
ನಿರ್ಮಾಪಕರು ಮೋಸ ಮಾಡಿದ್ದಾರೆ ಎಂದು ತೆಲುಗು ನಟಿ ಬೆತ್ತಲಾಗಿ ಪ್ರತಿಭಟನೆ ನಡೆಸುವ ಮೂಲಕ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದಾರೆ. ತೆಲುಗಿನಲ್ಲಿ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಮತ್ತು ವಿತರಕ ಬನ್ನಿ ವಾಸು ವಿರುದ್ಧ ನಟಿ ಸುನಿತಾ ಬೋಯಾ ರೊಚ್ಚಿಗೆದ್ದಿದ್ದಾರೆ. ಬನ್ನಿ ವಾಸು ಅವರ ಗೀತಾ ಆರ್ಟ್ಸ್ ಕಚೇರಿ ಮುಂದೆ ನಟಿ ಸುನಿತಾ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ಸುನಿತಾ ಅವರ ಬೆತ್ತಲೇ ಪ್ರತಿಭಟನೆ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಬನ್ನಿ ವಾಸು ಅಲ್ಲು ಅರ್ಜುನ್ ಮತ್ತು ಅವರ ಕುಟುಂಬಕ್ಕೆ ತೀರ ಆಪ್ತರಾಗಿದ್ದಾರೆ. ಸುನಿತಾ ಬೊಯಾ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಪ್ರತಿಭಟನೆ ಮಾಡಿದ್ದರು. ಆದರೀಗ ಬೆತ್ತಲಾಗಿ ಗೀತಾ ಆರ್ಟ್ಸ್ ಮುಂದೆ ಕುಳಿತಿದ್ದಾರೆ.
ಅಂದಹಾಗೆ ನಟಿಯರು ಬೆತ್ತಲಾಗಿ ಪ್ರತಿಭಟನೆ ಮಾಡಿರುವುದು ಇದೇ ಮೊದಲ್ಲ. ಈ ಹಿಂದೆ ಮೀ ಟೂ ಅಭಿಯಾನದ ವೇಳೆ ತೆಲುಗು ನಟಿ ಶ್ರೀರೆಡ್ಡಿ ಕೂಡ ಬೆತ್ತಲಾಗಿ ಪ್ರತಿಭಟನೆ ಮಾಡಿದ್ದರು. ಮೊದಲು ಶ್ರೀರೆಡ್ಡಿಯನ್ನು ಯಾರು ಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ನಂತರ ಶ್ರೀರೆಡ್ಡಿ ಪ್ರತಿಭಟನೆ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿತ್ತು. ಅಂದಹಾಗೆ ಶ್ರೀರೆಡ್ಡಿ ಇಡೀ ತೆಲುಗು ಸಿನಿಮಾರಂಗದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೀಗ ಶ್ರೀರೆಡ್ಡಿ ಹಾದಿಯಲ್ಲೆಸಾಗಿರುವ ಮತ್ತೋರ್ವ ನಟಿ ಸುನಿತಾ ಬೋಯಾ ಗೀತಾ ಆರ್ಟ್ಸ್ ವಿರುದ್ಧ ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ.
ಮೊಬೈಲ್ ಫೋನ್ ಮೂಲಕ ತನ್ನ 'ಖಾಸಗಿ ಆಸ್ತಿ' ರಕ್ಷಿಸಿಕೊಂಡ ಉರ್ಫಿ
ಬನ್ನಿ ವಾಸು ಮೋಸಮಾಡಿದ್ದಾರೆ, ವಂಚಿಸಿದ್ದಾರೆ ಎಂದು ಸುನಿತಾ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬೆತ್ತಲಾಗಿ ಕುಳಿತಿದ್ದ ಸುನಿತಾಗೆ ಬಟ್ಟೆ ಧರಿಸಿ ಸಮಾಧಾನ ಮಾಡಿದ್ದಾರೆ. ಬನ್ನಿ ವಾಸು ಮೋಸ ಮಾಡಿದ್ದಾರೆ, ಹಣವಿಲ್ಲದೆ ಪರದಾಡುತ್ತಿದ್ದೀನಿ ಎಂದು ಸುನಿತಾ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಬನ್ನಿ ವಾಸು ಮನೆಯಲ್ಲಿಲ್ಲ ಎಂದು ಜುಬಿಲಿ ಹಿಲ್ಸ್ ಪೊಲೀಸರು ಸುನಿತಾಗೆ ಮಾಹಿತಿ ನೀಡಿದರು. ಅವರು ಬಂದ ನಂತರ ಮಾತನಾಡುವುದಾಗಿ ಭರವಸೆ ನೀಡಿ ಸುನಿತಾಗೆ ಸ್ವಲ್ಪ ಹಣ ನೀಡಿ ಅಲ್ಲಿಂದ ಕಳುಹಿಸಿದ್ದಾರೆ. ನಟಿ ಸುನಿತಾ ಅವರು ಗೀತಾ ಆರ್ಟ್ಸ್ ನಿರ್ಮಾಣದ ಧಾವಾಹಿಯಲ್ಲಿ ನಟಿಸುತ್ತಿದ್ದರು ಎನ್ನಲಾಗಿದೆ.
ಬನ್ನಿ ವಾಸು ಅವರು ಗೀತಾ ಆರ್ಟ್ಸ್ ಮೂಲಕ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರೊಂದಿಗೆ ಬನ್ನಿ ವಾಸು ಅವರ ನಿಕಟತೆ ಅವರನ್ನು ವಿತರಕ ಮತ್ತು ನಿರ್ಮಾಪಕರಾಗಿ ಎತ್ತರಕ್ಕೆ ಬೆಳೆಯಲು ಕಾರಣವಾಯಿತು ಎಂದು ಅನೇಕರು ಹೇಳುತ್ತಾರೆ. ಬನ್ನಿ ವಾಸು ಅವರು ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಆದರೀಗ ಈ ಘಟನೆಗೆ ಸಂಬಂಧಿಸಿದಂತೆ ಬನ್ನಿ ವಾಸು ಪ್ರತಿಕ್ರಿಯೆ ಏನಾಗಿರಲಿದೆ ಎಂದು ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.