
ಮಾಧುರಿ ದೀಕ್ಷಿತ್ ಹೇಳಿದ ಸೀಕ್ರೆಟ್!
ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ಸೀಕ್ರೆಟ್ ಒಂದನ್ನು ಇತ್ತೀಚೆಗೆ ಹೊರಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಹೌದು, ಮಾಧುರಿ ದೀಕ್ಷಿತ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಹೇಳಿದ್ದು, 'ಡಾ ಶ್ರೀರಾಮ್ ಮಾಧವ್ ನೆನೆ () ತಮ್ಮ ಬಾಲ್ಯವನ್ನು ವಿದೇಶದಲ್ಲಿ ಕಳೆದಿದ್ದರಿಂದ, ಅವರು ಹೆಚ್ಚಠಾಗಿ ಭಾರತದ ಸಿನಿಮಾಗಳನ್ನು ನೋಡಿರಲಿಲ್ಲ. ಮಾಧುರಿ ಅವರನ್ನು ಭೇಟಿಯಾಗುವ ಮೊದಲು ಡಾ ಶ್ರೀರಾಮ್ ನೆನೆ ಅವರು ಮಾಧುರಿಯ ಚಲನಚಿತ್ರಗಳನ್ನು ನೋಡಿದ್ದರು. ಡಾ ಶ್ರೀರಾಮ್ ನೆನೆ ಅವರು ಲಂಡನ್‌ನಲ್ಲಿ ಜನಿಸಿದರು ಮತ್ತು 7 ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದರು' ಎಂದಿದ್ದಾರೆ.
'ಡಾ ಶ್ರೀರಾಮ್ ನೆನೆ ಅವರು ಎಂದಾದರೂ ಭಾರತಕ್ಕೆ ಭೇಟಿ ನೀಡಿದ್ದರೆ' ಎಂಬ ಪ್ರಶ್ನೆಗೆ, 'ಹೌದು, ಆದರೆ ಅವರ ಭಾರತ ಭೇಟಿ ಕೇವಲ ರಜಾದಿನಗಳಿಗಾಗಿ ಮಾತ್ರ ಸೀಮಿತವಾಗಿತ್ತು. ಆದರೆ, ಅವರು ಅಮೆರಿಕಾದಲ್ಲಿ ಅಧ್ಯಯ ಮುಗಿಸಿದ ನಂತರ, ಅವರ ಭಾರತ ಭೇಟಿಗಳು ಸಂಪೂರ್ಣವಾಗಿ ನಿಂತುಹೋದವು. ಇದಲ್ಲದೆ, ಮಹಾರಾಷ್ಟ್ರದ ಕುಟುಂಬಗಳಿಗೆ ಚಲನಚಿತ್ರಗಳ ಬಗ್ಗೆ ಅಷ್ಟೇನು ಬಲವಾದ ಉತ್ಸಾಹವಿಲ್ಲ; ಅವರು ಹೆಚ್ಚಾಗಿ ತಮ್ಮ ಅಧ್ಯಯನಗಳ ಮೇಲೆ ಕೇಂದ್ರೀಕರಿಸುತ್ತಾರೆ. ಜೊತೆಗೆ ಅವರಿಗೆ ಹಿಂದಿ ಕೂಡ ಅಷ್ಟಾಗಿ ತಿಳಿದಿರಲಿಲ್ಲ. ಹೀಗಾಗಿ ಡಾ ಶ್ರೀರಾಮ್ ನೆನೆ ಹಿಂದಿ ಸಿನಿಮಾಗಳನ್ನು ಹೆಚ್ಚು ನೋಡಿಲ್ಲ.
ತಮ್ಮ ಮಾತುಕತೆಯನ್ನು ಮುಂದುವರಿಸುತ್ತ ನಟಿ ಮಾಧುರಿ, 'ನನ್ನ ಪತಿ ಡಾ ಶ್ರೀರಾಮ್ ನೆನೆ ಅವರು ಸಿನಿಮಾಗಳನ್ನು ಅಷ್ಟೇನೂ ನೋಡುವುದಿಲ್ಲವಾದ್ದರಿಂದ ಅವರಿಗೆ ಅವರಿಗೆ ನಟ ಅಮಿತಾಭ್ ಬಚ್ಚನ್ ಮಾತ್ರ ಗೊತ್ತಿತ್ತು. ಅಮಿತಾಭ್ ನಟನೆಯ 'ಅಮರ್ ಅಕ್ಟರ್ ಆಂಥೋನಿ' ಎಂಬ ಒಂದೇ ಒಂದು ಚಿತ್ರವನ್ನು ಅವರು ನೋಡಿದ್ದಾರೆ. ಆದ್ದರಿಂದ ಅವನಿಗೆ ಅಮಿತಾಭ್ ಬಚ್ಚನ್ ಮಾತ್ರ ತಿಳಿದಿತ್ತು' ಎಂದಿದ್ದಾರೆ ಮಾಧುರಿ ದೀಕ್ಷಿತ್.
"ನಮ್ಮ ಮೊದಲ ಭೇಟಿಯ ಸಮಯದಲ್ಲಿ ನಾನು ನಟಿ ಎಂದು ಮತ್ತು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಅವನಿಗೆ ತಿಳಿದಿತ್ತು. ಆದರೆ ನಾನು ಭಾರತದಲ್ಲಿ ದೊಡ್ಡ ಸಿನಿಮಾ ತಾರೆ ಎಂದು ಅವರಿಗೆ ತಿಳಿದಿರಲಿಲ್ಲ. ನಾವು ಸಾಮಾನ್ಯ ಜನರಂತೆ ಭೇಟಿಯಾದೆವು." ಎಂದು ನಟಿ ಮಾಧುರಿ ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಪತಿ ಶ್ರೀರಾಮ್ ನೆನೆ ಅವರಿಗೆ ಬಾಲಿವುಡ್ ಸೂಪರ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಮಾತ್ರ ಗೊತ್ತಿತ್ತು ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಮಾಧುರಿ ದೀಕ್ಷಿತ್ ಅವರು ಅಕ್ಟೋಬರ್ 17, 1999 ರಂದು ಲಾಸ್ ಏಂಜಲೀಸ್ ಮೂಲದ ಕಾರ್ಡಿಯೋಥ್ರಾಸಿಕ್ ಸರ್ಜನ್ ಡಾ. ಶ್ರೀರಾಮ ನೇನೆ ಅವರನ್ನು ವಿವಾಹವಾದರು. ಅವರ ವಿವಾಹದ ಸಮಯದಲ್ಲಿ ಮಾಧುರಿ ಅವರ ವೃತ್ತಿಜೀವನವು ಉತ್ತುಂಗದಲ್ಲಿತ್ತು. ಮದುವೆಯ ನಂತರ ಅವರು ನಟನೆಯ ವೃತ್ತಿಯನ್ನು ತೊರೆದರು. ಜೊತೆಗೆ, ಮಾಧುರಿ ದೀಕ್ಷಿತ್ ಅವರನ್ನು ವಿವಾಹದ ನಂತರವೇ ಡಾ. ನೇನೆ ಅವರು, ತಮ್ಮ ಪತ್ನಿ ಮಾಧುರಿ ದೀಕ್ಷಿತ್ ಅವರು ಭಾರತದಲ್ಲಿ ಸಿನಿಮಾ ಸೂಪರ್ ಸ್ಟಾರ್ ಎಂಬುದನ್ನು ಅರ್ಥ ಮಾಡಿಕೊಂಡರು. ಈ ಸಂಗತಿ ನಿವಾಗಿಯುಆ ಅಚ್ಚರಿಯೇ ಸರಿ ಎನ್ನಬಹುದು.
ಅಂದಹಾಗೆ, 'ಅಮರ್ ಅಕ್ಬರ್ ಅಂತೋನಿ' ಇದು 1977 ರಲ್ಲಿ ತೆರೆಗೆ ಬಂದ ಹಿಂದಿ ಚಲನಚಿತ್ರ. ಇದರಲ್ಲಿ ನಟ ಅಮಿತಾಭ್ ಬಚ್ಚನ್, ವಿನೋದ್ ಖನ್ನಾ ಮತ್ತು ರಿಷಿ ಕಪೂರ್ ನಾಯಕರಾಗಿ ನಟಿಸಿದ್ದಾರೆ. ನಾಯಕಿಯರಾಗಿ ನೀತು ಸಿಂಗ್, ಪರ್ವೀನ್ ಬಾಬಿ ನಟಿಸಿದ್ದಾರೆ. ಆ ಕಾಲದಲ್ಲಿ ಅದು ತೆರೆಗೆ ಬಂದ ಸೂಪರ್ ಹಿಟ್ ಕ್ಲಾಸಿಕ್ ಸಿನಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.