
ವಯಸ್ಸು 50 ಆದ್ರೂ ಇನ್ನೂ ಮಾದಕ ನೋಟ, ಬಟ್ಟೆಗಳಿಂದ ಅಭಿಮಾನಿಗಳ ಹೃದಯ ಕದಿಯುತ್ತಿದ್ದದಾರೆ ಬಾಲಿವುಡ್ ನಟಿ ಮಲೈಕಾ ಅರೋರಾ. ಈ ಮೂಲಕ ಹಸಿಬಿಸಿ ಲೇಡಿ ಎಂದೇ ಫೇಮಸ್ ಆಗಿದ್ದಾರೆ. ಇವರ ಮತ್ತು ಇವರಿಗಿಂತಲೂ 11 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಡೇಟಿಂಗ್, ಬ್ರೇಕಪ್ ವಿಷಯ ಸದಾ ಹಾಟ್ ಟಾಪಿಕ್ ಆಗಿಯೇ ಇರುತ್ತದೆ. ಕೆಲ ದಿನಗಳಿಂದಲೂ ಇವರು ಬ್ರೇಕಪ್ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು. ಇದೀಗ ಬ್ರೇಕಪ್ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಾನು ನನ್ನ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ ಎಂದು ಮಲೈಕಾ ಸುದ್ದಿ ಹರಡುವವರ ವಿರುದ್ಧ ಗರಂ ಆಗಿಯೇ ಉತ್ತರಿಸಿದ್ದಾರೆ. ಅದೇನೇ ಇದ್ದರೂ, 50 ವರ್ಷದ ಮಲೈಕಾ ಮತ್ತು ಅರ್ಜುನ್ ಕಪೂರ್ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್ ಟಾಪಿಕ್ಕೇ. ವಯಸ್ಸು 50 ಆದರೂ ಇಂದಿಗೂ ಮಲೈಕಾ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ವಯಸ್ಸು 50 ಆದರೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್ ಸೆನ್ಸ್ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.
ಇದೀಗ ನಟಿ, ತಾನು ಸಾಯುವವರೆಗೂ ಪ್ರೀತಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಇವರು ಹೀಗೆ ಯಾಕೆ ಹೇಳುತ್ತಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಂದ್ರೆ ಬ್ರೇಕಪ್ ಆಯ್ತಾ ಅಥ್ವಾ ಅರ್ಜುನ್ ಕಪೂರ್ನನ್ನು ಇನ್ನೂ ಪ್ರೀತಿಸ್ತಾ ಇದ್ದಾರೋ ಅಥ್ವಾ ಬೇರೊಬ್ಬನ ಎಂಟ್ರಿ ಆಯ್ತಾ ಎಂಬೆಲ್ಲಾ ಗೊಂದಲ ಅಭಿಮಾನಿಗಳನ್ನು ಕಾಡುತ್ತಿದೆ. ಮೊನ್ನೆಯಷ್ಟೇ, ತಮ್ಮ ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಅವರ ಹುಟ್ಟುಹಬ್ಬವನ್ನೇ ಮರೆತು ನಂತರ ತೇಪೆ ಹಚ್ಚುವ ಕೆಲಸ ಮಾಡಿ ಮಲೈಕಾ ಟ್ರೋಲ್ಗೆ ಒಳಗಾಗಿದ್ದರು. ಬ್ರೇಕಪ್ ಸುದ್ದಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಬಾಯ್ಫ್ರೆಂಡ್ ಹುಟ್ಟುಹಬ್ಬ ಮಿಸ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಮೊನ್ನೆ ಅಂದರೆ ಜೂನ್ 26ರಂದು ಅರ್ಜುನ್ ಕಪೂರ್ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 50 ವರ್ಷದ ಮಲೈಕಾ ಅದನ್ನು ಮರೆತಿದ್ದರು.
ಬಾಯ್ಫ್ರೆಂಡ್ನ ಹುಟ್ಟುಹಬ್ಬ ಮರೆತು ತೇಪೆಹಚ್ಚುವ ಕೆಲ್ಸ ಮಾಡಿದ ಮಲೈಕಾ ಅರೋರಾ ಸಕತ್ ಟ್ರೋಲ್
ಕೊನೆಗೆ ಸೋಷಿಯಲ್ ಮೀಡಿಯಾದಲ್ಲಿ "ನನ್ನ ಕಣ್ಣು ಮುಚ್ಚಿ ನನ್ನ ಬೆನ್ನು ತಿರುಗಿಸಿ ನಂಬುವ ಜನರನ್ನು ನಾನು ಇಷ್ಟಪಡುತ್ತೇನೆ" ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಸಕತ್ ಟ್ರೋಲ್ಗೆ ಒಳಗಾಗಿದ್ದರು. ಈ ಹಿಂದೆ ಅರ್ಬಾಜ್ ಖಾನ್ ಕೂಡ ನಿನ್ನನ್ನು ಕಣ್ಣು ಮುಚ್ಚಿಯೇ ನಂಬಿದ್ದ. ಅವನಿಗೆ ಕೈಕೊಟ್ಟು ಚಿಕ್ಕವನ ಜೊತೆ ಓಡಿ ಬರ್ಲಿಲ್ವಾ? ಮದ್ವೆಯಾಗದೇ ದಶಕದಿಂದ ಒಟ್ಟಿಗೇ ಇಲ್ವಾ? ಈಗೆಲ್ಲಾ ಈ ನಖರಾ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್ ಕಪೂರ್ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಅರ್ಜುನ್ ಕಪೂರ್ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.