
ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಇಬ್ಬರೂ ಆಗಾಗ ಕ್ಯಾಮರಾ ಕಣ್ಣಿಗೆ ಒಟ್ಟಿಗೆ ಸೆರೆಯಾಗುವ ಮೂಲಕ ಪ್ರೀತಿ-ಪ್ರೇಮದ ವದಂತಿಗೆ ಕಾರಣರಾಗಿದ್ದರು. ಆದರೆ ತಮನ್ನಾ ವಿಜಯ್ ವರ್ಮಾ ಜೊತೆಗಿನ ಪ್ರೀತಿ ಅಧಿಕೃತಗೊಳಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ತಮನ್ನಾ ಸದ್ಯ ಲಸ್ಟ್ ಸ್ಟೋರಿ-2ನಲ್ಲಿ ಬ್ಯುಸಿಯಾಗಿದ್ದಾರೆ. ಲಸ್ಟ್ ಸ್ಟೋರಿ 2 ಪ್ರಮೋಷನ್ ನಡೆಯುತ್ತಿದೆ. ತಮನ್ನಾ ಸೇರಿದಂತೆ ಇಡೀ ತಂಡ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಮೋಷನ್ ವೇಳೆ ತಮನ್ನಾ ಬಾಯ್ ಫ್ರೆಂಡ್ ವಿಜಯ್ ವರ್ಮಾ ಬಗ್ಗೆ ಮಾತನಾಡಿದ್ದಾರೆ.
ಲಸ್ಟ್ ಸ್ಟೋರಿ 2 ನಲ್ಲಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನೋ ಕಿಸ್ಸಿಂಗ್ ಸೀನ್ ಅಂತಿದ್ದ ತಮನ್ನಾ ಲಸ್ಟ್ ಸ್ಟೋರಿಗಾಗಿ ಹಾಟ್ ಅಂಡ್ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಅವರ ಬೆಡ್ ರೂಮ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಜಯ್ ವರ್ಮಾ ಜೊತೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದ ತಮನ್ನಾ ನೋಡಿ ಅಭಿಮಾನಿಗಳು ದಂಗಾಗಿದ್ದರು. ಇದೀಗ ಹಾಟ್ ದೃಶ್ಯಗಳ ಬಗ್ಗೆ ತಮನ್ನಾ ಪ್ರತಿಕ್ರಿಯೆ ನೀಡಿದ್ದಾರೆ.
ಲಸ್ಟ್ ಸ್ಟೋರಿ 2 ಒಪ್ಪಿಕೊಳ್ಳುವ ಮೊದಲು ಕಿಸ್ಸಿಂಗ್ ದೃಶ್ಯಕ್ಕಿಂತ ಹೆಚ್ಚನ ಹಾಟ್ ದೃಶ್ಯಗಳಿವೆ ಎಂದು ಗೊತ್ತಾಗಿ ಅಚ್ಚರಿಯಾಗಿತ್ತು ಎಂದು ಹೇಳಿದ್ದಾರೆ. ಕಿಸ್ಸಿಂಗ್ ದೃಶ್ಯಗಳಿಗಿಂತ ಹ್ಯಾಂಡ್‌ಶೇಕ್ ಅಥವಾ ಹಗ್ ಮಾಡುವ ದೃಶ್ಯಗಳು ಇರಬಹುದು ಎಂದು ಸೂಚಿಸಿದ್ದರಂತೆ. ಆದರೆ ವಿಜಯ್ ವರ್ಮಾ ಜೊತೆಯಾಗಿರುವುದಕ್ಕೆ ಒಪ್ಪಿಕೊಂಡಿರುವುದಾಗಿ ಪರೋಕ್ಷವಾಗಿ ತಮನ್ನಾ ಹೇಳಿದ್ದಾರೆ. ಇನ್ನು ಲಸ್ಟ್ ಸ್ಟೋರಿ 1ರಲ್ಲಿ ವಿಕ್ಕಿ ಕೌಶಲ್ ನಟಿಸಿದ್ದರು. ಪಾರ್ಟ್ ನಲ್ಲಿ ವಿಕ್ಕಿ ಕೌಶಲ್ ಯಾಕಿಲ್ಲ ಎಂದು ಪ್ರಶ್ನೆ ಎದುರಾಯಿತು. ಅವರನ್ನು ಸಂಪರ್ಕ ಮಾಡಲಾಯಿತು. ಆದರೆ ಬ್ಯುಸಿ ಇದ್ದ ಕಾರಣ ಒಪ್ಪಿಕೊಂಡಿಲ್ಲ ಎಂದು ಹೇಳಿದರು.
ಹಲ್‌ಚಲ್ ಎಬ್ಬಿಸಿದ ತಮನ್ನಾ ಹಸಿಬಿಸಿ ದೃಶ್ಯ: ನೋ ಕಿಸ್ಸಿಂಗ್ ಎಂದಿದ್ದ ಮಿಲ್ಕಿ ಬ್ಯೂಟಿ ನೋಡಿ ಫ್ಯಾನ್ಸ್ ಶಾಕ್
ವಿಜಯ್ ವರ್ಮಾ ಪ್ರೀತಿ ಒಪ್ಪಿಕೊಂಡ ತಮನ್ನಾ
ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿದ ನಟಿ ತಮನ್ನಾ ಭಾಟಿಯಾ ವಿಜಯ್ ವರ್ಮಾ ಬಗ್ಗೆ ಬಹಿರಂಗ ಪಡಿಸಿದ್ದಾರೆ. ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ ಎಂದು ಹೇಳಿದರು. 'ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು' ಎಂದು ಹೇಳಿಕೊಂಡಿದ್ದಾರೆ.
ಅವರು ನನ್ನ ಖುಷಿಯ ಖಜಾನೆ: ವಿಜಯ್ ವರ್ಮಾ ಜೊತೆಗಿನ ಪ್ರೀತಿ ಒಪ್ಪಿಕೊಂಡ ನಟಿ ತಮನ್ನಾ
ಅವರು (ವಿಜಯ್ ವರ್ಮಾ) ನಾನು ತುಂಬಾ ಬಾಂಧವ್ಯ ಹೊಂದಿದ ವ್ಯಕ್ತಿ. ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ವೈಯಕ್ತಿಕವಾಗಿದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.