ನನ್ನಿಷ್ಟದ ಪಾತ್ರಗಳು ಸಿಕ್ಕಿಲ್ಲ; ಚಿತ್ರರಂಗ ತೊರೆದ ಬಗ್ಗೆ ಬಹಿರಂಗ ಪಡಿಸಿದ ನಟಿ ಮಧೂ

Published : Apr 14, 2023, 06:40 PM IST
ನನ್ನಿಷ್ಟದ ಪಾತ್ರಗಳು ಸಿಕ್ಕಿಲ್ಲ; ಚಿತ್ರರಂಗ ತೊರೆದ ಬಗ್ಗೆ ಬಹಿರಂಗ ಪಡಿಸಿದ ನಟಿ ಮಧೂ

ಸಾರಾಂಶ

ಸಿನಿಮಾರಂಗ ತೊರೆದ ಬಗ್ಗೆ ನಟಿ ಅಣ್ಣಯ್ಯ ಸಿನಿಮಾ ಖ್ಯಾತಿಯ ಮಧೂ ಬಹಿರಂಗ ಪಡಿಸಿದ್ದಾರೆ.  


ನಟಿ ಮಧೂ ಎನ್ನುವುದಕ್ಕಿಂತ ರವಿಚಂದ್ರನ್ ನಟನೆಯ ಅಣ್ಣಯ್ಯ ಸಿನಿಮಾದ ನಾಯಕಿ ಎಂದರೆ ಕನ್ನಡಿಗರಿಗೆ ಥಟ್ ಅಂತ ಗೊತ್ತಾಗುತ್ತೆ. 90ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಮಧೂ ಬಳಿಕ ಕಣ್ತರೆಯಾದರು. ಭಾರಿ ಬೇಡಿಕೆಯ ನಟಿಯಾಗಿದ್ದ ಮಧೂ ಸೌತ್ ಮತ್ತು ನಾರ್ತ್ ಎರಡು ಸಿನಿಮಾರಂಗದಲ್ಲಿ ಮಿಂಚಿದ್ದಾರೆ. 1991ರಲ್ಲಿ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಧೂ ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿ ಸೇರಿದಂತೆ 50ಕ್ಕೂ ಹೇಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ.   

ನಾಯಕಿಯಾಗಿ ಮೆರೆದಿದ್ದ ನಟಿ ಮಧೂ ಅನೇಕ ವರ್ಷಗಳ ಬಳಿಕ 2015ರಲ್ಲಿ ಕಿಚ್ಚ ಸುದೀಪ್ ನಟನೆಯ ರನ್ನ ಸಿನಿಮಾದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡರು. ರನ್ನ ಬಳಿಕ ಮಧೂ ಅನೇಕ ಸಿನಿಮಾಗಳಲ್ಲಿ ಮಿಂಚಿದರು. ಸದ್ಯ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶಾಕುಂತಲಂ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದ ಮಧೂ ಅನೇಕ ಸಂದರ್ಶಗಳನ್ನು ನೀಡಿದ್ದಾರೆ. ಈ ವೇಳೆ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಲಿಂಗಭೇದ, ಟೈಪ್‌ಕಾಸ್ಟ್ ಪಾತ್ರಗಳಿಂದ ಸಿನಿಮಾರಂಗ ತೊರೆಯಬೇಕಾಯಿತು ಎಂದು ಹೇಳಿದ್ದಾರೆ. 

ವೃತ್ತಿಜೀವನದ ಕೊನೆಯಲ್ಲಿ ಒಂದು ಹಂತದಲ್ಲಿ ಸಿನಿಮಾರಂಗ ತೊರೆಯಲು ನಿರ್ಧರಿಸಿದೆ.  ಹೆಚ್ಚು ಸಿನಿಮಾ ಮಾಡಲು ಬಯಸಿದ್ದರೂ ಬೇಕಾದ ಪಾತ್ರಗಳು ತನಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಅಲಿಯಾ ಭಟ್ ಸೇರಿದಂತೆ ಇತರ ನಟಿಯರು ಸಿನಿಮಾರಂಗದಲ್ಲಿ ನಾಯಕಿಯರ ಸ್ಥಾನಮಾನವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ. 

ಅಣ್ಣಯ್ಯ ಚಿತ್ರದ ನಟಿ Madhoo Shah ಈಗ ಹೇಗಾಗಿದ್ದಾರೆ ನೋಡಿ

ಲಿಂಗಭೇದ ಮತ್ತು ಟೈಪ್‌ಕಾಸ್ಟಿಂಗ್ ಬಗ್ಗೆ ಮಾತನಾಡಿದ ಮಧೂ, 'ನಾನು ನಾಯಕಿ ಪಾತ್ರವನ್ನು ಮಾಡುತ್ತಿದ್ದೆ. ಆ ಸಮಯದಲ್ಲಿ ಎಲ್ಲಾ ನಾಯಕಿಯರು ಟೈಪ್‌ಕಾಸ್ಟ್ ಆಗಿದ್ದರು. ಕೆಲವು ಅದ್ಭುತ ಹಾಡುಗಳಿಗೆ ನೃತ್ಯ ಮಾಡಿದ್ದೇವೆ ಮತ್ತು ಕೆಲವು ರೋಮ್ಯಾಂಟಿಕ್ ದೃಶ್ಯಗಳನ್ನು ಮಾಡಿದ್ದೇವೆ' ಎಂದು ಹೇಳುವ ಮೂಲಕ ಕೆಲವೇ ಪಾತ್ರಗಳಿಗೆ ತಮ್ಮನ್ನು ಸೀಮಿತ ಮಾಡಿಬಿಟ್ಟರು, ನಾಯಕಿ ಅಂದರೆ ಹಾಡುಗಳಿಗೆ ಡ್ಯಾನ್ಸ್ ಮಾಡೋದು, ನಾಯಕನ ಜೊತೆ ರೊಮ್ಯಾನ್ಸ್ ಮಾಡೋದು ಅಷ್ಟೇ ಆಗಿತ್ತು ಎಂದು ಪರೋಕ್ಷವಾಗಿ ಹೇಳಿದ್ದಾರೆ.

'ನಾನು ವಿವಿಧ ಭಾಷೆಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ ಮತ್ತು ಅದರ ಬಗ್ಗೆ ಯಾವುದೇ ಆರೋಪಗಲಿಲ್ಲ.ನನ್ನ ವೃತ್ತಿಜೀವನದ ಕೊನೆಯಲ್ಲಿ ಒಂದು ಹಂತದಲ್ಲಿ ನಾನು ನಿರ್ಗಮಿಸಲು ನಿರ್ಧರಿಸಿದೆ, ಮತ್ತು ನಾನು ಇನ್ನೂ ಹೆಚ್ಚಿನದನ್ನು ಮಾಡಲು ಬಯಸುತ್ತೇನೆ ಎಂದು ನಾನು ಭಾವಿಸಿದೆ. ಆದರೆ ನನಗೆ ಅಂತಹ ಪಾತ್ರಗಳು ಸಿಗುತ್ತಿರಲಿಲ್ಲ' ಎಂದು ಹೇಳಿದ್ದಾರೆ. 

90ರ ದಶಕದಲ್ಲಿ ಮಿಂಚಿ ಮರೆಯಾದ ಈ ಬಾಲಿವುಡ್‌ ಬೆಡಗಿಯರು ಈಗ ಹೇಗಿದ್ದಾರೆ ಗೊತ್ತಾ?

'ಆಕ್ಷನ್ ಮತ್ತು ಆಕ್ಷನ್ ಹೀರೋಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದ ಯುಗದ ಭಾಗವಾಗಿದ್ದೆ ನಾನು.  ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಅಜಯ್ ದೇವಗನ್ ಅವರೊಂದಿಗೆ ನಟಿಸಿದೆ. 
ಯೋಧ ಮತ್ತು ರೋಜಾದಂತಹ ಚಿತ್ರಗಳನ್ನು ಮಾಡಿದ್ದೇನೆ. ದಕ್ಷಿಣದಲ್ಲೂ ಈ ರೀತಿಯ ಚಲನಚಿತ್ರಗಳು ಬರಬೇಕೆಂದು ನಾನು ಬಯಸಿದ್ದೆ ಆದರೆ ಬರಲಿಲ್ಲ. ಆಗ ನಾನು ಮದುವೆಯಾಗುವ ನಿರ್ಧಾರ ಮಾಡಿದೆ.  ಹಾಗಾಗಿ ಸಿನಿಮಾರಂಗದಿಂದ ನಿರ್ಧರಿಸಿದೆ ಮತ್ತು ಅದರ ಬಗ್ಗೆ ಯಾವುದೇ ವಿಷಾದವಿಲ್ಲ' ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ