ಸುಶಾಂತ್ ಸಿಂಗ್ ರೂಮ್ ಲಾಕರ್ ಒಡೆದ ವ್ಯಕ್ತಿಗೆ ಕಂಡಿದ್ದೇನು? ಟ್ವಿಸ್ಟ್ ಕೊಟ್ಟ ರಫಿ ಹೇಳಿಕೆ!

Suvarna News   | Asianet News
Published : Aug 23, 2020, 12:53 PM ISTUpdated : Aug 23, 2020, 01:03 PM IST
ಸುಶಾಂತ್ ಸಿಂಗ್ ರೂಮ್ ಲಾಕರ್ ಒಡೆದ ವ್ಯಕ್ತಿಗೆ ಕಂಡಿದ್ದೇನು? ಟ್ವಿಸ್ಟ್ ಕೊಟ್ಟ ರಫಿ ಹೇಳಿಕೆ!

ಸಾರಾಂಶ

ನಟ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾದ ಕೋಣೆ ಬಾಗಿಲು ಬೀಗ ಒಡೆದ ರಫಿ ಶೇಖ್‌ ವಿಚಾರಣೆಯಲ್ಲಿ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ.

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನೇ ದಿನೇ  ಊಹಿಸಲಾಗದ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚಿಗೆ ಇಡಿ ಕಛೇರಿಯಲ್ಲಿ ವಿಚಾರಣೆಗೆ ಹಾಜರಾದ ಬೀಗ ರಿಪೇರಿ ಮಾಡುವ  ರಫಿ ಶೇಖ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.

ಸುಶಾಂತ್ ಮನೆಯಿಂದ ಬಂದು ಈಗ ರಿಲೀಫ್ ಎಂದ ರಿಯಾ: ಮಹೇಶ್ ಭಟ್ ಜೊತೆಗಿನ ವಾಟ್ಸಾಪ್ ಚಾಟ್ ವೈರಲ್ 

ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಕೋಣೆಗೆ ಕಂಪ್ಯೂಟರ್‌ ಲಾಕ್‌ ಅಳವಡಿಸಲಾಗಿದೆ. ಒಮ್ಮೆ ಓಪನ್ ಮಾಡಿ ಪ್ರವೇಶಿಸಿದ ನಂತರ ಹೊರ ಬರಲು ಓಪನ್ ಮಾಡುವುದಕ್ಕೆ ಪಾಸ್‌ವರ್ಡ್‌ ತಿಳಿದುಕೊಂಡಿರಬೇಕು ಅದರಲ್ಲೂ ಆಪ್ತರಿಗೆ ಒಂದು ಪಾಸ್‌ವರ್ಡ್‌ ಹಾಗೆ ಕೆಲ ಫ್ರೆಂಡ್ಸ್‌ಗೆ ಒಂದು ಪಾಸ್‌ವರ್ಡ್ ನೀಡಲಾಗಿರುತ್ತದೆ. ಹೀಗೆ ಮಾಡಲು ಕಾರಣವೇ ಯಾರ್ಯಾರೂ ಎಂಟರ್‌ ಆಗ್ತಿದ್ದಾರೆ ಎಂದು ತಿಳಿದುಕೊಳ್ಳಲು.  

ಸುಶಾಂತ್ ಇದ್ದ ಕೋಣೆ ಓಪನ್ ಮಾಡಲು ನಾಲ್ವರು ಬೀಗ ರಿಪೇರಿ ಮಾಡುವವನನ್ನು ಕರೆಸಿದ್ದರು ಎನ್ನಲಾಗಿದೆ. ಆತನ ಹೆಸರು ರಫಿ ಶೇಖ್. 'ಅಂದು ಬೀಗ ಓಪನ್ ಮಾಡಲು ನನಗೆ ಕರೆಸಿದರು ಅಲ್ಲಿ ನಾಲ್ಕು ಜನ ಇದ್ದರು ಆದರೆ ಪೊಲೀಸ್‌ ಇರಲಿಲ್ಲ. ಕಂಪ್ಯೂಟರ್ ಲಾಕ್‌ ಅಳವಡಿಸಿದ ಕಾರಣ ನಾನು ಅದನ್ನು ಒಡೆದು ಓಪನ್ ಮಾಡಬೇಕಾಯ್ತು. ಬೀಗ ಓಪನ್ ಆಗುತ್ತಿದ್ದಂತೆ ಅವರು ನನ್ನನು ಕಳುಹಿಸಿದರು. ಒಳಗೆ ಯಾರಿದ್ದಾರೆ ಏನು ನಡೆಯುತ್ತಿದೆ ಎಂದು ನೋಡಲು ಬಿಡಲಿಲ್ಲ. ಕಂಪ್ಯೂಟರ್‌ ಲಾಕ್‌ ಅಲ್ವಾ ಎಂದು ನಾನು 1,500-2000 ಹಣ ಡಿಮ್ಯಾಂಡ್ ಮಾಡಿದೆ. ಅವರು ಕೊಡಲು ಒಪ್ಪಿಕೊಂಡರು. ಈ ಘಟನೆ ನಡೆದದ್ದು ಮಧ್ಯಾಹ್ನ ಸುಮಾರು 1.30-1.45ಕ್ಕೆ. ಆ ನಂತರ ಕರೆಕ್ಟ್‌ ಒಂದು ಗಂಟೆಗೆ ಪೊಲೀಸರು ನನಗೆ ಕರೆ ಮಾಡಿ ಬೀಗ ಓಪನ್ ಮಾಡಿದರ ಬಗ್ಗೆ ಮಾಹಿತಿ ಪಡೆದುಕೊಂಡರು' ಎಂದು ರಫಿ ಹೇಳಿಕೆ ನೀಡಿದ್ದಾರೆ.

ಇದೀಗ ರಫಿಗೆ ಬೀಗ ಓಪನ್ ಮಾಡಲು ಹೇಳಿದ ಆ ನಾಲ್ವರು ಯಾರು? ಕಂಪ್ಯೂಟರ್‌ ಪಾಸ್‌ವರ್ಡ್‌ ಏನೆಂದು ಅಳವಡಿಸಲಾಗಿತ್ತು ಎಂದು ಮಾಹಿತಿ ಪಡೆಯಲು ತನಿಖೆ ನಡೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ