ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ವಿಚಾರಣೆ ಮುಂದುವರಿಸಿದ್ದು, ಸುಶಾಂತ್ ಫ್ಲಾಟ್‌ಮೇಟ್ ಸಿದ್ಧಾಥ್ ಪಿಥನಿಯ ವಿಚಾರಣೆ ಇಂದು ನಡೆಯಲಿದೆ.
ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ವಿಚಾರಣೆ ಮುಂದುವರಿಸಿದ್ದು, ಸುಶಾಂತ್ ಫ್ಲಾಟ್‌ಮೇಟ್ ಸಿದ್ಧಾಥ್ ಪಿಥನಿಯ ವಿಚಾರಣೆ ಇಂದು ನಡೆಯಲಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಸಂದರ್ಭ ಸಿದ್ಧಾರ್ಥ್ ಪಿಥನಿಯೂ ಸುಶಾಂತ್ ಜೊತೆ ಫ್ಲಾಟ್‌ನಲ್ಲಿದ್ದ. ಇನ್ನು ಅಡುಗೆಯವನೂ ಮನೆಯಲ್ಲಿದ್ದ.
ಜೂನ್ 13 ಹಾಗೂ 14ರಂದು ರಾತ್ರಿ ಸುಶಾಂತ್ ಮನೆಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಸಿಬಿಐ ಸಿದ್ಧಾರ್ಥ್‌ನನ್ನುವಿಚಾರಣೆಗೊಳಪಡಿಸಲಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮೊದಲು ನೋಡಿದ ಪ್ರಕರಣದ ಪ್ರಮುಖ ಸಾಕ್ಷಿ ಸಿದ್ಧಾರ್ಥ್‌ನನ್ನು ಸಿಬಿಐ ವಿವರವಾಗಿ ವಿಚಾರಣೆ ನಡೆಸಲಿದೆ.
ಸುಶಾಂತ್ ಸಾವಿನ ತನಿಖೆ ವೇಗ ಹೆಚ್ಚಿಸಲು 5 ವಿಶೇಷ ತಂಡ ರಚಿಸಿದ CBI
ಇಂದು ಸಿಬಿಐ ಕೀ ಮೇಕರ್‌ನನ್ನೂ ವಿಚಾರಣೆ ನಡೆಸಲಿದೆ. ಸುಶಾಂತ್ ಮನೆಯ ಅಡುಗೆಯವನನ್ನೂ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ. ಅಶೋಕ್ ಬಹಳಷ್ಟು ಸಮಯದಿಂದ ಸುಶಾಂತ್ ಮನೆಯಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ. 2019ರಲ್ಲಿ ಅಶೋಕ್‌ನನ್ನು ರಿಯಾ ಚಕ್ರವರ್ತಿ ಕೆಲಸದಿಂದ ತೆಗೆದುಹಾಕಿದ್ದಳು.
2016ರಿಂದ ಅಶೋಕ್ ಸುಶಾಂತ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಅಶೋಕ್‌ನನ್ನು ಹೊರತುಪಡಿಸಿ ರಜತ್ ಮೇವಾಟಿ ಜನವರಿ 2020ರ ತನಕ ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನೂ ಸಿಬಿಐ ವಿಚಾರಣೆ ನಡೆಸಲಿದೆ.
ಪೊಲೀಸರ ಆದೇಶದಂತೆ ತಡ ರಾತ್ರಿ ಸುಶಾಂತ್ ಮೃತದೇಹ ಪೋಸ್ಟ್‌ಮಾರ್ಟಂ
ಶನಿವಾರ ಸಿಬಿಐ ಸಿದ್ಧಾರ್ಥ್ ಪಿಥನಿ ಹಾಗೂ ಅಡುಗೆಯವನಾದ ನೀರಜ್ ಮುಂದೆ ಸೀನ್ ರಿಕ್ರಿಯೇಟ್ ಮಾಡಲಾಗಿತ್ತು. ಸುಶಾಂತ್ ಸಿಂಗ್ ಜೂನ್ 14 2020ರಂದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.