ಮಾಧುರಿ ದೀಕ್ಷಿತ್​ಗೆ ಉಗ್ರನಿಂದ ಆಹ್ವಾನ? ಐಎಸ್​ಐ ಭಯೋತ್ಪಾದಕನ ಜೊತೆ ನಟಿಯ ಹೆಸರು ಲಿಂಕ್​!

Published : Jun 29, 2024, 06:09 PM IST
ಮಾಧುರಿ ದೀಕ್ಷಿತ್​ಗೆ ಉಗ್ರನಿಂದ ಆಹ್ವಾನ? ಐಎಸ್​ಐ ಭಯೋತ್ಪಾದಕನ ಜೊತೆ ನಟಿಯ ಹೆಸರು ಲಿಂಕ್​!

ಸಾರಾಂಶ

 ಐಎಸ್​ಐ ನಂಟು ಹೊಂದಿರುವ ಉಗ್ರನ ಆಹ್ವಾನದ ಮೇರೆಗೆ ಅಮೆರಿಕಕ್ಕೆ ಹೋಗ್ತಿದ್ದಾರಾ ಮಾಧುರಿ ದೀಕ್ಷಿತ್? ನಟಿಗೆ ದೇಶದ್ರೋಹದ ಪಟ್ಟ. ಆಗಿದ್ದೇನು?   

ಧಕ್​ ಧಕ್​ ಬೆಡಗಿ ಎಂದೇ ಫೇಮಸ್​ ಆಗಿರೋ ಬಾಲಿವುಡ್​ ಹಾಟ್​ ಬ್ಯೂಟಿ ಮಾಧುರಿ ದೀಕ್ಷಿತ್​ ವಿರುದ್ಧ ಈಗ ದೇಶದ್ರೋಹದ ಆರೋಪ ಕೇಳಿಬರುತ್ತಿದೆ. ಇವರ ಚಿತ್ರಗಳನ್ನು ಬೈಕಾಟ್​ ಮಾಡುವ ದೊಡ್ಡ ಟ್ರೆಂಡ್​ ಶುರುವಾಗಿದೆ. ಇದಕ್ಕೆ ಕಾರಣ, ಐಎಸ್​ಐ ಉಗ್ರರ ಲಿಂಕ್​ ಇರುವವರನ್ನು ಮಾಧುರಿ ದೀಕ್ಷಿತ್​ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಕಾರಣಕ್ಕೆ! ಹೌದು.  ಪಾಕಿಸ್ತಾನ ಮೂಲದ ರಿಹಾನ್​ ಸಿದ್ಧಿಖಿ ಜೊತೆ ಮಾಧುರಿ ದೀಕ್ಷಿತ್​ ಅವರು ಅಮೆರಿಕದಲ್ಲಿ ಒಂದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಪೋಸ್ಟ್​ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಈ ಪೋಸ್ಟರ್​ನ ಅಸಲಿಯತ್ತು ಇನ್ನೂ ಗೊತ್ತಿಲ್ಲ. ಇದು ಫೇಕ್​ ಎಂದು ಕೂಡ ಹೇಳಲಾಗುತ್ತಿದೆ. ಆದರೆ ನಟಿ ಈವರೆಗೆ ಇದರ ಬಗ್ಗೆ ಯಾವುದೇ ರಿಯಾಕ್ಷನ್​ ಕೊಟ್ಟಿಲ್ಲ. ಆದ್ದರಿಂದ ಇದು ನಿಜವೇ ಎಂದು ಹೇಳಲಾಗುತ್ತಿದೆ.

ಅಷ್ಟಕ್ಕೂ ಪಾಕಿಸ್ತಾನದ ಮೂಲಕ ವ್ಯಕ್ತಿಯ ಜೊತೆ ವೇದಿಕೆ ಹಂಚಿಕೊಂಡರೆ ತಪ್ಪೇನು ಎಂದು ಕೇಳಬಹುದು. ಆದರೆ ಅಲ್ಲೇ ಇರುವುದು ವಿಶೇಷತೆ. ಪಾಕಿಸ್ತಾನ ಮೂಲದ ರಿಹಾನ್​​ ಸಿದ್ಧಿಖಿ ಈವೆಂಟ್​ ಮ್ಯಾನೇಜರ್​ ಆಗಿದ್ದು, ಐಎಸ್​ಐ ಲಿಂಕ್​ ಹೊಂದಿರುವುದಾಗಿ ಹೇಳಲಾಗುತ್ತಿದೆ. ರಿಹಾನ್​  ಅಮೆರಿಕದಲ್ಲಿ  ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು,  ಈ ಮೊದಲು ಕೆಲವು ಬಾಲಿವುಡ್​ ಕಲಾವಿದರನ್ನು ಆತ ಗೆಸ್ಟ್​ ಆಗಿ ಆಹ್ವಾನಿಸಿದ್ದು ಇದೆ. ಆದರೆ ಇದೀಗ  ಆತನಿಗೆ ಭಾರತ ವಿರೋಧಿ ವ್ಯಕ್ತಿಗಳ ಜೊತೆ ನಂಟು ಇರುವುದು ಬಹಿರಂಗ ಆಗಿದೆ.  ಸಿನಿ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಆಹ್ವಾನಿಸಿ ನಡೆಸಿದ ಕಾರ್ಯಕ್ರಮದಿಂದ ಬಂದ ಹಣವನ್ನು ಆದ ಭಾರತ ವಿರೋಧಿ ಕೆಲಸಗಳಿಗೆ ನೀಡಿದ್ದಾನೆ ಎಂಬ ಆರೋಪ ಇದೆ. ಹಾಗಾಗಿ ಆತನನ್ನು ಭಾರತ ಸರ್ಕಾರವು ಕಪ್ಪುಪಟ್ಟಿಗೆ ಸೇರಿಸಿದೆ. ಇವನ ಜೊತೆ ಮಾಧುರಿ ದೀಕ್ಷಿತ್​ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಭಾರತೀಯರು ಸಹಿಸುತ್ತಿಲ್ಲ! 

ದರ್ಶನ್​ ಅಣ್ಣ ಸಹೃದಯಿ, ಕನಸಲ್ಲೂ ಕೇಡು ಬಯಸುವವರಲ್ಲ... ಆದರೆ... ನಟ ನಾಗಶೌರ್ಯ ಭಾವುಕ ಪೋಸ್ಟ್​

ಇದೇ ಕಾರಣಕ್ಕೆ ನಟಿಯ ವಿರುದ್ಧ ಬೈಕಾಟ್​ ಟ್ರೆಂಡ್​ ಶುರುವಾಗಿದೆ. ಅಷ್ಟಕ್ಕೂ ಈ ಕಾರ್ಯಕ್ರಮ ಆಗಸ್ಟ್​ 16ರಂದು ಅಮೆರಿಕದ ಟೆಕ್ಸಾಸ್​ನಲ್ಲಿ ನಡೆಯಲಿದೆ ಎನ್ನಲಾಗುತ್ತಿದ್ದು, ಈ ಪೋಸ್ಟರ್​ ಕುರಿತು ನಟಿ ಮೌನ ಮುರಿದರೆ ಬಹುಶಃ ಸತ್ಯ ತಿಳಿಯಲಿದೆ. ಅಷ್ಟಕ್ಕೂ ಈ ವಿಷಯ ಬೆಳಕಿಗೆ ಬಂದದ್ದು ಅಂಕಣಗಾರ್ತಿ ಸುನಂದಾ ವಸಿಷ್ಠ್​ ಅವರ ಟ್ವೀಟ್​ ಮೂಲಕ. ‘ಭಾರತೀಯ ಗುಪ್ತಚರ ಇಲಾಖೆಯು ರಿಹಾನ್​ ಸಿದ್ಧಿಖಿ ಮೇಲೆ ಕಣ್ಣಿಟ್ಟಿದೆ. ಅಂಥ ವ್ಯಕ್ತಿಯ ಜೊತೆ ಮಾಧುರಿ ದೀಕ್ಷಿತ್​ ಅವರು ಕಾರ್ಯಕ್ರಮವೊಂದಲ್ಲಿ ಭಾಗಿ ಆಗುತ್ತಾರೆ ಎಂಬ ಮಾಹಿತಿ ತಿಳಿದು ಅಚ್ಚರಿ ಆಯಿತು. ಆತನ ಹಿನ್ನೆಲೆ ಬಗ್ಗೆ ಯಾರಾದರೂ ಮಾಧುರಿ ದೀಕ್ಷಿತ್​ಗೆ ಮಾಹಿತಿ ನೀಡಿ’ ಎಂದು  ಸುನಂದಾ ಟ್ವೀಟ್​ನಲ್ಲಿ ಹೇಳಿದ್ದಾರೆ.
 
‘ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಆರೋಪ ಹೊತ್ತಿರುವ ಮತ್ತು ಭಾರತ ಸರ್ಕಾರದಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿರುವ ಪಾಕಿಸ್ತಾನಿ ಪ್ರವರ್ತಕರೊಂದಿಗೆ ಕೆಲಸ ಮಾಡಲು ಮಾಧುರಿಗೆ ಯಾವುದಾದ್ರೂ ಸೂಕ್ತ ಕಾರಣವಿದೆಯೇ? ಇದು ನಮ್ಮ ಭದ್ರತಾ ಪಡೆಗಳಿಗೆ ಮತ್ತು ಭಾರತದ ಗಡಿಯನ್ನು ಸುರಕ್ಷಿತವಾಗಿರಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರ ಸೈನಿಕರಿಗೆ ತುಂಬಾ ಬೇಸರ ತಂದಿದೆ. ದೇವರು ಮಾಧುರಿ ದೀಕ್ಷಿತ್ ಗೆ ರೀತಿ ಮಾಡದಿರುವ ಬುದ್ಧಿಯನ್ನು ನೀಡಲಿ’ ಎಂದು  ಸೋಷಿಯಲ್​ ಮೀಡಿಯಾದಲ್ಲಿ ಬರೆಯಲಾಗಿದ್ದು, ಇನ್ನಷ್ಟೇ ನಿಜಾಂಶ ಹೊರಕ್ಕೆ ಬರಬೇಕಿದೆ! 

ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್​ ಮಾತು...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!