ತುಂಡು ಬಟ್ಟೆಯಿಂದಲೇ ಫೇಮಸ್ ಆಗಿರೋ ನಟಿಯ ಇನ್ನೊಂದು ರೂಪ ನೋಡಿ ನೆಟ್ಟಿಗರು ಭಾವುಕರಾಗಿದ್ದು, ನಟಿಯನ್ನು ಶ್ಲಾಘಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ ಅರೆಬರೆ ಡ್ರೆಸ್ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.
ಇದು ನಟಿಯ ಒಂದು ರೂಪ ಮಾತ್ರ. ಆದರೆ ಈಕೆಗೆ ಇನ್ನೊಂದು ರೂಪವೂ ಇದೆ. ಅದರ ವಿಡಿಯೋ ವೈರಲ್ ಆಗಿದ್ದು, ಈಕೆಯನ್ನು ಟ್ರೋಲ್ ಮಾಡುವವರೂ ಭಾವುಕರಾಗಿದ್ದಾರೆ. ಉರ್ಫಿಯ ಗುಣಗಾನ ಮಾಡುತ್ತಿದ್ದಾರೆ. ನಿಮ್ಮ ಬಗ್ಗೆ ಇದ್ದ ಕೆಟ್ಟ ಭಾವನೆಯೆಲ್ಲವೂ ಹೋಗಿ ಬಿಟ್ಟಿತು. ನೀವೊಬ್ಬರು ನಿಜವಾದ ನಾಯಕಿ, ದುಡ್ಡಿಗಾಗಿ ಬೆತ್ತಲಾಗುವವರು ನಿಮ್ಮನ್ನು ನೋಡಿ ಕಲಿಯಬೇಕು ಎಂದೆಲ್ಲಾ ಗುಣಗಾನ ಮಾಡುತ್ತಿದ್ದಾರೆ. ಅಷ್ಟಕ್ಕೂ ಟ್ರೋಲಿಗರು ದಿಢೀರ್ ಬದಲಾದದ್ದು ಯಾಕೆ ಎಂದು ಅಚ್ಚರಿಯಾಗಿರಬೇಕಲ್ಲವೆ?
ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ ನಟಿ ಜಯಪ್ರದಾ! ಎಲ್ಲೆಡೆ ಭಾರಿ ಶೋಧ- ಆಗಿದ್ದೇನು?
ಅದಕ್ಕೆ ಕಾರಣ ಇಲ್ಲಿರುವ ವೈರಲ್ ವಿಡಿಯೋ. ಈ ವಿಡಿಯೋದಲ್ಲಿ ಉರ್ಫಿ ಹೋಟೆಲ್ ಪರಿಚಾರಿಕೆಯಾಗಿದ್ದಾರೆ. ಹೋಟೆಲ್ ಒಂದರಲ್ಲಿ ದುಡಿದಿದ್ದಾರೆ. ದುಡ್ಡು ಸಂಪಾದನೆ ಮಾಡಿದ್ದಾರೆ. ಅಷ್ಟಕ್ಕೂ ಇದೂ ಒಂದು ಆಕೆಯ ಹುಚ್ಚುತನದ ಇನ್ನೊಂದು ರೂಪ, ಪ್ರಚಾರದ ಗೀಳು, ಶೂಟಿಂಗ್ ಪ್ಲ್ಯಾನ್ ಎಂದುಕೊಂಡರೆ ಅದು ಶುದ್ಧ ತಪ್ಪು. ಇಲ್ಲಿ ಉರ್ಫಿ ಹೋಟೆಲ್ ಸರ್ವರ್ ಆಗಿ ಕೆಲಸ ಮಾಡುತ್ತಿರುವುದು ಪ್ರಚಾರಕ್ಕಾಗಿಯೂ ಅಲ್ಲ, ಅಥವಾ ಮಾಮೂಲಿನಂತೆ ಹುಚ್ಚುಹುಚ್ಚಾಗಿ ಆಡುತ್ತಲೂ ಇಲ್ಲ. ಬದಲಿಗೆ ಇಲ್ಲಿ ಈಕೆ ಸಂಪಾದನೆ ಮಾಡುತ್ತಿದ್ದಾರೆ. ಈ ಸಂಪಾದನೆಯ ಹಣವನ್ನು ಕ್ಯಾನ್ಸರ್ ಪೇಷೆಂಟ್ ಸಹಾಯಾರ್ಥ ಇರುವ ಸಂಘಕ್ಕೆ ನೀಡುತ್ತಿದ್ದಾರೆ.
ಉರ್ಫಿ ಇಲ್ಲಿ ಪರಿಚಾರಿಕೆಯಾಗಿ ದುಡಿದು ಬಂದ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುತ್ತಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಲೇ ನಟಿಯ ಬಗ್ಗೆ ಟ್ರೋಲಿಗರಿಗೆ ಇದ್ದ ಭಾವನೆ ಬದಲಾಗಿದೆ. ದುಡ್ಡಿಗಾಗಿ ಬೆತ್ತಲಾಗುವವರ ಮುಂದೆ ನಿನಗಿದೋ ಸಲಾಂ ಎಂದು ಉರ್ಫಿಯನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಕೆಲವರುಮಾತ್ರ ಇಲ್ಲಿಯೂ ಉರ್ಫಿಯ ಕಾಲೆಳೆಯುವುದನ್ನು ಬಿಟ್ಟಿಲ್ಲ. ಫುಲ್ ಡ್ರೆಸ್ ನಿನಗೆ ಚೆನ್ನಾಗಿ ಕಾಣಿಸಲ್ಲ ಎಂದು ಕೆಲವರು ಹೇಳಿದರೆ, ಇಲ್ಲಿರುವವರೆಲ್ಲರೂ ಫೇಕ್ ಕಸ್ಟಮರ್ಸ್ ಎನ್ನುತ್ತಿದ್ದಾರೆ. ಶೂಟಿಂಗ್ ಸೆಟ್ ರೆಡಿ ಮಾಡಿಕೊಂಡು ಶೂಟಿಂಗ್ ಮಾಡಿಸಿದ್ಯಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಅನಿಮಲ್ ನಟ ರಣಬೀರ್ ಕಪೂರ್ ವಿರುದ್ಧ ದೂರು- ಅಷ್ಟಕ್ಕೂ ಆಗಿದ್ದೇನು?