'ಆದಿಪುರುಷ್' ಟ್ರೋಲ್‌ಗೆ ಕೊನೆಗೂ ಮೌನ ಮುರಿದ ಕೃತಿ; ನಿರ್ದೇಶಕರ ಬಗ್ಗೆ ಹೆಮ್ಮೆ ಇದೆ ಎಂದ ನಟಿ

By Shruthi KrishnaFirst Published Nov 20, 2022, 10:56 AM IST
Highlights

ಆದಿಪುರುಷ್ ಸಿನಿಮಾದ ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆದ ಬಳಿಕ ಮೊದಲ ಬಾರಿಗೆ ನಟಿ ಕೃತಿ ಸನೊನ್ ಮಾತನಾಡಿದ್ದಾರೆ. ನಿರ್ದೇಶಕರ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಟೀಸರ್ ರಿಲೀಸ್ ಆಗುತ್ತಿದ್ದಂತೆ  ಅಷ್ಟೇ ನಿರಾಸೆ ಮೂಡಿಸಿದೆ. ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಇದರಿಂದ ಭಯಬಿದ್ದ ಸಿನಿಮಾತಂಡ ಚಿತ್ರದ ಕೆಲವು ದೃಶ್ಯಗಳನ್ನು ರೀ ಶೂಟ್ ಮಾಡಲು ನಿರ್ಧರಿಸಿದೆ, ಅಲ್ಲದೇ ವಿಎಫ್‌ಎಕ್ಸ್ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿನಿಮಾದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿದೆ. ಈ ಬಗ್ಗೆ ಸಿನಿಮಾತಂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಈ ಬಗ್ಗೆ ಪ್ರಭಾಸ್ ಅಥವಾ ನಾಯಕಿ ಕೃತಿ ಸನೊನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ನಟಿ ಕೃತಿ ಮಾತನಾಡಿದ್ದು ನಿರ್ದೇಶಕರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. 

ಓಂ ರಾವುತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಆದಿಪುರುಷ್ ಸಿನಿಮಾದಲ್ಲಿ ರಾವಣ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಉದ್ದ ಗಡ್ಡ ಇರುವ ರಾವಣನನ್ನು ನೋಡಿದ ನೆಟ್ಟಿಗರು ಅಲ್ಲಾ ವುದ್ದೀನ್ ಖಿಲ್ಜಿ ಹಾಗೆ ತೋರಿಸಲಾಗಿದೆ, ರಾವಣನನ್ನು ಮತಾಂತರ ಮಾಡಲಾಗಿದೆ ಎಂದು ಟ್ರೋಲ್ ಮಾಡಿದ್ದರು. ವಿಎಫ್‌ಎಕ್ಸ್ ಕೂಡ ಕಳಪೆ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಟ್ರೋಲ್‌ಗಳ ಬಳಿಕ ಮೊದಲ ಬಾರಿಗೆ ಕೃತಿ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ಕೃತಿ ಸದ್ಯ 'ಬೇಡಿಯಾ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರು ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ. ಈ ವೇಳೆ ಕೃತಿ ಆದಿಪುರುಷ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 

'ನಮ್ಮ ನಿರ್ದೇಶಕ ಓಂ ರಾವುತ್ ಅವರು ಈಗಾಗಲೇ ಹೇಳಿದ ಹಾಗೆ, ಈ ಸಿನಿಮಾದ ಬಗ್ಗೆ ನಮಗೆಲ್ಲರಿಗೂ ತುಂಬಾ ಹೆಮ್ಮೆ ಇದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬರ್ತಿದೆ. ಇದು ನಮ್ಮ ಇತಿಹಾಸದ ಒಂದು ಭಾಗವಾಗಿದೆ ಹಾಗೂ ಅತ್ಯಂತ ಮಹತ್ವದಾಗಿದೆ.  ಈ ಸಿನಿಮಾವನ್ನು ಸರಿಯಾದ ರೀತಿಯಲ್ಲಿ ಕಟ್ಟಿಕೊಡಬೇಕಿದೆ. ಅದನ್ನೇ ನಿರ್ದೇಶಕ ಓಂ ರಾವುತ್ ಮಾಡುತ್ತಿದ್ದಾರೆ' ಎಂದು ಹೇಳಿದರು. 

ಕಳಪೆ ಗ್ರಾಫಿಕ್ಸ್, ಹಿಗ್ಗಾಮುಗ್ಗಾ ಟ್ರೋಲ್; 'ಆದಿಪುರುಷ್' ಬಿಡುಗಡೆ ಮುಂದಕ್ಕೆ, ಹೊಸ ರಿಲೀಸ್ ಡೇಟ್ ಘೋಷಣೆ

'1 ನಿಮಿಷ 35 ಸೆಕೆಂಡ್ ಟೀಸರ್ ರಿಲೀಸ್ ಆಗಿದೆ. ಇನ್ನೂ ಈ ಚಿತ್ರದ ಕೆಲಸ ಸಾಕಷ್ಟಿಸಿದೆ.  ಹಾಗಾಗಿ ಸಮಯ ಬೇಕಾಗಿದೆ.  ನಾವೆಲ್ಲರೂ ಇದಕ್ಕೆ ಅತ್ಯುತ್ತಮವಾದುದ್ದನ್ನು ನೀಡಲು ಬಯಸುತ್ತೇವೆ. ಇದು ನಮ್ಮ ಇತಿಹಾಸವನ್ನು ಹಾಗೂ ನಮ್ಮ ಧರ್ಮವನ್ನು ಜಾಗತಿಕವಾಗಿ ತೋರಿಸುವ ಅವಕಾಶಸಿಕ್ಕಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವ ಕಥೆಯಾಗಿದೆ. ಹಾಗಾಗಿ ಇದನ್ನು ಅತ್ಯುತ್ತಮ ರೀತಿಯಲ್ಲಿ ಮಾಡಬೇಕಿದೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಅತ್ಯುತ್ತಮವಾಗಿ ಕಟ್ಟಿಕೊಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.   

ಹಿಗ್ಗಾಮುಗ್ಗಾ ಟ್ರೋಲ್; ರಾವಣನ ಗಡ್ಡ ತೆಗೆಯಲು ನಿರ್ಧರಿಸಿದ 'ಆದಿಪುರುಷ್' ತಂಡ

ಅಂದಹಾಗೆ ಆದಿಪುರುಷ್ ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ಮೂಲಗಳ ಪ್ರಕಾರ 500 ಕೋಟಿ ವೆಚ್ಚದಲ್ಲಿ ಸಿನಿಮಾದ ತಯಾರಿಗಿದೆ. ಇದೀಗ ರೀ ಶೂಟ್ ಮತ್ತು ವಿಎಫ್‌ಎಕ್ಸ್ ಮೇಲೆ ಮರು ಕೆಲಸ ಮಾಡುತ್ತಿರುವುದರಿಂದ ಮತ್ತಷ್ಟು ಕೋಟಿ ಸುರಿಯಬೇಕಾಗಿದೆ. ಹಾಗಾಗಿ ಆದಿಪುರುಷ್ ಸಿನಿಮಾದ ಬಜೆಟ್ ದುಪ್ಪಟ್ಟಾಗಲಿದೆ. ಅಂದುಕೊಂಡಂತೆ ಆಗಿದ್ದರೆ ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿಯಲ್ಲೇ ರಿಲೀಸ್ ಆಗಬೇಕಿತ್ತು. ಆದರೀಗ ಜೂನ್ ತಿಂಗಳಿಗೆ ಮುಂದಕ್ಕೆ ಹೋಗಿದೆ. 2023 ಜೂನ್ 16ರಂದು ಆದಿಪುರುಷ್ ರಿಲೀಸ್ ಆಗುತ್ತಿದೆ. ಹಿಂದಿ ಮತ್ತು ತೆಲುಗು ಸೇರಿದಂತೆ ತಮಿಳು, ಮಲಯಾಳಂನಲ್ಲೂ ಪ್ರಭಾಸ್ ಸಿನಿಮಾ ಬಿಡುಗಡೆಯಾಗುತ್ತಿದೆ.  

click me!