ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದ್ವೆ ಯಾವಾಗ? ಪಾಪರಾಜಿಗಳು ಕೇಳಿದ ಪ್ರಶ್ನೆಗೆ ನಟಿ ಕೊಟ್ಟ ಉತ್ತರ ಇಲ್ಲಿದೆ.
ತಮನ್ನಾ ಭಾಟಿಯಾ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಅವರು ಅನೇಕ ಕಾರಣಗಳಿಗಾಗಿ ಜನರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತೆಲುಗು ಹಾಗೂ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಜನಪ್ರಿಯರಾಗಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ನಟಿಸಿದ್ದ ಭೋಳಾ ಶಂಕರ್ ಹಿಟ್ ಆಗದಿದ್ದರೂ ತಲೈವರ್ ರಜನಿಕಾಂತ್ ಅವರ ಜೈಲರ್ ಐಟಂ ಸಾಂಗ್ ಹಿಟ್ ಬ್ಯೂಟಿಗೆ ಉತ್ತಮ ಕಿಕ್ ನೀಡುತ್ತಿದೆ. ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ (Vijay Varma) ಡೇಟಿಂಗ್ ಮಾಡುತ್ತಿರುವ ಸುದ್ದಿ ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ತಾರಾ ಜೋಡಿ ಲಸ್ಟ್ ಸ್ಟೋರೀಸ್ 2 ಮೂಲಕ ತೆರೆಯ ಮೇಲೆ ಬಂದಿದೆ. ಈ ಜೋಡಿ ‘ಲಸ್ಟ್ ಸ್ಟೋರಿಸ್ 2’ (Lust Stories 2 Movie) ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದೆ. ಅಲ್ಲಿಂದ ಇವರ ಮಧ್ಯೆ ಪ್ರೀತಿ ಮೂಡಿದೆ. ನಿನ್ನೆ ಅಂದರೆ ಜೂನ್ 29ಕ್ಕೆ ಈ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದು, ಇದಕ್ಕೆ ಸಕತ್ ಬೇಡಿಕೆಯೂ ಬಂದಿದೆ.
ಈ ತಾರಾ ಜೋಡಿ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ ಅದರ ಬಗ್ಗೆ ತುಟಿಕ್ ಪಿಟಿಕ್ ಅಂದಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಖುದ್ದು ತಮನ್ನಾ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ತಾವು ನಿಜವಾಗಿಯೂ ಸಂಬಂಧದಲ್ಲಿ ಇರುವುದಾಗಿ ಖಚಿತಪಡಿಸಿರುವುದು ಬಹುಶಃ ಇದೇ ಮೊದಲು. ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದ ಸಂದರ್ಭದಲ್ಲಿ ತೀರಾ ವೈಯಕ್ತಿಕ ವಿಷಯಗಳನ್ನು (personal matter) ಈ ಜೋಡಿಗೆ ಕೇಳಲಾಗಿತ್ತು. ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಈ ಜೋಡಿಯ ಕಿಸ್ಸಿಂಗ್ ಸೀನ್ ಬಹಳ ಸದ್ದು ಮಾಡುತ್ತಿದೆ. ಮೊದಲು ಭೇಟಿ ಆಗಿದ್ದು ಯಾವಾಗ? ಮೊದಲ ಭೇಟಿ ವೇಳೆ ಒಬ್ಬರ ಮೇಲೆ ಒಬ್ಬರಿಗೆ ಇದ್ದ ಅಭಿಪ್ರಾಯ ಸೇರಿ ಎಲ್ಲ ವಿಚಾರಗಳಲ್ಲಿ ಇವರು ಮುಕ್ತವಾಗಿ ಮಾತನಾಡಿದ್ದರು. ಅದೇ ವೇಳೆ ತಮನ್ನಾ ಅವರು, ವಿಜಯ್ ನನ್ನ ಖುಷಿಯ ಖಜಾನೆ ಎಂದು ಕೂಡ ಹೇಳಿದ್ದರು. ವಿಜಯ್ ವರ್ಮಾ (Vijay Varma) ಅವರು ಸೆಕ್ಸ್ ವಿಚಾರದಲ್ಲಿ ನೇರವಾಗಿ ಮಾತನಾಡಿದ್ದರು. ‘ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಸೆಕ್ಸ್ ಇತ್ತಾ’ ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ಕೂಡಲೇ ತಮನ್ನಾ ‘ಬೋರಿಂಗ್ ಡೇಟ್’ ಎಂದು ಉತ್ತರ ನೀಡಿದರೆ, ಮಧ್ಯೆ ಪ್ರವೇಶಿಸಿದ ವಿಜಯ್ ವರ್ಮಾ, ‘ಮೊದಲ ಡೇಟ್ನಲ್ಲಿ ಯಾವುದೇ ಕಾಮ ಇರಲಿಲ್ಲ’ ಎಂದಿದ್ದರು.
ತಮನ್ನಾ-ವಿಜಯ್ ವರ್ಮಾ ಮೊದಲ ಡೇಟಿಂಗ್ನಲ್ಲಿ ಸೆಕ್ಸ್ ಮಾಡಿದ್ರಾ? ಜೋಡಿ ಹೇಳಿದ್ದೇನು?
ಇದೀಗ ತಮನ್ನಾ ಅವರಿಗೆ ಮದುವೆಯ ಪ್ರಶ್ನೆ ಎದುರಾಗಿದೆ. ತಮನ್ನಾ ಈಗ ತಮ್ಮ ಮದುವೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ. ತಮನ್ನಾ ಮದುವೆ ಫಿಕ್ಸ್ ಆಗಿದೆಯಾ ಎಂಬ ಪ್ರಶ್ನೆ ಅವರಿಗೆ ಸದಾ ಕೇಳುತ್ತಲೇ ಇರಲಾಗುತ್ತಿದೆ. ಮದ್ವೆ ಯಾಕೆ ಆಗ್ತಿಲ್ಲ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿರೋ ನಟಿ, 'ಸದ್ಯ ಮದುವೆಯಾಗುವ ಮೂಡ್ ಇಲ್ಲ' ಎಂದು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ, 'ಸದ್ಯ ನನ್ನ ವೃತ್ತಿಜೀವನವು ಉತ್ತಮವಾಗಿ ಸಾಗುತ್ತಿದೆ. ನಾನು ನನ್ನ ವೃತ್ತಿಜೀವನದತ್ತ ಗಮನ ಹರಿಸಲು ಬಯಸುತ್ತೇನೆ. ನಾನು ಮದುವೆಯನ್ನು ನಂಬುತ್ತೇನೆ ಮತ್ತು ಅದು ಅಂತಿಮವಾಗಿ ಅದು ಸಂಭಿವಿಸುತ್ತದೆ ಎನ್ನುವುದು ತಿಳಿದಿದೆ. ಆದರೆ ಸದ್ಯ ನನ್ನ ಸಂತೋಷದ ಸ್ಥಳ ಎಂದರೆ ಅದು ಶೂಟಿಂಗ್ ಸೆಟ್. ಸದ್ಯ ಮದುವೆಯ ಯೋಚನೆ ಇಲ್ಲ' ಎಂದಿದ್ದಾರೆ.
ತಮನ್ನಾ ಅವರ ಕೆಲಸದ ಬಗ್ಗೆ ಮಾತನಾಡುವುದಾದರೆ, ಅವರು ನಿಖಿಲ್ ಅಡ್ವಾಣಿ ಅವರ ವೇದದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಜಾನ್ ಅಬ್ರಹಾಂ ಮತ್ತು ಶಾರ್ವರಿ ವಾಘ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
Lust Stories 2 : ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪಡೆದ ಸಂಭಾವನೆ ಎಷ್ಷು?