
ಒಂದು ಕಾಲದಲ್ಲಿ ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿಯ ನಟನೆ ನೋಡಲೆಂದೇ ಥಿಯೇಟರ್‌ಗೆ ಜನ ಬರುತ್ತಿದ್ದ ಕಾಲವಿತ್ತು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿರುವ ಶಾಮಿಲಿ ಅತ್ಯುತ್ತಮ ಬಾಲಕಲಾವಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ಶಾಮಿಲಿಯ ಅಕ್ಕ ಯಾರು ಅಂತ ನೀವು ಕೇಳಬಹುದು. ಆಕೆ ಕೂಡ ಸಿನಿರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಬೇರಾರು ಅಲ್ಲ ಶಾಲಿನಿ ಅಜಿತ್. ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದಾರೆ. ಅಜಿತ್ ಯಾರು? ತಮಿಳುಚಿತ್ರರಂಗದ ಹೀರೋ ತಲ ಅಜಿತ್ ಕುಮಾರ್.
80ರ ದಶಕದಲ್ಲಿ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಿಯಿಸಿರುವ ಶಾಲಿನಿ ಅತ್ಯಂತ ಯಶಸ್ವಿ ಬಾಲ ಕಲಾವಿದೆಯಾಗಿದ್ದರು. ನಟನೆಯಿಂದ ಕೊಂಚ ವಿರಾಮ ಪಡೆದಿದ್ದ ಶಾಲಿನಿ 1997 ಲ್ಲಿ ಮಲಯಾಳಂ ಮತ್ತು ತಮಿಳು ಭಾಷಾ ಚಲನಚಿತ್ರಗಳ ಮೂಲಕ ಪ್ರಮುಖ ನಾಯಕಿಯಾಗಿ ಕಂಬ್ಯಾಕ್ ಮಾಡಿದರು. 24 ಏಪ್ರಿಲ್ 2000ರಂದು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಾದ ನಂತರ ಶಾಲಿನಿ ಸಿನಿಮಾದಲ್ಲಿ ನಟಿಸಿಲ್ಲ.
ಪ್ರೊಟೆಸ್ಟಂಟ್ ಮಲಯಾಳಿ ಕ್ರಿಶ್ಚಿಯನ್ ಕುಟುಂಬದಲ್ಲಿ 20 ನವೆಂಬರ್ 1979ರಂದು ಬಾಬು ಮತ್ತು ಆಲಿಸ್ ದಂಪತಿಗೆ ಶಾಲಿನಿ ಜನಿಸಿದವರು. ಕೊಲ್ಲಂ ಮೂಲದ ಬಾಬು ನಟನಾಗುವ ಮಹತ್ವಾಕಾಂಕ್ಷೆಯೊಂದಿಗೆ ಮದ್ರಾಸ್‌ಗೆ ವಲಸೆ ಬಂದಿದ್ದರು. ಶಾಲಿನಿ ಬಾಲಕಲಾವಿದೆಯಾಗಿ ಕನ್ನಡದ ʼಈ ಜೀವ ನಿನಗಾಗಿʼ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಇದರಲ್ಲಿ ಡಾ.ವಿಷ್ಣುವರ್ಧನ್ ಮತ್ತು ಊರ್ವಶಿ ಮುಖ್ಯ ಪಾತ್ರಗಳಲ್ಲಿದ್ದರು. ಲತಾ ಎಂಬ ಪಾತ್ರದಲ್ಲಿ ಬೇಬಿ ಶಾಲಿನಿ ಅಭಿನಯಿಸಿದ್ದು, ಈ ಸಿನಿಮಾದಲ್ಲಿ ಹಾಡೂ ಹಾಡಿದ್ದಾಳೆ.
ಶಾಲಿನಿ 1983ರ "ಎಂಟೆ ಮಮಟ್ಟಿಕುಟ್ಟಿಯಮ್ಮಕ್ಕು" ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಳು. 1999ರ "ಅಮರ್ಕಳಂ" ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಅಜಿತ್ ಅವರನ್ನು ಭೇಟಿಯಾದರು. ಅಮರ್ಕಳಂ ಚಿತ್ರದಲ್ಲಿ ಮೊದಲ ಬಾರಿಗೆ ಶಾಲಿನಿಯೊಂದಿಗೆ ಕೆಲಸ ಮಾಡಿದಾಗ ತನಗೆ ಮೊದಲ ನೋಟದಲ್ಲೇ ಪ್ರೇಮವಾಗಿತ್ತು ಎಂದು ಅಜಿತ್ ಮುಂದೆ ಒಪ್ಪಿಕೊಂಡಿದ್ದರು. ಆದರೆ ಒಂದು ಆಕಸ್ಮಿಕ ಘಟನೆ ಅವರನ್ನು ಇನ್ನಷ್ಟು ಹತ್ತಿರ ತಂದಿತು.
ಒಂದು ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ಅಜಿತ್ ನಟಿಸುವಾಗ ಆಕಸ್ಮಿಕವಾಗಿ ಶಾಲಿನಿಯ ಮಣಿಕಟ್ಟಿಗೆ ಪೆಟ್ಟು ಬಿತ್ತು. ತೀವ್ರ ರಕ್ತಸ್ರಾವ ಶುರುವಾಯಿತು. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಅಜಿತ್ ಆಕೆಯತ್ತ ತುಂಬಾ ಕಾಳಜಿ, ಪ್ರೇಮ ತೋರಿಸಿ ಅವಳನ್ನು ನೋಡಿಕೊಂಡ. ಅವನ ಸಹಾನುಭೂತಿ ಗುಣ ಅವಳ ಹೃದಯವನ್ನು ಕರಗಿಸಿತು. ಅವರು ಡೇಟಿಂಗ್ ಪ್ರಾರಂಭಿಸಿದರು.
ಏಪ್ರಿಲ್ 24, 2000ರಂದು ಇಬ್ಬರೂ ಮದುವೆಯಾದರು. ಇಬ್ಬರ ಮೊದಲ ಮಗು, ಮಗಳು, ಅನೌಷ್ಕಾಳನ್ನು ಜನವರಿ 2008ರಲ್ಲಿ ಸ್ವಾಗತಿಸಿದರು. ಎರಡನೆಯ ಮಗ ಆದ್ವಿಕ್ ಮಾರ್ಚ್ 2015ರಲ್ಲಿ ಜನಿಸಿದ. ಈ ದಂಪತಿಯ ದಾಂಪತ್ಯಕ್ಕೆ ಈಗ 25 ವರ್ಷದ ಸಂಭ್ರಮ. ಅಜಿತ್ ನಿಜವಾಗಿಯೂ ಫ್ಯಾಮಿಲಿ ಮ್ಯಾನ್. ಶಾಲಿನಿಯ ಲೈಫು ಒಂಥರಾ ಸರ್ವಧರ್ಮ ಸಮನ್ವಯ. ಹೇಗಂದರೆ ಅಜಿತ್ ಕುಮಾರ್ ಅವರದು ಹಿಂದೂ ಬ್ರಾಹ್ಮಣ ಅಯ್ಯರ್ ಕುಟುಂಬ. ಶಾಲಿನಿಯ ತಂದೆ ಮುಸ್ಲಿಂ. ಅವಳ ತಾಯಿ ಮಲಯಾಳಿ ಕ್ರಿಶ್ಚಿಯನ್. ಶಾಲಿನಿ ಮತ್ತು ಅಜಿತ್ ಅವರದು ಒಂಥರ ಅಂತರ್ಧರ್ಮೀಯ ವಿವಾಹ. ಆದರೆ ಧರ್ಮ ಇಬ್ಬರಿಗೂ ಎಂದಿಗೂ ಅಡ್ಡಿಯಾಗಲಿಲ್ಲ. ಅಜಿತ್ ಮತ್ತು ಶಾಲಿನಿ ಇಬ್ಬರಿಗೂ ತಮ್ಮ ಜೀವನ ಖಾಸಗಿ ವಿಷಯ.
16 ವರ್ಷ ತುಂಬಿದ ಮಗಳಿಗೆ ನಟಿ ಗೌತಮಿ ಈ ಉಡುಗೊರೆ ಕೊಟ್ಟಾಗ ಶಾಕ್ ಆದ ಮಗಳು!
ಅಜಿತ್ ಮತ್ತು ಶಾಲಿನಿ ನಡುವೆ ಇನ್ನೊಂದು ಸಾಮಾನ್ಯ ವಿಷಯವಿದೆ. ಇಬ್ಬರೂ ಕ್ರೀಡಾ ಪ್ರೇಮಿಗಳು. ಶಾಲಿನಿ ಬ್ಯಾಡ್ಮಿಂಟನ್ ಚೆನ್ನಾಗಿ ಆಡುತ್ತಾರೆ. ಪತಿ ಅಜಿತ್ ಮನೆಯಲ್ಲಿಯೇ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಿದ್ದಾರೆ.
ಶಾಲಿನಿ ಬಾಲಿವುಡ್ ಚಿತ್ರದಲ್ಲೂ ನಟಿಸಿದ್ದಾರೆ. ಅನಿಲ್ ಕಪೂರ್ ಜೊತೆಗೆ ಸಹ. ರಖ್ವಾಲಾ (1989) ಚಿತ್ರದಲ್ಲಿ ಬಾಲನಟಿಯಾಗಿ ಶಬಾನಾ ಅಜ್ಮಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡರು. ಕಾದಲುಕ್ಕು ಮರಿಯಧೈ ಚಿತ್ರದಲ್ಲಿ ವಿಜಯ್ ದಳಪತಿ ಅವರ ನಾಯಕಿಯಾಗಿ, ಅಮರಕಲಂ ಚಿತ್ರದಲ್ಲಿ ಅಜಿತ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ನಟಿಸಿದರು. ಆಕೆಯ ಕೊನೆಯ ಚಿತ್ರ ಪಿರಿಯದ ವರಂ ವೆಂಡುಮ್ (2001).
ಡಯಟ್ ಇಲ್ಲ, ಜಿಮ್ ಇಲ್ಲ: 8 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡ ನಟಿ ಕೀರ್ತಿ ಸುರೇಶ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.