ದೈವವನ್ನು ದೆವ್ವ ಎಂದಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ದ ದೂರು; ಮುಂದೇನು ಕಥೆ?

Published : Dec 03, 2025, 01:39 PM IST
Ranveer Singh

ಸಾರಾಂಶ

ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ ಸೀಕ್ವೆಲ್‌'ನ ಸಿನಿಮಾವನ್ನು ನೋಡಿದ ನಟ ರಣವೀರ್ ಸಿಂಗ್ ಅವರು ಈ ಸಿನಿಮಾದಲ್ಲಿರುವ 'ಚಾವುಂಡಿ ದೈವ'ವನ್ನು ಫೀಮೇಲ್ ಘೋಸ್ಟ್ ಎಂದು ಕರೆದು ಅದರ ನಟನೆಯ ಅನುಕರಣೆ ಮಾಡಿದ್ದರು. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ದ ದೂರು ದಾಖಲಾಗಿದೆ. ಬಾಲಿವುಡ್ ಸ್ಟಾರ್ ನಟ ದೀಪಿಕಾ ಪಡುಕೋಣೆ ಪ, ಸ್ಟಾರ್ ನಟ ರಣವೀರ್ ಸಿಂಗ್ ವಿರುದ್ಧ ಇದೀಗ ಕರ್ನಾಟಕದಲ್ಲಿ, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಣವೀರ್ ಸಿಂಗ್ ಅವರು ಕಾಂತಾರ ದೈವವನ್ನು 'ದೆವ್ವ' ಎಣಬ ಪದ ಉಪಯೋಗಿಸಿ ಕರೆದಿದ್ದು ದೊಡ್ಡ ವಿವಾದವಾಗುತ್ತಿದೆ. ಇದೀಗ ಈ ವಿವಾದ ದೂರು ದಾಖಲಾಗುವ ಮಟ್ಟಕ್ಕೆ ಬೆಳೆದು ನಿಂತಿದೆ.

ಕಾಂತಾರ ಸಿನಿಮಾದ (Kantara 1) ಉಳ್ಳಾಳ್ತಿ ದೈವದ (Chavundi) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ರಣವೀರ್ ಸಿಂಗ್ ವಿರುದ್ಧ ಇದೀಗ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ ಸೀಕ್ವೆಲ್‌'ನ ಸಿನಿಮಾವನ್ನು ನೋಡಿದ ನಟ ರಣವೀರ್ ಸಿಂಗ್ ಅವರು ಈ ಸಿನಿಮಾದಲ್ಲಿರುವ 'ಚಾವುಂಡಿ ದೈವ'ವನ್ನು ಫೀಮೇಲ್ ಘೋಸ್ಟ್ ಎಂದು ಕರೆದು ಅದರ ನಟನೆಯ ಅನುಕರಣೆ ಮಾಡಿದ್ದರು. 28 ನವೆಂಬರ್ 2025ರಂದು, ಗೋವಾದ ಇಂಟರ್ ನ್ಯಾಷನಲ್ ಫೀಲಂ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಈ ಘಟನೆ ನಡೆದಿತ್ತು.

ದೈವವನ್ನು ದೆವ್ವ ಎಂದು ಸಂಭೋದಿಸಿ ವೇದಿಕೆ ಮೇಲೆ ಅನುಕರಣೆ ಮಾಡಿದ್ದ ರಣವೀರ್ ಸಿಂಗ್!

ಹೌದು, ನಟ ರಣವೀರ್ ಸಿಂಗ್ ಅವರು 'ಕಾಂತಾರ 1' ಸಿನಿಮಾ ಹಾಗೂ ರಿಷಬ್ ಶೆಟ್ಟಿ ನಟನೆ ಹೊಗಳುವ ಭರದಲ್ಲಿ ಈ ತಪ್ಪು ಮಾಡಿದ್ದಾರೆ. ಅವರಿಗೆ ಕರಾವಳಿಯ, ತುಳುನಾಡಿನ ದೇವರು-ದೈವಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ದೈವವನ್ನು (God) ದೆವ್ವ (Ghost) ಎಂದಿರುವ ತಪ್ಪು ಇದೀಗ ಇಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿ ಇದೀಗ ದೂರು ದಾಖಲಾಗುವ ಮಟ್ಟಕ್ಕೆ ಹೋಗಿದೆ. ಕಾಂತಾರ, ರಿಷಬ್ ಶೆಟ್ಟಿ ಹೊಗುಳುವ ಭರದಲ್ಲಿ 'ಹೆಣ್ಣು ದೆವ್ವ' ಎಂದು ದೈವವನ್ನು ಸಂಭೋದಿಸಿದ್ದು ದೊಡ್ಡ ತಪ್ಪಾಗಿದೆ.

"ಫಿಮೇಲ್ ಗೋಸ್ಟ್ " ಎಂದು ಸಂಬೋಧಿಸಿರುವುದು ತುಳುನಾಡಿಗರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದೆ ಎಂಬ ಕಾರಣಕ್ಕೆ ಇದೀಗ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲ ಪ್ರಶಾಂತ್ ಮೇತಲ್ ಅವರು ಇದೀಗ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?