ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ತಮ್ಮ ಕೋಸ್ಟಾರ್ ಅಲ್ಲು ಅರ್ಜುನ್‌ಗೆ ಲವ್ಲೀ ಉಡುಗೊರೆ ಕೊಟ್ಟಿದ್ದಾರೆ. ಏನದು ? ಗಿಫ್ಟ್ ಕೊಟ್ಟಿದ್ದೇನಕ್ಕೆ ? ಇಲ್ಲಿದೆ ಡಿಟೇಲ್ಸ್
ಸ್ಯಾಂಡಲ್‌ವುಡ್ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಈಗ ಸೌತ್‌ನ ಖ್ಯಾತ ನಟಿ. ಹಾಗೆಯೇ ಮಿಷನ್ ಮಜ್ನು ಮೂಲಕ ಬಾಲಿವುಡ್‌ನಲ್ಲೂ(Bollywood) ಸೌಂಡ್ ಮಾಡುತ್ತಿದ್ದಾರೆ ಕಿರಿಕ್ ಚೆಲುವೆ. ನಟಿ ತನ್ನ ಸಹನಟ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್‌ಗೆ (Allu Arjun)ಚಂದದ ಗಿಫ್ಟ್ ಒಂದನ್ನು ಕೊಟ್ಟಿದ್ದಾರೆ. ಈ ಗಿಫ್ಟ್ ನೋಡಿ ಖುಷಿಯಾಗಿರೋ ಅಲ್ಲು ತಮ್ಮ ಸ್ಟೋರಿ ಮೂಲಕ ನಟಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಸ್ಟೈಲಿಶ್ ಸ್ಟಾರ್(Stylish star) ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಮುಂಬರುವ ಪ್ಯಾನ್-ಇಂಡಿಯನ್ ಸಿನಿಮಾ ಈಗಾಗಲೇ ಸಖತ್ ವೈರಲ್ ಆಗುತ್ತಿದೆ. ಇದು ಟಾಲಿವುಡ್‌ನ(Tolllywood) ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪ: ದಿ ರೈಸ್ ಎಂಬ ಶೀರ್ಷಿಕೆಯ ಮೊದಲ ಭಾಗವು ಇದೇ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಶುಕ್ರವಾರ, ರಶ್ಮಿಕಾ ತನ್ನ ಸಹ-ನಟ ಅಲ್ಲು ಅರ್ಜುನ್ ಅವರಿಗೆ ಸರ್ಪೈಸ್ ಕೊಡಲು ನಿರ್ಧರಿಸಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ನಟಿ ವಿಶೇಷ ಗಿಫ್ಟ್ ಕಳುಹಿಸಿದ್ದಾರೆ. ನಟಿ ಅಲ್ಲುಗೆ ಹ್ಯಾಂಡ್ ರಿಟನ್ ನೋಟ್ ಒಂದನ್ನು ಕಳುಹಿಸಿದ್ದಾರೆ. ಅದರಲ್ಲಿ ನಿಮಗೆ ಏನನ್ನಾದರೂ ಕಳುಹಿಸಬೇಕೆಂದು ಅನಿಸಿತು ಸರ್. ಪುಷ್ಪಾಗೆ ಎಲ್ಲಾ ಶುಭಾಶಯಗಳು! ಪ್ರೀತಿಯಿಂದ ರಶ್ಮಿಕಾ ಎಂದು ಬರೆದಿದ್ದಾರೆ. ರಶ್ಮಿಕಾ ಅವರ ಗೂಡಿ ಬಾಕ್ಸ್‌ನ ಫೋಟೋವನ್ನು ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಚಂದದ ಗಿಫ್ಟ್‌ಗಾಗಿ ನಟಿಗೆ ಧನ್ಯವಾದ ಹೇಳಿದ್ದಾರೆ. ಅವರು ನೀವು ಕೊಟ್ಟ ಆಹ್ಲಾದಕರ ಸರ್ಪೈಸ್‌ಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
'ಪುಷ್ಪ' ಚಿತ್ರದ ಹಾಡಿಗೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ಸಮಂತಾ
ಪುಷ್ಪಾ ಸಿನಿಮಾ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾದಿಂದ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಶೇಷಾಚಲಂ ಬೆಟ್ಟಗಳಲ್ಲಿನ ಶ್ರೀಗಂಧದ ಕಳ್ಳಸಾಗಣೆದಾರರ ಜೀವನವನ್ನು ಆಧರಿಸಿದೆ. ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಶ್ಮಿಕಾ ಡಿ-ಗ್ಲಾಮ್ ಶ್ರೀವಲ್ಲಿಯಾಗಿ ಕಾಣಿಸಿಕೊಳ್ಳಲಿದ್ದರೆ. ಅರ್ಜುನ್ ಪುಷ್ಪಾ ರಾಜ್ ಪಾತ್ರವನ್ನು ಮಾಡುತ್ತಿದ್ದಾರೆ. ಪುಷ್ಪಾ ಚಿತ್ರದಲ್ಲಿ ಜಗಪತಿ ಬಾಬು, ಪ್ರಕಾಶ್ ರಾಜ್, ಅನಸೂಯಾ ಭಾರದ್ವಾಜ್, ಧನಂಜಯ್, ಸುನೀಲ್, ಹರೀಶ್ ಉತ್ತಮನ್, ವೆನ್ನೆಲ ಕಿಶೋರ್ ಮತ್ತು ಶ್ರೀತೇಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸ್ಪೆಷಲ್ ಹಾಡಿನಲ್ಲಿ ಸಮಂತಾ:
ಈ ಚಿತ್ರದಲ್ಲಿ ವಿಶೇಷ ಎಂಟ್ರಿಗಾಗಿ ಸಮಂತಾ ರುಥ್ ಪ್ರಭು ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗಷ್ಟೇ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಡ್ಯಾನ್ಸ್‌ಗಾಗಿ ವಿಶೇಷವಾಗಿ ನಿರ್ಮಿಸಲಾದ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ಪ್ರಾರಂಭವಾಯಿತು. ಗಣೇಶ್ ಆಚಾರ್ಯ ಅವರ ನೃತ್ಯ ಸಂಯೋಜನೆಯ ಪೆಪ್ಪಿ ಹಾಡಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡ್ಯಾನ್ಸ್ ನಂಬರ್‌ಗಾಗಿ ಸಮಂತಾ 1.5 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪ: ದಿ ರೈಸ್ ಶೀರ್ಷಿಕೆಯ ಮೊದಲ ಭಾಗವು ಡಿಸೆಂಬರ್ 25 ರಂದು ಕ್ರಿಸ್‌ಮಸ್ ಸಂದರ್ಭದಲ್ಲಿ ಥಿಯೇಟರ್‌ಗಳಿಗೆ ಬರಲಿದೆ. ರಣವೀರ್ ಸಿಂಗ್ ಅಭಿನಯದ 83 ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಘರ್ಷಣೆಯನ್ನು ತಪ್ಪಿಸಲು ತಯಾರಕರು ಬಿಡುಗಡೆ ದಿನಾಂಕವನ್ನು ಬದಲಾಯಿಸಿದ್ದಾರೆ. ಇದು ಡಿಸೆಂಬರ್ 17 ರಂದು ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರಲಿದೆ.