ಪ್ರೇಮ್ ಪ್ರತಿಜ್ಞಾ ಚಿತ್ರದ ಸಂದರ್ಭದಲ್ಲಿ ವಿಲನ್ ರಂಜೀತ್ ಜೊತೆ ಬಲವಂತದ ರೇಪ್ ಸೀನ್ ಮಾಡಿದಾಗ ನಡೆದ ಭಯಾನಕ ಕ್ಷಣಗಳನ್ನು ನಟಿ ಮಾಧುರಿ ದೀಕ್ಷಿತ್ ನೆನಪಿಸಿಕೊಂಡಿದ್ದಾರೆ.
ನಟಿ ಮಾಧುರಿ ದೀಕ್ಷಿತ್ 90 ರ ದಶಕದಲ್ಲಿ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಮನರಂಜನಾ ಉದ್ಯಮದಲ್ಲಿ ತಮ್ಮ ಬಹುಮುಖ ಅಭಿನಯದಿಂದ, ಹಾಸ್ಯದಿಂದ, ಭಾವುಕ ದೃಶ್ಯಗಳಿಂದ ಹಾಗೂ ಅಷ್ಟೇ ರೊಮ್ಯಾನ್ಸಿಂಗ್ ಸೀನ್ಗಳಿಂದ ಕೋಟ್ಯಂತರ ಜನರ ಹೃದಯ ಗೆದ್ದ ನಟಿಯೀಕೆ. ತಮ್ಮ ಸಹ-ನಟರೊಂದಿಗೆ ಕೆಲಸ ಮಾಡುವಾಗ ಕೆಲವೊಂದು ಷರತ್ತು ವಿಧಿಸಿ ಮಾಧುರಿ ನಿಷ್ಠೂರರಾಗಿದ್ದೂ ಇದೆ. ಆದಾಗ್ಯೂ, ಈಕೆ ಕೆಲವು ಸನ್ನಿವೇಶಗಳನ್ನು ಹೇಗೆ ಎದುರಿಸಬೇಕಾಯಿತು ಮತ್ತು ಅದು ಮಾಧುರಿ ಅವರನ್ನು ಹೇಗೆ ಗಾಬರಿಗೊಳಿಸಿತು ಎಂಬ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ನಟಿ ಸಂದರ್ಶನವೊಂದರಲ್ಲಿ ನುಡಿದ ಮಾತುಗಳು ಇದೀಗ ಪುನಃ ವೈರಲ್ ಆಗುತ್ತಿದೆ. ರೇಪ್ ಸೀನ್ ಒಂದರಲ್ಲಿ ತಮ್ಮನ್ನು ಹೇಗೆ ಬಲವಂತಗೊಳಿಸಲಾಯಿತು, ವಿಲನ್ ತಮ್ಮ ಮೇಲೆ ಅತ್ಯಾಚಾರ ಮಾಡುವ ದೃಶ್ಯದ ಸಂದರ್ಭದಲ್ಲಿ ತಾವು ಅನುಭವಿಸಿದ್ದ ನೋವನ್ನು ನಟಿ ತೋಡಿಕೊಂಡಿದ್ದಾರೆ.
1989ರಲ್ಲಿ ಬಿಡುಗಡೆಗೊಂಡಿದ್ದ ಪ್ರೇಮ್ ಪ್ರತಿಜ್ಞಾ ಸಿನಿಮಾದ ದೃಶ್ಯವನ್ನು ಮಾಧುರಿ ನೆನಪಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್‌ನ ಪ್ರಸಿದ್ಧ ಖಳನಾಯಕರಲ್ಲಿ ಒಬ್ಬರಾದ ರಂಜೀತ್ ಅವರು ನಾಯಕಿಯನ್ನು ರೇಪ್ ಮಾಡುವ ಸೀನ್ ಇತ್ತು. ಇದನ್ನು ಹೇಗೆ ಬಲವಂತವಾಗಿ ಶೂಟ್ ಮಾಡಲಾಯಿತು ಎನ್ನುವುದನ್ನು ನಟಿ ಹೇಳಿಕೊಂಡಿದ್ದಾರೆ. ಅತ್ಯಾಚಾರದ ದೃಶ್ಯವನ್ನು ಚಿತ್ರೀಕರಿಸಲು ತಮ್ಮನ್ನು ಹೇಗೆ ಒತ್ತಾಯಿಸಲಾಯಿತು ಎಂದು ಅವರು ಆ ದಿನಗಳ ನೆನಪಿಸಿಕೊಂಡಿದ್ದಾರೆ. ಈ ದೃಶ್ಯವನ್ನು ತಮ್ಮಿಂದ ಮಾಡಲು ಸಾಧ್ಯವೇ ಇಲ್ಲ ಎಂದಾಗ ಚಿತ್ರದ ನಿರ್ದೇಶಕರು ಆಕೆಯಿಂದ ಹಿಂದೆ ಸರಿಯಲು ಸಾಧ್ಯವೇ ಇಲ್ಲ ಎಂದು ಬಲವಂತ ಮಾಡಿದರಂತೆ. ಆ ಸೀನ್ ಮಾಡಲು ನನಗೆ ಇಷ್ಟವಿರಲಿಲ್ಲ. ಮೈಯೆಲ್ಲಾ ನಡುಗುತ್ತಿತ್ತು. ಮೈಯೆಲ್ಲಾ ಬೆವರುತ್ತಿತ್ತು. ಆದರೆ ದೃಶ್ಯವನ್ನು ಮಾಡದೇ ವಿಧಿಯಿರಲಿಲ್ಲ. ಏಕೆಂದರೆ ನಿರ್ದೇಶಕರು ನನ್ನನ್ನು ಬಲವಂತ ಮಾಡಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ.
ಶೂಟಿಂಗ್ ವೇಳೆ ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ! ಸಂಕಟ ತಂದ ಆ ದಿನ ನೆನೆದ ನಿರ್ಮಾಪಕ
ರಂಜೀತ್ (Ranjeeth) ಮಾಧುರಿಯವರನ್ನು ಈ ಸೀನ್ನಲ್ಲಿ ನಡುಗಿಯೇಬಿಟ್ಟಿದ್ದರಂತೆ. ರೇಪ್ ಸೀನ್ ಬಳಿಕ ಅವರು ಹಿಡಿತವನ್ನು ಬಿಗಿಗೊಳಿಸಿದ್ದ ನಂತರ ನಾನು ಅಕ್ಷರಶಃ ನಲುಗಿ ಹೋಗಿದ್ದೆ ಎಂದಿದ್ದಾರೆ ಮಾಧುರಿ. ಈ ದೃಶ್ಯದ ಸಂದರ್ಭದಲ್ಲಿ ಅವರು ತಮ್ಮ ಹಿಡಿತವನ್ನು ಸಡಿಲಿಸಲು ನಿರಾಕರಿಸಿದ್ದರು. ಎಷ್ಟೇ ಹೇಳಿದರೂ ಬಲವಾಗಿ ಹಿಡಿದುಕೊಂಡಿದ್ದರು. ಇದರಿಂದ ನಾನು ಕೋಪಗೊಂಡಿದ್ದೆ. ಎಲ್ಲರ ಮುಂದೆ ಜೋರಾಗಿ ಕೂಗಿದೆ. ನನ್ನನ್ನು ಮುಟ್ಟಬೇಡ ಎಂದು ಕಿರುಚಿದೆ ಎಂದು ಆ ದಿನಗಳ ನೆನಪಿಸಿಕೊಂಡಿದ್ದಾರೆ. ಅಂದಹಾಗೆ ಪ್ರೇಮ್ ಪ್ರತಿಜ್ಞಾ ಚಿತ್ರದಲ್ಲಿ ಮಾಧುರಿ, ಮಿಥುನ್ ಚಕ್ರವರ್ತಿ ಮತ್ತು ವಿನೋದ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
1989ರಲ್ಲಿಯೇ ಬಿಡುಗಡೆಯಾಗಿದ್ದ ಶನಾಖ್ತ್ ಚಿತ್ರದ ಸಂದರ್ಭದಲ್ಲಿ ನಿರ್ದೇಶಕ ಟಿನ್ನು ಆನಂದ್ ಅವರು ಹೇಗೆ ಒತ್ತಾಯಪೂರ್ವಕವಾಗಿ ತಮ್ಮ ರವಿಕೆಯನ್ನು ಕಳಚಿ ಬ್ರಾ ಮೇಲೆ ಶೂಟಿಂಗ್ ಮಾಡುವಂತೆ ಹೇಳಿದ್ದರು ಎನ್ನುವುದನ್ನೂ ನಟಿ ಮಾಧುರಿ ಈ ಹಿಂದೆ ಹೇಳಿದ್ದರು. ತಾವು ನಿರಾಕರಿಸಿದ್ದಾಗ ತಮಗೆ ಆಗಿದ್ದ ಕಹಿ ಅನುಭವ ಬಿಚ್ಚಿಟ್ಟಿದ್ದರು.
87ನೇ ವಯಸ್ಸಲ್ಲಿ ಲಿಪ್ಲಾಕ್ನಿಂದ ಹಲ್ಚಲ್ ಸೃಷ್ಟಿಸಿದ ಧರ್ಮೇಂದ್ರ ಚಿಕಿತ್ಸೆಗೆ ಅಮೆರಿಕಕ್ಕೆ: ಆಗಿದ್ದೇನು?