
ಕೊರೊನಾ ನಂತರದ ಜೀವನ ತುಂಬಾ ಕಷ್ಟದಾಯಕವಾಗಿತ್ತು. ಅನೇಕ ಕ್ಷೇತ್ರಗಳು ತೀವ್ರ ನಷ್ಟ ಅನುಭವಿಸಿವೆ ಇದರಲ್ಲಿ ಸಿನಿಮಾರಂಗ ಕೂಡ ಒಂದು. ಕೊರೊನಾ ವೇಳೆ ಚಿತ್ರರಂಗ ಸಂಪೂರ್ಣ ಬಂದ್ ಆಗಿತ್ತು. ಶೂಟಿಂಗ್ ಕೂಡ ನಿಂತು ಹೋಗಿತ್ತು. ಕೊರೊನಾ ಕಡಿಮೆಯಾಗಿ ಸಿನಿಮಾರಂಗ ನಿಧಾನ ಚೇತರಿಸಿಕೊಂಡರು ಅಭಿಮಾನಿಗಳು ಚಿತ್ರಮಂದಿರ ಕಡೆ ಮುಖ ಮಾಡುತ್ತಿರಲಿಲ್ಲ. ಆದರೆ ಆ ಸಮಯದಲ್ಲಿ ಬಂದ ಎರಡು ಸಿನಿಮಾಗಳು ಭಾರತೀಯ ಚಿತ್ರರಂಗಕ್ಕೆ ಹೊಸ ಚೈತನ್ಯ ತಂದುಕೊಟ್ಟಿತು. ಎರಡೂ ಸಿನಿಮಾಗಳು ದೊಡ್ಡ ಮಟ್ಟದ ಸಕ್ಸಸ್ ಕಾಣುವ ಮೂಲಕ ಭಾರತೀಯ ಸಿನಿಮಾರಂಗ ಕಮ್ ಬ್ಯಾಕ್ ಮಾಡಿತು. ಆ ಎರಡು ಸಿನಿಮಾಗಳು ಮತ್ಯಾವುದು ಅಲ್ಲ ಕೆಜಿಎಫ್ 2 ಮತ್ತು ಆರ್ ಆರ್ ಆರ್.
ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಸಿನಿಮಾರಂಗ ಕಂಡ ಅತೀ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಎಂದರೆ ಆರ್ ಆರ್ ಆರ್, ಕೆಜಿಎಎಫ್, ಪಠಾಣ್. ಈ ಸಿನಿಮಾಗಳು ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಲಿಸ್ಟ್‌ನಲ್ಲಿವೆ. ಆದರೆ ಸಂಪೂರ್ಣವಾಗಿ ಲಾಭದ ವಿಚಾರಕ್ಕೆ ಬಂದರೇ ಕನ್ನಡದ ಸೂಪರ್ ಹಿಟ್ ಕೆಜಿಎಫ್ ಸಿನಿಮಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಅನೇಕ ದಾಖಲೆಗಳನ್ನು ಮಾಡಿದೆ. ಆದರೆ ಲಾಭದ ವಿಚಾರದಲ್ಲೂ ಕೆಜಿಎಫ್ ನಂಬರ್ ಒನ್ ಸ್ಥಾನದಲ್ಲಿ ಇರುವುದು ವಿಶೇಷವಾಗಿದೆ.
ಕೆಜಿಎಫ್-2ಗೆ ಬಂದ ಲಾಭವೆಷ್ಟು?
ಮೂಲಗಳ ಪ್ರಕಾರ ಪಠಾಣ್ ಸಿನಿಮಾ 1050 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ನಿರ್ಮಾಪಕರಿಗೆ ಸುಮಾರು 600 ಕೋಟಿ ರೂಪಾಯಿ ಲಾಭವನ್ನು ಹಿಂದಿರುಗಿಸಿದೆ ಎನ್ನಲಾಗಿದೆ. ರಾಜಮೌಳಿ ಅವರ RRR ಜಾಗತಿಕವಾಗಿ 1200 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಇದು ಕೂಡ 600 ಕೋಟಿ ರೂಪಾಯಿಗಳಿಗಿಂತ ಕಡಿಮೆ ಲಾಭವನ್ನು ಮಾಡಿದೆ ಎನ್ನಲಾಗಿದೆ. ಈ ಎರಡು ಸಿನಿಮಾಗಳಿಗೆ ಹೋಲಿಸಿದರೆ ಕೆಜಿಎಫ್ 2 ಸಿನಿಮಾ ಅತೀ ಹೆಚ್ಚು ಲಾಭತಂದುಕೊಂಡು ಚಿತ್ರವಾಗಿದೆ. 1200 ಕೋಟಿ ರೂಪಾಯಿ ಗಳಿಕೆ ಮಾಡಿರುವ ಕೆಜಿಎಫ್ ಬರೋಬ್ಬರಿ 900 ಕೋಟಿಗಿಂತ ಹೆಚ್ಚಿನ ಲಾಭದ ಪಾಲನ್ನು ಒಳಗೊಂಡಿದೆ ಎನ್ನಲಾಗಿದೆ.
ಇತಿಹಾಸ ಸೃಷ್ಟಿಸಿದ KGF-2ಗೆ 1 ವರ್ಷ; ವಿಶೇಷ ವಿಡಿಯೋ ಮೂಲಕ ಪಾರ್ಟ್-3 ಸುಳಿವು ನೀಡಿದ ಹೊಂಬಾಳೆ ಫಿಲ್ಮ್ಸ್
RRR ಮತ್ತು ಪಠಾನ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ತಯಾರಾದ ಸಿನಿಮಾವಾಗಿದೆ. ಆದರೆ ಈ ಎರಡು ಸಿನಿಮಾಗಳಿಗೆ ಹೋಲಿಕೆ ಮಾಡಿದ್ರೆ KGF 2 ಕಡಿಮೆ ಬಜೆಟ್‌ನಲ್ಲಿ ಬಂದ ಸಿನಿಮಾವಾಗಿದೆ. RRR ಸಿನಿಮಾ 500 ಕೋಟಿ ರೂಪಾಯಿಯಲ್ಲಿ ತಯಾರಾದ ಸಿನಿಮಾ ಎನ್ನಲಾಗಿದೆ. ಪಠಾಣ್ 300 ಕೋಟಿ ರೂಪಾಯಿಯಲ್ಲಿ ತಾಯಾರಾದ ಚಿತ್ರವಾಗಿದೆ. ಆದರೆ ಕೆಜಿಎಫ್ 2 100 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದಲ್ಲಿ ಬಂದ ಚಿತ್ರವಾಗಿದೆ. ಹಾಗಾಗಿ ಅದರ ಲಾಭದ ಪಾಲು ದೊಡ್ಡದಾಗಿದೆ ಎಂದು ವಿಶ್ಲೇಷಕರು ಲೆಕ್ಕಾಚಾರಾ ಹಾಕಿದ್ದಾರೆ.
KGF 2ಗೆ ಒಂದು ವರ್ಷ: 'ಅಧೀರ' ಸಂಜಯ್ ದತ್ ಭಾವನಾತ್ಮಕ ಹೇಳಿಕೆ ವೈರಲ್
ನಂ.1 ಸ್ಥಾನದಲ್ಲಿ ಆಮೀರ್ ಸಿನಿಮಾ
ಕೆಜೆಎಫ್ -2 ಕಲೆಕ್ಷನ್ ದೊಡ್ಡ ಮಟ್ಟದಲ್ಲಿದ್ದರೂ ಭಾರತದ ಸಾರ್ವಕಾಲಿಕ ಅತ್ಯಂತ ಲಾಭದಾಯಕ ಚಿತ್ರವಾದ ಅಮೀರ್ ಖಾನ್ ಅವರ ದಂಗಲ್ ಸಿನಿಮಾದ ಕಲೆಕ್ಷನ್ ಬೀಟ್ ಮಾಡಲು ಸಾಧ್ಯವಾಗಿಲ್ಲ. ಆಮೀರ್ ಖಾನ್ ದಂಗಲ್ ಸಿನಿಮಾ 2000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ಬಂದ ಈ ಚಿತ್ರ 1500 ಕೋಟಿ ಲಾಭ ಗಳಿಕೆ ಮಾಡಿದೆ ಎನ್ನಲಾಗಿದೆ. ಇನ್ನು ಎಸ್ ಎಸ್ ರಾಜಮೌಳಿ ಅವರ ಬಾಹುಬಲಿ-2 ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.