ಸುಶಾಂತ್ ಸಿಂಗ್ ಪುಣ್ಯತಿಥಿ: ಅಪರೂಪದ ವಿಡಿಯೋ ಹಂಚಿಕೊಂಡ ಪ್ರೇಯಸಿ ರಿಯಾ ಚಕ್ರವರ್ತಿ

By Shruthi Krishna  |  First Published Jun 14, 2023, 3:23 PM IST

ಸುಶಾಂತ್ ಸಿಂಗ್ ಪುಣ್ಯತಿಥಿ: ಪ್ರೇಯಸಿ ರಿಯಾ ಚಕ್ರವರ್ತಿ ಬಾಯ್‌ಫ್ರೆಂಡ್ ಸುಶಾಂತ್ ಜೊತೆಗಿನ ಅಪರೂಪದ ವಿಡಿಯೋವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. 


ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಇಂದಿಗೆ (ಜೂನ್ 14) ಮೂರು ವರ್ಷ. 2020 ಜೂನ್ 14 ಬಾಲಿವುಡ್ ಪಾಲಿಗೆ ಕರಾಳ ದಿನ. ಸ್ಟಾರ್ ನಟನಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಹಠಾತ್ ಸಾವು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಿತ್ತು. ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸುಶಾಂತ್ ನಿಧನ ಆಘಾತ ತಂದಿತ್ತು. ಆದರೆ ಸ್ಟಾರ್ ನಟನ ಸಾವಿನ ಹಿಂದಿನ ರಹಸ್ಯ ಇನ್ನೂ ಬಹಿರಂಗವಾಗಿಲ್ಲ. ಸುಶಾಂತ್ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಅಭಿಮಾನಿಗಳು ನಿಜವಾದ ಕಾರಣಕ್ಕಾಗಿ ಕಾಯುತ್ತಿದ್ದಾರೆ. 

ಸುಶಾಂತ್ ಸಿಂಗ್ ಪುಣ್ಯತಿಥಿಯ ದಿನ ಪ್ರೇಯಸಿ ರಿಯಾ ಚಕ್ರವರ್ತಿ ಅಪರೂಪದ ವಿಡಿಯೋ ಶೇರ್ ಮಾಡಿದ್ದಾರೆ. ಸುಶಾಂತ್ ಸಿಂಗ್ ಜೊತೆ ಇರುವ ವಿಡಿಯೋ ಹಂಚಿಕೊಂಡು ಪ್ರಿಯತಮನನ್ನು ನೆನಪಿಸಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ಶೇರ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಶಾಂತ್ ಜೊತೆ ಕಳೆದ ಸುಂದರ ಕ್ಷಣದ ವಿಡಿಯೋ ಇದಾಗಿದೆ. 2019ರಲ್ಲಿ ಲಡಾಖ್‌ನಲ್ಲಿ ಸೆರೆಹಿಡಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಬ್ಬರೂ ದೊಡ್ಡ ಬಂಡೆಯ ಮೇಲೆ ಕುಳಿತುಕೊಂಡಿದ್ದಾರೆ. ರಿಯಾ ಸುಶಾಂತ್‌ನನ್ನು ಗಟ್ಟಿಯಾಗ ತಬ್ಬಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್‌ನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

Tap to resize

Latest Videos

'ಈಗ ಭಯ ಪಡುವ ಸರದಿ ಬೇರೆಯವರದ್ದು' ಎಂದು ಭರ್ಜರಿ ಎಂಟ್ರಿ ಕೊಟ್ಟ ರಿಯಾ; ಸುಶಾಂತ್ ಅಭಿಮಾನಿಗಳ ತರಾಟೆ

ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಲಾಕ್‌ಡೌನ್ ಸಮಯದಲ್ಲಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ  ಸುಶಾಂತ್ ಸಾಯುವ ಕೆಲವೇ ದಿನಗಳ ಮುಂಚೆ  ಅಪಾರ್ಟ್‌ಮೆಂಟ್‌ನಿಂದ ಹೊರನಡೆದಿದ್ದರು. ಸುಶಾಂತ್ ಸಾವಿನ ಬಳಿಕ ರಿಯಾ ಚಕ್ರವರ್ತಿ ಜೈಲು ಸೇರಿದ್ದರು. ಒಂದು ತಿಂಗಳ ಜೈಲು ವಾಸದ ನಂತರ ರಿಯಾ ಅವರು ಮುಂಬೈ ಹೈಕೋರ್ಟ್‌ನಿಂದ  ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ತಮಗೂ ಈ ಸಾವಿಗೂ ಸಂಬಂಧವಿಲ್ಲ ಎಂದು ರಿಯಾ ಹೇಳುತ್ತಲೇ ಬಂದಿದ್ದಾರೆ. ಸುಶಾಂತ್​ ಸಾವಿನ ಬಳಿಕ ಕುಗ್ಗಿ ಹೋಗಿದ್ದ ರಿಯಾ, ಸುಶಾಂತ್​ ಅವರನ್ನು ನೆನಪಿಸಿಕೊಂಡು ಆಗಾಗ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಸದ್ಯ ಮತ್ತೆ ರಿಯಾ ಸಿನಿಮಾ, ಶೋ ಅಂತ ಬ್ಯುಸಿಯಾಗುತ್ತಿದ್ದಾರೆ.

Rhea Chakraborty: ವೇಶ್ಯೆ ಎಂದವರಿಗೆ ನಟಿ ತಿರುಗೇಟು- ಮುಂದಿನ ಬೇಟೆ ಯಾರು ಎಂದ ಟ್ರೋಲಿಗರು!

ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಹೇಳಿದರು. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬದವರು ಆರೋಪ ಮಾಡಿ ದೂರು ದಾಖಲಿಸಿದರು. ಸುಶಾಂತ್ ಸಿಂಗ್ ತಂದೆಯ ಹೇಳಿಕೆ ಆಧರಿಸಿ, ಬಿಹಾರ ಪೊಲೀಸರು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಪ್ರಕರಣ ದಾಖಲಿಸಿದರು.  ಅಂತಿಮವಾಗಿ ಸಿಬಿಐ ಸುಶಾಂತ್ ಕೊಲೆ ಪ್ರಕರಣವನ್ನು ವಹಿಸಿಕೊಂಡಿತು. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದ್ದು ಅಂತಿಮ ವರದಿಯಾವಾಗ ಹೊರಬೀಳುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

click me!