ಬಾಲಿವುಡ್‌ ನಟ ಗೋವಿಂದಾ-ಸುನೀತಾ 37 ವರ್ಷಗಳ ದಾಂಪತ್ಯ ಅಂತ್ಯ? ಕಾರಣ ಮರಾಠಿ ನಟಿ!

Published : Feb 25, 2025, 11:27 AM ISTUpdated : Feb 25, 2025, 12:29 PM IST
ಬಾಲಿವುಡ್‌ ನಟ ಗೋವಿಂದಾ-ಸುನೀತಾ  37 ವರ್ಷಗಳ ದಾಂಪತ್ಯ ಅಂತ್ಯ? ಕಾರಣ ಮರಾಠಿ ನಟಿ!

ಸಾರಾಂಶ

ಬಾಲಿವುಡ್ ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ 37 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನದ ಮೂಲಕ ಅಂತ್ಯ ಹಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಸುನೀತಾ ಈ ಹಿಂದೆ ಗೋವಿಂದ ತನಗೆ ಸಮಯ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಬಾಲಿವುಡ್ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ವಿಚ್ಛೇದನ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ ಎಂಬ ಆಘಾತಕಾರಿ ಸುದ್ದಿ ಇದೀಗ ಹೊರಬಿದ್ದಿದೆ. ಜೂಮ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಗೋವಿಂದಾ ಮತ್ತು ಸುನೀತಾ 37 ವರ್ಷಗಳ ದಾಂಪತ್ಯ ಅಂತ್ಯವಾಗುತ್ತಿದ್ದು  ವಿಚ್ಛೇದನ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದೆ. ಗೋವಿಂದಾ ಮತ್ತು ಸುನೀತಾ ಬೇರೆಯಾಗಲು ಮರಾಠಿ ನಟಿಯೊಬ್ಬರೇ ಕಾರಣ ಎಂದು ಗಾಸಿಪ್ ಹಬ್ಬಿದೆ. ಆದರೆ ಗೋವಿಂದಾ ಅಥವಾ ಸುನೀತಾ ಇಬ್ಬರೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಕೆಲವು ತಿಂಗಳ ಹಿಂದೆ, ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ ವಿಚ್ಛೇದನದ ಬಗ್ಗೆ ಮಾತುಕತೆ ನಡೆದಿತ್ತು, ಮತ್ತು ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ, ಅವರ ವಿಚ್ಛೇದನ ಪ್ರಕ್ರಿಯೆಯು ಅಂತಿಮ ಹಂತವನ್ನು ತಲುಪಿದೆ ಎಂದು ಹೇಳುವ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಬಾಲಿವುಡ್ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ 37 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಪೋಸ್ಟ್ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆದ ನಂತರ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದಾಗ್ಯೂ, ಕಳೆದ ಕೆಲವು ತಿಂಗಳುಗಳಿಂದ, ಬಾಲಿವುಡ್ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ಸಂಬಂಧದ ಕುರಿತು ಅನೇಕ ಸುದ್ದಿಗಳು ವೈರಲ್ ಆಗುತ್ತಿವೆ.

ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ವಿಚ್ಛೇದನದ ಅಂತಿಮ ಹಂತದಲ್ಲಿದ್ದಾರೆ ಎಂದು ವರದಿಗಳು ಹೊರ ಬೀಳುತ್ತಿದ್ದಂತೆಯೇ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಹಬ್ಬಿದ್ದು,  ಗೋವಿಂದಾ ಅವರು ಮರಾಠಿ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಈ ವಿಷಯದಲ್ಲಿ ವಿಚ್ಛೇದನ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಯಾವುದೂ ದೃಢೀಕರಿಸಲ್ಪಟ್ಟಿಲ್ಲವಾದರೂ, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಈ ಚರ್ಚೆ ನಡೆಯುತ್ತಿದೆ. 

ಗೋವಿಂದಾ ಅವರ ಪತ್ನಿ ಸುನೀತಾ ಅಹುಜಾ ಇತ್ತೀಚೆಗೆ ಕೆಲವು ಸಂದರ್ಶನಗಳಲ್ಲಿ ತಾನು ತನ್ನ ಪತಿಯೊಂದಿಗೆ ಒಂದೇ ಮನೆಯಲ್ಲಿ ವಾಸಿಸುವುದಿಲ್ಲ ಎಂದು ಹೇಳಿದ್ದರು. ಹಲವು ವರ್ಷಗಳಿಂದ ಇಬ್ಬರ ಸಂಬಂಧದಲ್ಲಿ ಸಾಕಷ್ಟು ಏರಿಳಿತಗಳು ಮತ್ತು ಒತ್ತಡಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದರು. ತನ್ನ ವೈವಾಹಿಕ ಜೀವನದಲ್ಲಿ ಅನೇಕ ಕಷ್ಟಗಳನ್ನು ನೋಡಿದ್ದೇನೆ ಮತ್ತು ಅನೇಕ ವಿಷಯಗಳನ್ನು ಸಹಿಸಿಕೊಂಡಿದ್ದೇನೆ ಎಂದು ಸುನೀತಾ ಬಹಿರಂಗಪಡಿಸಿದ್ದರು. ಗೋವಿಂದಾ ನಟಿ ನೀಲಂ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರನ್ನು ಮದುವೆಯಾಗಲು ಬಯಸಿದ್ದರು. ಆದರೆ ತನ್ನ ತಾಯಿಯ ಒತ್ತಡದಿಂದಾಗಿ ಅವರು ಸುನೀತಾ ಅವರನ್ನು ವಿವಾಹವಾದರು. ಆದರೆ  ಮದುವೆಯ ನಂತರವೂ ಗೋವಿಂದಾ ಮತ್ತು ನೀಲಂ ಅವರ ಸಂಬಂಧವು ಬಹಳ ಸಮಯದವರೆಗೆ ಮುಂದುವರೆಯಿತು.

1990 ರಲ್ಲಿ ಸ್ಟಾರ್‌ಡಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ಗೋವಿಂದಾ ತಾನು ನೀಲಂ ಅವರನ್ನು ಮದುವೆಯಾಗಲು ಬಯಸಿದ್ದರಿಂದ ಸುನೀತಾಳಿಂದ ಬೇರೆಯಾಗಲು ನಿರ್ಧರಿಸಿದ್ದೆ ಎಂದು ಒಪ್ಪಿಕೊಂಡರು. "ನಾನು ಸುನೀತಾಗೆ ನನ್ನನ್ನು ಬಿಟ್ಟುಬಿಡು ಎಂದು ಹೇಳಿದೆ. ನಾನು ಆಕೆಯೊಂದಿಗೆ ನನ್ನ ನಿಶ್ಚಿತಾರ್ಥವನ್ನು ಸಹ ಮುರಿದುಕೊಂಡಿದ್ದೇನೆ. ಸುನೀತಾ ಮತ್ತೆ ಫೋನ್ ಮಾಡಿ ನಿಶ್ಚಿತಾರ್ಥಕ್ಕೆ ಒಪ್ಪಿಸದಿದ್ದರೆ, ನಾನು ನೀಲಂ ಅವರನ್ನು ಮದುವೆಯಾಗುತ್ತಿದ್ದೆ ಎಂದಿದ್ದರು. ಗೋವಿಂದಾ-ಸುನೀತಾ ಮಾರ್ಚ್ 1987 ರಲ್ಲಿ ವಿವಾಹವಾದರು. ಗೋವಿಂದಾ ಬಹಳ ಸಮಯದವರೆಗೆ ತನ್ನ ಮದುವೆಯ ವಿಷಯವನ್ನು ಮುಚ್ಚಿಟ್ಟಿದ್ದರು. ಈ ದಂಪತಿಗೆ ಟೀನಾ ಮತ್ತು ಯಶವರ್ಧನ್ ಅಹುಜಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಜನವರಿಯಲ್ಲಿ, ಸುನೀತಾ ಅಹುಜಾ ಅವರೊಂದಿಗಿನ ಸಂದರ್ಶನವು ವೈರಲ್ ಆಗಿತ್ತು, ಅದರಲ್ಲಿ ಅವರು ಮತ್ತು ಗೋವಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು. ಗೋವಿಂದನಿಗೆ ಅವಳ ಜೊತೆ ಸಮಯವಿಲ್ಲ. ನನ್ನ ಮುಂದಿನ ಜನ್ಮದಲ್ಲಿ ಅವನು ನನ್ನ ಗಂಡನಾಗುವುದು ನನಗೆ ಇಷ್ಟವಿಲ್ಲ ಎಂದು ನಾನು ಅವನಿಗೆ ಹೇಳಿದ್ದೆ. ಅವನು ರಜೆಯ ಮೇಲೆ ಹೋಗುತ್ತಿಲ್ಲ. ನಾನು ತನ್ನ ಗಂಡನ ಜೊತೆ ಹೊರಗೆ ಹೋಗಿ ಬೀದಿಯಲ್ಲಿ ಪಾನಿ ಪೂರಿ ತಿನ್ನಲು ಬಯಸುವ ವ್ಯಕ್ತಿ. ಅವನು ತನ್ನ ಎಲ್ಲಾ ಸಮಯವನ್ನು ಕೆಲಸದಲ್ಲಿ ಕಳೆಯುತ್ತಾನೆ. ನಾವು ಒಟ್ಟಿಗೆ ಸಿನಿಮಾ ನೋಡಲು ಹೋದ ಒಂದೇ ಒಂದು ಸಂದರ್ಭ ನನಗೆ ನೆನಪಿಲ್ಲ.

ಸುನೀತಾ ನೀಡಿದ ಈ ಸಂದರ್ಶನದ ನಂತರ, ಗೋವಿಂದ ಮತ್ತು ಸುನೀತಾ ಅವರ ವಿಚ್ಛೇದನದ ಸುದ್ದಿ ನಿಜವೇ ಎಂಬ ಚರ್ಚೆ ಆರಂಭವಾಗಿದೆ. ಆದರೆ, ಅವರಿಬ್ಬರೂ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗಾಗಿ ಈಗ ಎಲ್ಲರೂ ಇಬ್ಬರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?