ಶೂಟಿಂಗ್ ವೇಳೆ ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ! ಸಂಕಟ ತಂದ ಆ ದಿನ ನೆನೆದ ನಿರ್ಮಾಪಕ
ಶನಾಖ್ತ್ ಚಿತ್ರದ ಸಂದರ್ಭದಲ್ಲಿ ನಟಿ ಮಾಧುರಿ ದೀಕ್ಷಿತ್ ಬ್ರಾ ಧರಿಸಿ ಶೂಟಿಂಗ್ ಮಾಡಲು ಹೇಗೆ ನಿರಾಕರಿಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ ನಿರ್ಮಾಪಕ ಟಿನ್ನು ಆನಂದ್
1980ರ ದಶಕದಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ಕೆಲವು ಜನಪ್ರಿಯ ಚಲನಚಿತ್ರಗಳಾದ ಕಾಲಿಯಾ ಮತ್ತು ಶಾಹೆನ್‌ಶಾ ಅವರನ್ನು ನಿರ್ಮಿಸಿದ ನಿರ್ಮಾಪಕ ಟಿನ್ನು ಆನಂದ್ (Tinnu Anand) ಅವರು ಅಮಿತಾಭ್ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಅವರನ್ನು ಒಟ್ಟಿಗೇ ತೆರೆಯ ಮೇಲೆ ತರುವ ಪ್ಲ್ಯಾನ್ ಮಾಡಿದ್ದರು. 1989ರಲ್ಲಿ ಅವರ ಈ ಕನಸು ನನಸಾಗಿತ್ತು. ಆ ಚಿತ್ರವೇ ಶನಾಖ್ತ್ (ಗುರುತಿಸುವಿಕೆ). ಮಿಲಿಟರಿ ಅಧಿಕಾರಿಯ ವಿಮಾನವು ಸರೋವರದಲ್ಲಿ ಅಪಘಾತಕ್ಕೀಡಾಗುತ್ತದೆ, ಅವನ ಜೀವ ಉಳಿದರೂ ಸ್ಮರಣೆ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತನ ಶುಶ್ರೂಷೆ ಮಾಡುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಆ ವೇಳೆ ತೇಜಾಬ್ ಮತ್ತು ರಾಮ್ ಲಖನ್ದಂಥ ಬ್ಲಾಕ್ಬಸ್ಟರ್ ಸಿನಿಮಾ ನೀಡಿದ್ದರು ಮಾಧುರಿ ದೀಕ್ಷಿತ್. ಅಮಿತಾಭ್ ಆಗಲೇ ಸ್ಟಾರ್ ನಟರಾಗಿದ್ದರು. ಆದರೆ ಅಮಿತಾಭ್ ಮತ್ತು ಮಾಧುರಿ ಜೋಡಿ ಒಟ್ಟಿಗೇ ನಟಿಸಿರಲಿಲ್ಲ. ಆದ್ದರಿಂದ ಇವರಿಬ್ಬರನ್ನು ಸಹಿ ಹಾಕಿಸಿಕೊಂಡಿದ್ದರು ನಿರ್ಮಾಪಕ ಟಿನ್ನು ಆನಂದ್.
ಈ ಚಿತ್ರದ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ, ನಿರ್ಮಾಪಕ ಟಿನ್ನು ಆನಂದ್ ಅವರು ಮಾಧುರಿ ದೀಕ್ಷಿತ್ (Madhuri Dixit) ಅವರ ಜೊತೆಗಿನ ಜಗಳದ ಕುರಿತು, ಬಟ್ಟೆಯ ಬಗ್ಗೆ ಮಾಧುರಿ ಮತ್ತು ತಮ್ಮ ನಡುವೆ ನಡೆದ ಮಾತಿನ ಚಕಮಕಿ ಕುರಿತು ಮಾತನಾಡಿದ್ದಾರೆ. ಮಾಧುರಿ ದೀಕ್ಷಿತ್ ತಮ್ಮ ರವಿಕೆಯನ್ನು ಕಳಚಿ ಬ್ರಾ ಮೇಲೆ ಶೂಟಿಂಗ್ ಮಾಡುವ ಸೀನ್ನಲ್ಲಿ ಉಂಟಾದ ವಿವಾದದ ಕುರಿತು ಹೇಳಿದ್ದಾರೆ. ಈ ಚಿತ್ರದಲ್ಲಿ ಚಿತ್ರದ ನಾಯಕ ಅಮಿತಾಭ್ (Amitabh Bachchan) ಅವರನ್ನು ಸರಪಳಿಯಲ್ಲಿ ಬಂಧಿಸುವ ಸನ್ನಿವೇಶ ಬರುತ್ತದೆ. ವಿಲನ್ಗಳು ಇವರನ್ನು ಸರಪಳಿಯಲ್ಲಿ ಕಟ್ಟಿರುತ್ತಾರೆ. ಈ ಸಮಯದಲ್ಲಿ ಗೂಂಡಾಗಳ ಕೈಯಿಂದ ನಾಯಕಿ ಮಾಧುರಿ ದೀಕ್ಷಿತ್ ಅವರನ್ನು ರಕ್ಷಿಸಲು ನಾಯಕ ಪ್ರಯತ್ನಿಸುತ್ತಾನೆಯಾದರೂ ಅದು ಸಾಧ್ಯವಾಗುವುದಿಲ್ಲ. ಆಗ ನಾಯಕಿ, ಮಹಿಳೆಯೊಬ್ಬರು ನಿಮ್ಮ ಮುಂದೆ ನಿಂತಿರುವಾಗ ನೀವು ಸರಪಳಿಯಲ್ಲಿ ಪುರುಷನ ಮೇಲೆ ಏಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ಆ ಸಂದರ್ಭದಲ್ಲಿ ನಾಯಕನನ್ನು ರಕ್ಷಿಸಲು ತನ್ನ ಬ್ಲೌಸ್ ಕಳಚಿ ಬ್ರಾದಲ್ಲಿಯೇ ನಿಲ್ಲುವ ದೃಶ್ಯ ಬರುತ್ತದೆ. ದೃಶ್ಯವು ಹೀಗೆ ಇರಲಿದೆ, ಕ್ಯಾಮೆರಾ ಮುಂದೆ ನಾಯಕಿ ಬ್ರಾ ಧರಿಸಿ ನಿಲ್ಲುವ ಸನ್ನಿವೇಶ ಬರುತ್ತದೆ ಎಂಬ ಬಗ್ಗೆ ನಿರ್ಮಾಪಕರು ಮಾಧುರಿ ಅವರಿಗೆ ಮೊದಲೇ ಹೇಳಿದ್ದರಂತೆ. ಈ ಕುರಿತು ಟಿನ್ನು ಆನಂದ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆಕೆ ಸಹಿ ಹಾಕುವ ಮೊದಲೇ ಎಲ್ಲವನ್ನೂ ವಿವರಿಸಿದ್ದೆ ಎಂದಿದ್ದಾರೆ.
ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ?
'ನಾನು ಈ ಬಗ್ಗೆ ಮಾಧುರಿಗೆ ಮುಂಚಿತವಾಗಿಯೇ ಹೇಳಿದ್ದೆ. ನೀನು ಸಂಪೂರ್ಣವಾಗಿ ಬ್ರಾ ಧರಿಸಿ ಕ್ಯಾಮೆರಾದ ಮುಂದೆ ನಿಲ್ಲಬೇಕಾಗುತ್ತದೆ. ರವಿಕೆ ಇರುವುದಿಲ್ಲ. ನಿನ್ನನ್ನು ಯಾವುದೇ ಕಾರಣಕ್ಕೂ ಹುಲ್ಲಿನ ಹಿಂದಾಗಲೀ ಅಥವಾ ಇನ್ನಾವುದೇ ವಸ್ತುಗಳ ಹಿಂದಾಗಲಿ ಅಡಗಿಸುವ ಮಾತೇ ಇಲ್ಲ. ಏಕೆಂದರೆ ಈ ಚಿತ್ರದಲ್ಲಿ ನಾಯಕನಿಗಾಗಿ ನಿನ್ನನ್ನು ನೀನು ಗೂಂಡಾಗಳಿಗೆ ಸಮರ್ಪಿಸಿಕೊಂಡ ಸನ್ನಿವೇಶ ಅದು. ಆದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೇ ಈ ದೃಶ್ಯ ಮಾಡಬೇಕಾಗುತ್ತದೆ ಎಂದಿದ್ದೆ. ಆರಂಭದಲ್ಲಿ ಮಾಧುರಿ ಇದಕ್ಕೆ ಓಕೆ ಎಂದಿದ್ದಳು' ಎಂದು ಆ ದಿನಗಳನ್ನು ನೆನಪಿಸಿಕೊಂಡರು ಟಿನ್ನು ಆನಂದ್.
ಈ ಸೀನ್ಗಾಗಿ ಮಾಧುರಿಗೆ ಅಗತ್ಯ ಇರುವ ಬ್ರಾ ಡಿಸೈನ್ ಮಾಡುವಂತೆಯೂ ತಿಳಿಸಲಾಗಿತ್ತು. ಯಾವ ರೀತಿಯ ಡಿಸೈನ್ ಬೇಕು ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆಯೂ ಹೇಳಲಾಗಿತ್ತು. ಎಲ್ಲದ್ದಕ್ಕೂ ಓಕೆ ಎಂದಿದ್ದ ಮಾಧುರಿ, ಶೂಟಿಂಗ್ ಸಂದರ್ಭದಲ್ಲಿ ಮಾತ್ರ ಈ ದೃಶ್ಯವನ್ನು ನಿರಾಕರಿಸಿಯೇ ಬಿಟ್ಟರಂತೆ. ಈ ಕುರಿತು ತಿಳಿಸಿದ ಟಿನ್ನು ಅವರು, ಚಿತ್ರದ ಮೊದಲ ದಿನವಾದ ಚಿತ್ರೀಕರಣದ ದಿನ ಮಾಧುರಿ ಸೆಟ್‌ಗೆ ಬರುತ್ತಾರೆ ಎಂದು ಕಾಯುತ್ತಿದ್ದೆ. 45 ನಿಮಿಷಗಳವರೆಗೆ ಅವಳು ತನ್ನ ಕೋಣೆಯಿಂದ ಹೊರಬರದಿದ್ದಾಗ, ತಾನು ಶೂಟಿಂಗ್ಗೆ ಬರುವುದೇ ಇಲ್ಲ ಎಂದು ಆಕೆ ಹಠ ಹಿಡಿದಳು. ಏನಾಯಿತು ಎಂದು ಕೇಳಿದಾಗ ನಾನು ಈ ನಿರ್ದಿಷ್ಟ ದೃಶ್ಯವನ್ನು ಮಾಡಲು ಬಯಸುವುದಿಲ್ಲ, ಕ್ಷಮಿಸಿ ಎಂದಳು. ನನಗೆ ಏನು ಮಾಡಬೇಕು ಎಂದು ತಿಳಿಯದೇ ಆ ದಿನ ಪ್ಯಾಕ್ ಅಪ್ ಮಾಡಿ, ಚಿತ್ರೀಕರಣವನ್ನು ರದ್ದುಗೊಳಿಸಲಾಯಿತು ಎಂದಿದ್ದಾರೆ.
ಮದ್ವೆಗೆ ರೆಡಿಯಾಗಿದ್ದಾರೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ: ಆದ್ರೆ... ನಟಿ ಹೇಳಿದ್ದೇನು?
ಚಿತ್ರದಲ್ಲಿ ಮಾಧುರಿ ಬದಲಿಗೆ ಬೇರೊಬ್ಬ ನಟಿಯನ್ನು ಹಾಕಿಕೊಳ್ಳಲು ಯೋಚಿಸಲಾಯಿತು. ಆದರೆ ಆಗ ಮಾಧುರಿಯ ಕಾರ್ಯದರ್ಶಿ ಒಳಗೆ ಬಂದು ಮಾಧುರಿಯವರನ್ನು ಓಲೈಸಲು ಸಫಲರಾದರು. ಕೊನೆಗೂ ಮಾಧುರಿ ಈ ದೃಶ್ಯವನ್ನು ಒಪ್ಪಿಕೊಂಡರು. ಚಿತ್ರವನ್ನು ಕೇವಲ ಐದು ದಿನಗಳ ಕಾಲ ಚಿತ್ರೀಕರಿಸಲಾಗಿತ್ತು. ಆದರೆ ನಂತರ ಮಾಧುರಿ ಅವರು ಟಿನ್ನು ಅವರ ಜೊತೆ ಮತ್ತೆ ಕೆಲಸ ಮಾಡಲಿಲ್ಲವಂತೆ!