Dusky beauty ಕಾಜೋಲ್​ ಬೆಳ್ಳಗಾಗಲು ಮಾಡಿದ್ದೇನು? ರಹಸ್ಯ ಬಿಚ್ಚಿಟ್ಟ ನಟಿ...

By Suvarna News  |  First Published Apr 14, 2023, 6:34 PM IST

ಕೃಷ್ಣ ಸುಂದರಿ, ಡಸ್ಕಿ ಬ್ಯೂಟಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ನಟಿ ಕಾಜೋಲ್​, ಏಕಾಏಕಿ ಬೆಳ್ಳಗಾಗಿದ್ದು ಹೇಗೆ? ನಟಿ ಹೇಳಿದ್ದೇನು?
 


ಯಶಸ್ವಿ ನಟಿಯಾಗಬೇಕು ಎಂದರೆ ಗ್ಲಾಮರಸ್​ (glamorous) ಲುಕ್​ ಇರಬೇಕು ಎನ್ನುವುದು ಜನಜನಿತ ಮಾತು. ತೆಳ್ಳಗೆ, ಬೆಳ್ಳಗೆ ಇದ್ದರಷ್ಟೇ ಪ್ರಿಫರೆನ್ಸ್​. ಆದರೆ ಇದನ್ನು ಮೀರಿ ಹಲವು ನಟಿಯರು ಕೃಷ್ಣ ಸುಂದರಿ ಎನಿಸಿಕೊಂಡಿದ್ದು, ಬೆಳ್ಳಿ ಪರದೆಯಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ. ಸ್ಯಾಂಡಲ್​ವುಡ್​ ಮಟ್ಟಿಗೆ ಹೇಳುವುದಾದರೆ ಸರಿತಾ. ಕೃಷ್ಣವರ್ಣವಾದರೂ ಈಕೆಯ ಅಭಿನಯಕ್ಕೆ  ಮನಸೋಲದವರೇ ಇಲ್ಲ, ಹಲವಾರು ಸೂಪರ್​ಹಿಟ್​ ಚಲನಚಿತ್ರಗಳನ್ನು ನೀಡಿ ಮರೆಯಾದ ತಾರೆ ಇವರು. ಇನ್ನು ಬಾಲಿವುಡ್​​ ವಿಷಯಕ್ಕೆ ಬರುವುದಾದರೆ ನಟಿ ಕಾಜೋಲ್​ (Kajol).  1992 ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ 'ಬೇಕುದಿ' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ಈ ಕೃಷ್ಣ ಸುಂದರಿ,  1993 ರಲ್ಲಿ ಶಾರುಖ್ ಖಾನ್ ಅವರೊಂದಿಗೆ 'ಬಾಜಿಗರ್' ಚಿತ್ರದಲ್ಲಿ ಕಾಣಿಸಿಕೊಂಡರು, ಚಿತ್ರವು ಸೂಪರ್ ಡೂಪರ್ ಹಿಟ್ ಆಯಿತು, ಇದಾದ ಬಳಿಕ  ಹಲವಾರು ಹಿಟ್​ ಚಿತ್ರಗಳನ್ನು ನೀಡಿದ್ದರು. ಶಾರುಖ್​ ಖಾನ್ ಜೊತೆ ನಟಿಸಿದ 'ದಿಲ್‌ವಾಲೆ ದುಲಾನಿಯಾ ಲೇ ಜಾಯೇಂಗೆ' ಮಾತ್ರ ಇಂದಿಗೂ ಜನಜನಿತವೇ. 

ಆದರೆ ಇಷ್ಟೊಂದು ಅದ್ಭುತ ಅಭಿನಯ, ನೃತ್ಯ ಕೌಶಲವಿದ್ದರೂ, ಇಷ್ಟೊಂದು ಬ್ಲಾಕ್​ಬಸ್ಟರ್​ (Blockbuster) ಸಿನಿಮಾ ಕೊಟ್ಟಿದ್ದರೂ ಹಾಗೂ ನೋಡಲು ಕಪ್ಪಾಗಿದ್ದರೂ ಎಂಥವರನ್ನೂ ಮರಳು ಮಾಡುವ ಸೌಂದರ್ಯ ಹೊಂದಿದ್ದರೂ ಬಣ್ಣ ಬಿಳಿಯಾಗಿಲ್ಲ ಎನ್ನುವ ಕಾರಣಕ್ಕೆ ಈಕೆ ಕೂಡ ಸಾಕಷ್ಟು ನೋವು ಅನುಭವಿಸಿದವರೇ.  ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕೆಲ ದಿನಗಳ ಬಳಿಕ ತಮ್ಮ ಬಣ್ಣದಿಂದಾಗಿ ತಾವು ಅನುಭವಿಸಿದ್ದ ಕಷ್ಟದ ಬಗ್ಗೆ ನಟಿ ಕಾಜೋಲ್ ಈ ಹಿಂದೆ ಮಾತಾಡಿದ್ದಾರೆ. 1999ರಲ್ಲಿ ಅಜೆಯ್​ ದೇವಗನ್​ (Ajay Devagan) ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜೋಲ್ 23 ವರ್ಷಗಳ ಖುಷಿಯ ಸಂಸಾರಿಕ ಜೀವನ ನಡೆಸುತ್ತಿದ್ದಾರೆ. 1975 ಆಗಸ್ಟ್​ 5ರಂದು ಜನಿಸಿರುವ ಕಾಜೋಲ್​ ಅವರಿಗೆ ಈಗ 47 ವರ್ಷ ಪೂರ್ಣಗೊಂಡಿದೆ. 23 ವರ್ಷಗಳ ಈ ದಾಂಪತ್ಯ ಜೀವನದಲ್ಲಿ  ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗನ ಹೆಸರು ಯುಗ್, ಮಗಳ ಹೆಸರು ನ್ಯಾಸಾ.

Tap to resize

Latest Videos

Ajay Devagn, Kajol: ಲವ್​ ಆಗಿದೆ ಎಂದು ತಿಳಿದಾಗ ಬೇರೆಯವ್ರ ಜೊತೆ ಡೇಟಿಂಗ್​ನಲ್ಲಿದ್ವಿ ಎಂದ ನಟ!

ಆದರೆ ಇವೆಲ್ಲವುಗಳ ನಡುವೆಯೇ ಕಾಜೋಲ್​ ಈಗ ಎಲ್ಲರಿಗೂ ಸರ್​ಪ್ರೈಸ್​ ಕೊಟ್ಟಿದ್ದಾರೆ. ಅದೇನೆಂದರೆ ಕೃಷ್ಣ ಸುಂದರಿ ಬಿಳಿ ಬಣ್ಣದ ಸುಂದರಿಯಾಗಿ ಬದಲಾಗಿದ್ದಾರೆ. ಮೇಕಪ್​ ಮೂಲಕ ಇಷ್ಟು ಬೆಳ್ಳಗೆ ಮಾಡಲು ಸಾಧ್ಯವಿಲ್ಲ ಎಂದು ಅರಿತವರು ಹಲವಾರು ರೀತಿಯಲ್ಲಿ ನಟಿಯ ಬಣ್ಣದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಡಸ್ಕಿ ಬ್ಯೂಟಿ ಎನಿಸಿಕೊಂಡಿದ್ದ ಕಾಜೋಲ್ ಈಗ ಸಿಕ್ಕಾಪಟ್ಟೆ ಫೇರ್ ಆಗಿ ಕಾಣಿಸ್ತಾರಲ್ಲ. ಏನಿದರ ಔಚಿತ್ಯ ಎಂದು ಹೋದಲ್ಲಿ, ಬಂದಲ್ಲಿ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಸೆಲೆಬ್ರಿಟಿಗಳು ಎಂದ ಮೇಲೆ ಕೇಳಬೇಕೆ? ತಮ್ಮ ಅಂಗಾಂಗ ಸರಿ ಪಡಿಸಿಕೊಳ್ಳಲು ಕೋಟಿ ಕೋಟಿ ರೂಪಾಯಿ ಶಸ್ತ್ರ ಚಿಕಿತ್ಸೆಗಾಗಿ ಸುರಿಯುವವರು (Operation) ಇದ್ದಾರೆ. ಅದರಲ್ಲಿಯೂ ನಟಿಯರು ಎಂದ ಮೇಲೆ ಅವರ ಕಣ್ಣು, ಮೂಗು, ಬಾಯಿ ಮಾತ್ರವಲ್ಲದೇ ಸ್ತನದ ಗಾತ್ರ ಎಲ್ಲವೂ ಹೀಗೆಯೇ ಇರಬೇಕು ಎಂಬ ಸಿದ್ಧ ಮಾದರಿ ಇರುವ ಕಾರಣ, ಸಿನಿಮಾದಲ್ಲಿ ನೆಲೆಯೂರಲು ಬೇಕು-ಬೇಡದ ಶಸ್ತ್ರಚಿಕಿತ್ಸೆಯ ಮೊರೆ ಹೋಗುವುದು ಉಂಟು. ಅದೇ ರೀತಿ ಕಾಜೋಲ್​  ಕೂಡ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದವರೇ ಹೆಚ್ಚು. 

 ಆದರೆ ಈ ಎಲ್ಲಾ ಗುಸುಗುಸುಗಳಲ್ಲಿ ಕಾಜೋಲ್​ ತೆರೆ ಎಳೆದಿದ್ದಾಳೆ. ‘ನಾನು ಬೆಳ್ಳಗೆ ಬದಲಾಗಲು ಸಾಕಷ್ಟು ಚಿಕಿತ್ಸೆಗಳನ್ನು ಪಡೆದುಕೊಂಡಿದ್ದೇನೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ.  ಆದರೆ ಅದು ಶುದ್ಧ ತಪ್ಪು' ಎಂದಿರುವ ನಟಿ, ಹಿಂದೆಲ್ಲಾ  'ಕಪ್ಪಗಿದ್ದಾಳೆ. ದಪ್ಪ ಇದ್ದಾಳೆ. ಯಾವಾಗಲೂ ಕನ್ನಡಕ ಹಾಕಿಕೊಂಡಿರುತ್ತಾಳೆ' ಎಂದೆಲ್ಲಾ ಆಡಿಕೊಳ್ಳುತ್ತಿದ್ದರು. ಆದರೆ ನಾನು ನನ್ನ ಬಣ್ಣದ ಬಗ್ಗೆ ಯಾವಾಗಲೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ, ಆಡಿಕೊಳ್ಳುವವರ ಬಾಯನ್ನು ಮುಚ್ಚಿಸಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು, ಅಂಥ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಂಡರೆ ಬದುಕಲು ಆಗುವುದಿಲ್ಲ. ಆದರೆ ಈಗ ಬೆಳ್ಳಗಾಗಲು ಕಾರಣವೂ ಇದೆ. ಆದರೆ ಅದು ಶಸ್ತ್ರಚಿಕಿತ್ಸೆಯಂತೂ ಅಲ್ಲವೇ ಅಲ್ಲ ಎಂದಿದ್ದಾರೆ.

ನೈಸಾ ಜೊತೆ ಕಾಜೋಲ್‌ ಫೋಟೋಶೂಟ್‌; ಅಮ್ಮ ಮಗಳ ಜೋಡಿಗೆ ಹಾಟ್ ಎಂದ ನೆಟ್ಟಿಗರು!
 
'10-12 ವರ್ಷಗಳ ಹಿಂದೆ ನಾನು ಹೆಚ್ಚು ಹೆಚ್ಚು ಸಿನಿಮಾ ಚಿತ್ರೀಕರಣದಲ್ಲಿ (Shooting) ಭಾಗವಹಿಸುತ್ತಿದ್ದೆ. ಅದಕ್ಕಾಗಿ ಹೊರಗಡೆ ಸುತ್ತಾಡುತ್ತಿದ್ದೆ. ಬಿಸಿಲು- ಧೂಳು ಎನ್ನಲೇ ಶೂಟಿಂಗ್​ನಲ್ಲಿ ಪಾಲ್ಗೊಳ್ಳಬೇಕಿತ್ತು. ಹಾಗಾಗಿ ನನ್ನ ಚರ್ಮ ಕಪ್ಪಗಾಗಿತ್ತು. ಆದರೆ ಕಳೆದ 10 ವರ್ಷಗಳಿಂದ ನಾನು ಮನೆಯಲ್ಲಿ ಇದ್ದೇನೆ.  ಸೂರ್ಯನ ಕಿರಣಗಳಿಂದ ದೂರ ಇರುವುದರಿಂದ ಸ್ಕಿನ್ ಕಲರ್ ಬಂದಿದೆ. ಅಷ್ಟೇ, ಅದು ಬಿಟ್ಟು ನಾನು ಯಾವುದೇ ಸರ್ಜರಿ ಮಾಡಿಸಿಕೊಳ್ಳಲಿಲ್ಲ ಎಂದಿದ್ದಾರೆ.  

click me!