ್ತಿರುವ ಜ್ಯೂನಿಯರ್ ಎನ್‌ಟಿಆರ್; ಜಾನ್ವಿ ಕಪೂರ್ ಬರುತ್ತಿಲ್ವಾ!?
ಶೋ ದಲ್ಲಿ ಮಲೈಕಾ ' ನನ್ನನ್ನು ಮದುವೆಯಾಗಲು, ನನಗಾಗಿಯೇ ಯಾರಾದರೂ 100% ಸಿದ್ಧವಾಗಿದ್ದರೆ, ಖಂಡಿತ ಮದುವೆ ಆಗುತ್ತೇನೆ' ಎಂದಿದ್ದಾರೆ. ಆಗ ಫರಾಹ್ 'ತುಂಬಾ ಮಂದಿ ಇದ್ದಾರೆ' ಎನ್ನಲು ಮಲೈಕಾ 'ಹಾಗಲ್ಲ, ನಾನು ಹೇಳಿದ್ದು ಯಾರಾದರೂ ಬಂದು ನನ್ನನ್ನು ಮದುವೆ ಆಗುವುದಾಗಿ ಬಾಯ್ಬಿಟ್ಟು ಹೇಳಿದರೆ' ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಫರಾಹ್ 'ಯಾರಾದರೂ ಕೇಳಿದ್ರೆ ನೀನು ಯೆಸ್ ಅಂತ ಒಪ್ಪಿಕೊಂಡುಬಿಡ್ತೀಯಾ' ಎಂದು ಕಾಲೆಳೆದಿದ್ದಾರೆ. ಅದಕ್ಕೆ ಮಲೈಕಾ ಉತ್ತರ ಕೊಡದೇ ಜಾಣತನ ಮೆರೆದಿದ್ದಾರೆ.
ಮಹಿಳಾ ಜೇಮ್ಸ್ ಬಾಂಡ್ ಆಗಿ ನಟಿಸಲು ಬಯಸುತ್ತೇನೆ; ಪ್ರಿಯಾಂಕಾ ಹೇಳಿದ್ದೇ ತಡ, ಲಡ್ಡು ಬಂದು ಬಾಯಿಗೆ ಬಿತ್ತಾ!
ಆದರೆ ಸತ್ಯ ಸಂಗತಿ ಫರಾಹ್ ಅವರಿಗೆ ಗೊತ್ತು. ಅರ್ಜುನ್ ಕಪೂರ್ ಇತ್ತೀಚೆಗೆ ಕುಶಾ ಕಪಿಲಾ ಎಂಬ ನಟಿಯ ಜತೆ ಸಂಬಂಧ ಶುರು ಮಾಡಿಕೊಂಡಿದ್ದಾರೆ. ಈ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. 2019ರಿಂದ ಮಲೈಕಾ ಜತೆಯೇ ಸುತ್ತಾಡುತ್ತಿದ್ದ ಅರ್ಜುನ್ ಇತ್ತೀಚೆಗಷ್ಟೇ ನಟಿಯಾಗಿ ಬದಲಾಗಿರುವ ಸೋಷಿಯಲ್ ಮೀಡಿಯಾ ಸೆಲೆಬ್ರೆಟಿ ಕುಶಾ ಕಪಿಲಾ (Kusha Kapila)ಜತೆ ಈಗ ಸುತ್ತಾಡತೊಡಗಿದ್ದಾರೆ. ಅವರಿಬ್ಬರೂ ಈಗ 'ಮೇಡ್ ಫಾರ್ ಈಚ್ ಅದರ್' ಎಂಬಂತೆ ಆಡುತ್ತಿದ್ದು, ಮಲೈಕಾ ಅರೋರಾಗೆ ಅದೀಗ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಮಲೈಕಾ ಬದಲಾವಣೆಗೆ ಒಪ್ಪಿಕೊಳ್ಳಲೇಬೇಕಾಗಿದೆ.
ಕಮಲ್ ಹಾಸನ್ ಬಗ್ಗೆ ನಟಿ ಶ್ರುತಿ ಹಾಸನ್ ಹೀಗಾ ಹೇಳೋದು; ತಪ್ಪೇನಿದೆ ಅಂತಿದಾರಲ್ಲ ನೆಟ್ಟಿಗರು!