
ಮಾಧವನ್ ಒಂದು ಕಾಲದ ಮೋಸ್ಟ್ ರೊಮ್ಯಾಂಟಿಕ್ ನಟ. ಒಂದು ಹಂತದ ಬಳಿಕ ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸುತ್ತ ಇಮೇಜ್ ಬಿಲ್ಡ್ ಮಾಡಿದವರು. ಇವರು ಕೋಚಿಂಗ್ ಗೆ ಬಂದವಳ ಜೊತೆಗೆ ಡೇಟಿಂಗ್ ಮಾಡಿ ಸುದ್ದಿಯಾಗಿದ್ದಾರೆ. ಸ್ಟಾರ್ ಇಮೇಜ್ ನ ಈ ನಟನ ಡೇಟಿಂಗ್ ವಿಚಾರ ವೈರಲ್ ಆಗ್ತಿದೆ. ಎಲ್ಲರಿಗೂ ತಿಳಿದಿರುವಂತೆ 2000ರಲ್ಲಿ ಮಣಿರತ್ನಂ ಅವರ 'ಅಲೈಪಾಯುದೆ' ಸಿನಿಮಾ ಮೂಲಕ ಸಖತ್ ಫೇಮಸ್ ಆದವರು ಆರ್ ಮಾಧವನ್. ಈ ಸಿನಿಮಾದಿಂದ ಅವರು ರೊಮ್ಯಾಂಟಿಕ್ ಇಮೇಜ್ ಗಳಿಸಿಕೊಂಡರು. 'ಕಣ್ಣತಿಲ್ ಮುತಮಿತ್ತಲ್', 'ರನ್', 'ಅನ್ಬೆ ಶಿವಂ', 'ಆಯುತ ಎಜುತು', 'ರೆಹನಾ ಹೇ ತೆರೆ ದಿಲ್ ಮೇ', 'ವಿಕ್ರಮ್', 'ತನು ವೆಡ್ಸ್ ಮನು' ಮೊದಲಾದ ಸಿನಿಮಾಗಳು ಆರ್ ಮಾಧವನ್ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಚಿತ್ರಗಳು. ರೊಮ್ಯಾಂಟಿಕ್ ಲುಕ್‌ನಿಂದ ಆಚೆ ಕೂಡ ಮಾಧವನ್ ಅವರು ಭಿನ್ನ ಪಾತ್ರಗಳಿಗೆ ಬಣ್ಣ ತುಂಬಿದ್ದಾರೆ.
ಇದೀಗ ಮಾಧವನ್ ಅವರ ಹಳೇ ಲವ್ ಸ್ಟೋರಿ ಮತ್ತೆ ವೈರಲ್ ಆಗಿದೆ. ಅಂದ ಹಾಗೆ ಮಾಧವನ್ ಪಟಾಯಿಸಿದ್ದು ತನ್ನ ಕೋಚಿಂಗ್ ಸೆಂಟರಿಗೆ ಬಂದಿದ್ದ ಹುಡುಗಿಯನ್ನೆ. ಆರ್ ಮಾಧವನ್ ಅವರು ಚಿತ್ರರಂಗಕ್ಕೆ ಭೇಟಿ ನೀಡುವ ಮುನ್ನವೇ ಸರಿತಾ ಅವರನ್ನು ಭೇಟಿಯಾಗಿದ್ದರು. 90ರ ದಶಕದಲ್ಲಿ ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದ ಸರಿತಾ ಅವರು ಕೊಲ್ಲಾಪುರದಲ್ಲಿ ಪಬ್ಲಿಕ್ ಸ್ಪೀಕಿಂಗ್ ವರ್ಕ್‌ಶಾಪ್‌ವೊಂದರಲ್ಲಿ ಭಾಗವಹಿಸಿದ್ದರು. ಇಲೆಕ್ಟ್ರಾನಿಕ್ಸ್‌ನಲ್ಲಿ ಇಂಜಿನಿಯರಿಂಗ್ ಪೂರೈಸಿದ ಮಾಧವನ್ ಆಗ ಒಳ್ಳೆ ಮೋಟಿವೇಶನಲ್ ಸ್ಪೀಕರ್ ಕೂಡ ಆಗಿದ್ದರು. ಜೊತೆಗೆ ಪಬ್ಲಿಕ್ ಸ್ಪೀಕಿಂಗ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅವರ ಈ ಕ್ಲಾಸ್‌ಗೆ ಸರಿತಾ ಬಂದಿದ್ದಾರೆ. ಇವರಿಂದ ಕೋಚಿಂಗ್ ಪಡೆದ ಬಳಿಕ ಗಗನಸಖಿಯಾಗಿಯೂ ಆಯ್ಕೆ ಆಗಿಬಿಟ್ಟಿದ್ದಾರೆ. ಆ ಖುಷಿಗೆ ಸರಿತಾಗೆ ತನ್ನ ಕೋಚ್ ಗೆ ಡಿನ್ನರ್ ಪಾರ್ಟಿ ಕೊಡಿಸೋ ಐಡಿಯಾ ಬಂದಿದೆ. ಈ ಐಡಿಯಾವೇ ಮುಂದೆ ಅವರ ಬದುಕನ್ನ ಬದಲಿಸಿಬಿಟ್ಟಿತು.
ಸರಿತಾ ಜೊತೆ ಡಿನ್ನರ್ ಗೇನೋ ಮ್ಯಾಡಿ ಹೋದ್ರು, ಆದ್ರೆ ಆ ಹೊತ್ತಿಗೆ ಲೈಫ್ ಲಾಂಗ್ ಈಕೆ ಜೊತೆ ಡಿನ್ನರ್ ಮಾಡಬಹುದು ಎಂಬ ಯೋಚನೆ ಏನೂ ಅವರಿಗೆ ಬಂದಿರಲಿಲ್ಲವಂತೆ. ಆದರೆ ಡಿನ್ನರ್ ಬಳಿಕ ಈ ಇಬ್ಬರೂ ಆಗಾಗ ಭೇಟಿ ಆಗತೊಡಗ್ತಾರೆ. ನಿಧಾನಕ್ಕೆ ಇದು ಬೇರೆ ರೂಪ ಪಡೆಯುತ್ತೆ. 'ಸರಿತಾ ನನ್ನ ವಿದ್ಯಾರ್ಥಿನಿಯಾಗಿದ್ದಳು. ಒಂದು ದಿನ ಡೇಟ್‌ಗೆ ಹೋಗೋಣ ಅಂತ ಕರೆದಳು. ನಾನು ಆಗ ಇದೇ ಅವಕಾಶ ಅಂತ ಅಂದುಕೊಂಡೆ, ಆದರೆ ಇದೇ ಹುಡುಗಿಯ ಜೊತೆ ಮದುವೆ ಆಗ್ತೀನಿ ಅಂತ ಮಾತ್ರ ಅಂದುಕೊಂಡಿರಲಿಲ್ಲ. ಅವಳು ನೀಡಿದ ಅವಕಾಶ ಬಳಸಿಕೊಂಡೆ, ಪ್ರೀತಿ ಆಯ್ತು, ಮದುವೆಯೂ ಆಯ್ತು' ಎಂದು ಮಾಧವನ್ ಈಗ ಹೆಮ್ಮೆಯಿಂದ ಹೇಳ್ತಾರೆ.
ಸಂಕಷ್ಟಕ್ಕೆ ಸಿಲುಕಿದ್ರಾ ಅಕ್ಷಯ್ ಕುಮಾರ್? ಬೊರಿವಿಲಿ ಬಳಿಕ ವರ್ಲಿ ಮನೆ ₹80 ಕೋಟಿಗೆ ಮಾರಾಟ
ಇನ್ನೊಂದು ವಿಶೇಷ ಅಂದರೆ ಮದುವೆಯಾದ ನಂತರವೇ ಆರ್ ಮಾಧವನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹೆಸರು ಮಾಡಿದರು. 2000ರಲ್ಲಿ ಮಣಿರತ್ನಂ ಅವರ ಸಿನಿಮಾ ಮೂಲಕ ಆರ್ ಮಾಧವನ್ ಅವರು ರೊಮ್ಯಾಂಟಿಕ್ ಇಮೇಜ್ ಗಳಿಸಿಕೊಂಡರು.
ಪ್ರೇಮಿಗಳ ದಿನಕ್ಕೆ ಕಂಗನಾ ರಣಾವತ್ ಗುಡ್ನ್ಯೂಸ್: ಸದ್ಯ ದೀಪಿಕಾಗೆ ಆಹ್ವಾನ! ವಿಡಿಯೋ ಶೇರ್ ಮಾಡಿದ ಸಂಸದೆ
ಆದರೆ ಇವತ್ತಿಗೂ ಅವರು ತನ್ನೆಲ್ಲ ಸಾಧನೆ ಹಿಂದಿರುವ ಪತ್ನಿಯನ್ನು ಅಭಿಮಾನದಿಂದ ಕಾಣುತ್ತಾರೆ. ಈಕೆ ನನ್ನ ಸಾಧನೆಯ ಹಿಂದಿನ ಶಕ್ತಿ ಎನ್ನುತ್ತಾರೆ. ಸಿನಿಮಾದಲ್ಲಿ ನಟಿಸಲಾರಂಭಿಸಿದ ಮೇಲೂ ಔಟ್ ಡೋರ್ ಶೂಟ್ ಇದ್ದಾಗಲೆಲ್ಲ ಇವರು ಪತ್ನಿಯನ್ನು ಶೂಟ್ ಗೆ ಕರೆದೊಯ್ಯುತ್ತಿದ್ದರು. ನಾಯಕಿ, ಸಹ ಕಲಾವಿದರನ್ನು ಪರಿಚಯಿಸಿ ಕಂಫರ್ಟ್ ಫೀಲ್ ನೀಡುತ್ತಿದ್ದರು. ಇಂದಿಗೂ ಮದುವೆಯಾಗಿ ಇಷ್ಟು ಕಾಲವಾದರೂ ಮ್ಯಾಡಿ ಸರಿತಾ ಎವರ್ ಗ್ರೀನ್ ಕಪಲ್ ಆಗಿಯೇ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.