
ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಸಿನಿಮಾಗಳಿಂದ ದೂರವಾಗಿದ್ದು, ಆಗಾಗ್ಗೆ ಕ್ಯಾಟ್ ವಾಕ್ ಮಾಡುತ್ತಿರುತ್ತಾರೆ. ಆದ್ರೆ ತಾವು ಖ್ಯಾತ ನಟಿ ಸೋನಂ ಕಪೂರ್ ಅವರ ಆಪ್ತ ಗೆಳತಿಯರು ಎಂದು ಹೇಳಿಕೊಳ್ಳಲು ಹುಡುಗಿಯರು ಹೆದರಿಕೊಳ್ಳುತ್ತಾರೆ. ಕಾರಣ ಸೋನಂ ಕಪೂರ್ ಸಂದರ್ಶನದಲ್ಲಿ ನೀಡಿದ ಹೇಳಿಕೆ. ಈ ಮಾತಿನಿಂದ ತಾವು ಸೋನಂ ಗೆಳತಿಯರು ಎಂದು ಹೇಳಿಕೊಳ್ಳಲು ನಟಿಯ ಸ್ನೇಹಿತೆಯರು ಹಿಂದೇಟು ಹಾಕುತ್ತಾರೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್' ಶೋನಲ್ಲಿ ಸೆಲಿಬ್ರಿಟಿಗಳ ಸಂದರ್ಶನ ನಡೆಸಿಕೊಡಲಾಗುತ್ತದೆ. ಈ ಸಂದರ್ಶನದಲ್ಲಿ ನಿರೂಪಕ ಕರಣ್ ಜೋಹರ್, ತೀರಾ ಖಾಸಗಿಯಾದ ಮತ್ತು ಅತಿರೇಕ ಅನ್ನಿಸುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಇದೇ ಶೋನಲ್ಲಿ ಒಂದು ಬಾರಿ ಸೋನಂ ಕಪೂರ್ ತನ್ನ ಸೋದರ ಅರ್ಜುನ್ ಕಪೂರ್ ಭಾಗಿಯಾಗಿದ್ದರು.
ಸಿಬ್ಲಿಂಗ್ ರೋಸ್ಟ್ ಸೆಗ್ಮೆಂಟ್‌ನಲ್ಲಿ ಸೋದರಿ ಸೋನಂ ಕಪೂರ್‌ಗೆ ನೀನು ಎಂದಾದರೂ ನನ್ನ ಸ್ನೇಹಿತರೊಂದಿಗೆ ಮಲಗಿದ್ದೀಯಾ ಎಂದು ಅರ್ಜುನ್ ಕಪೂರ್ ಕೇಳುತ್ತಾರೆ. ಇದಕ್ಕೆ ಸೋನಂ ಕಪೂರ್, ಇಲ್ಲ ಎಂದು ಹೇಳುತ್ತಾರೆ. ಇದೇ ಪ್ರಶ್ನೆಯನ್ನು ಅರ್ಜುನ್ ಕಪೂರ್‌ಗೆ ಕರಣ್ ಜೋಹರ್ ಕೇಳುತ್ತಾರೆ. ಕರಣ್ ಜೋಹರ್ ಪ್ರಶ್ನೆ ಕೇಳುತ್ತಿದ್ದಂತೆ ಇದಕ್ಕೆ ನಗುತ್ತಲೇ ಉತ್ತರಿಸಿದ ಸೋನಂ ಕಪೂರ್, ಅಫ್‌ಕೋರ್ಸ್.. ನನ್ನ ಗೆಳತಿಯರೊಂದಿಗೆ ಮಲಗಿರುತ್ತಾನೆ ಎಂದು ನನಗೆ ಗೊತ್ತು ಎಂದು ಹೇಳುತ್ತಾರೆ. ಸೋನಂ ಮಾತಿನಿಂದ ಒಂದು ಕ್ಷಣ ಕರಣ್ ಜೋಹರ್ ಮತ್ತು ಅರ್ಜುನ್ ಕಪೂರ್ ಆಘಾತಕ್ಕೊಳಗಾಗುತ್ತಾರೆ.
ಇಷ್ಟಕ್ಕೆ ಸುಮ್ಮನಾಗದ ಕರಣ್ ಜೋಹರ್ ಈ ವಿಷಯವನ್ನು ಮತ್ತಷ್ಟು ಕೆದಕುವ ಕೆಲಸ ಮಾಡುತ್ತಾರೆ. ಹಾಗಾದ್ರೆ ಎಷ್ಟು ಎಷ್ಟು ಜನರೊಂದಿಗೆ ಅರ್ಜುನ್ ಕಪೂರ್ ಮಲಗಿರಬಹುದು ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ಸೋನಂ ಕಪೂರ್, ಈ ಬಗ್ಗೆ ಸೋದರನೊಂದಿಗೆ ನಾನು ಡಿಸ್ಕಸ್ ಮಾಡಿಲ್ಲ. ಆದ್ರೆ ಯಾರೂ ಉಳಿದಿಲ್ಲ ಅನ್ನಿಸುತ್ತೆ ಅಂತಾರೆ. ಸೋದರಿ ಮಾತಿನಿಂದ ಆಘಾತಕ್ಕೊಳಗಾದ ಅರ್ಜುನ್, "ಏನು ನಿನಗೆ ಹುಚ್ಚು ಹಿಡಿದಿದ್ಯಾ? ಸೋನಮ್ ಏನು ಹೇಳುತ್ತಿದ್ದೀಯಾ?" ಎಂದು ಪ್ರಶ್ನೆ ಮಾಡುತ್ತಾರೆ. ಈ ಮೂಲಕ ತನ್ನ ಎಲ್ಲಾ ಗೆಳತಿಯರೊಂದಿಗೆ ಅರ್ಜುನ್ ಕಪೂರ್ ಸಂಬಂಧ ಹೊಂದಿರೋದನ್ನು ಹೇಳಿಕೊಂಡಿದ್ದರು. ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ಸೋನಂ ಕಪೂರ್ ಗೆಳತಿಯರೊಂದಿಗೆ ಹೇಳಿಕೊಳ್ಳಲು ನಟಿಯ ಸ್ನೇಹಿತೆಯರು ಹೇಳುತ್ತಾರೆ.
ಇದನ್ನೂ ಓದಿ: ಉದ್ದನೇಯ ಹುಡುಗಿಯರಿಗೆ ತುಂಬಾ ಸುಂದರವಾಗಿ ಕಾಣಿಸುವ 7 ಸೂಟ್ ಡಿಸೈನ್‌ಗಳು
ತನಗಿಂತ ವಯಸ್ಸಿನಲ್ಲಿ ದೊಡ್ಡವರಾದ ನಟಿ ಮಲೈಕಾ ಅರೋರಾ ಜೊತೆ ಅರ್ಜುನ್ ಕಪೂರ್ ರಿಲೇಶನ್‌ಶಿಪ್‌ನಲ್ಲಿದ್ರು. ಕೈ ಕೈ ಹಿಡಿದುಕೊಂಡು ಸುತ್ತಾಡುತ್ತಿದ್ದ ಮಲೈಕಾ ಮತ್ತು ಅರ್ಜುನ್ ಕಪೂರ್ ಮದುವೆ ಆಗ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದ್ರೆ ಇತ್ತೀಚೆಗೆ ಇಬ್ಬರು ಬ್ರೇಕಪ್ ಮಾಡಿಕೊಂಡು ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತಾನಿನ್ನು ಸಿಂಗಲ್ ಎಂದು ಅರ್ಜುನ್ ಕಪೂರ್ ಹೇಳಿಕೊಂಡಿದ್ದರು.
ಇದನ್ನೂ ಓದಿ: ಲಂಡನ್‌ನಲ್ಲಿ ಮಗ ಸೊಸೆಗಾಗಿ 231 ಕೋಟಿ ಮೊತ್ತದ ದುಬಾರಿ ಮನೆ ಖರೀದಿಸಿದ ಸೋನಂ ಕಪೂರ್ ಮಾವ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.