ನಟ ದರ್ಶನ್ ಮಧ್ಯಂತರ ಜಾಮೀನು ರದ್ದುಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ, ಸಂಕಷ್ಟ ಡಬಲ್!

Published : Dec 04, 2024, 09:21 PM ISTUpdated : Dec 04, 2024, 09:23 PM IST
ನಟ ದರ್ಶನ್ ಮಧ್ಯಂತರ ಜಾಮೀನು ರದ್ದುಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ, ಸಂಕಷ್ಟ ಡಬಲ್!

ಸಾರಾಂಶ

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಮಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಆದರೆ ಈ ಜಾಮೀನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಬೆಂಗಳೂರು(ಡಿ.04) ಕರ್ನಾಟಕ ಸೇರಿದಂತೆ ದೇಶವನ್ನೇ ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಪ್ರಕರಣ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಚಿಕಿತ್ಸೆ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಟ ದರ್ಶನ್‌ಗೆ ಹೊಸ ತಲೆನೋವು ಶುರುವಾಗಿದೆ. ಜಾಮೀನು ಪಡೆದ ಆರಂಭಿಕ ದಿನಗಳಲ್ಲಿ ಹಾಯಾಗಿದ್ದ ನಟ ದರ್ಶನ್ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ಅವಧಿ ಮುಂದೂಡಲು ಎಲ್ಲಾ ತಯಾರಿಗಳು ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದರ ನಡುವೆ ನಟ ದರ್ಶನ್ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆ ಇದೆ. ಕಾರಣ ಇದೀಗ ಕರ್ನಾಟಕ ಸರ್ಕಾರ ನಟ ದರ್ಶನ್ ಮಧ್ಯಮಂತ್ರ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಪರ ವಕೀಲರು ಇಂದು(ಡಿ.04) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಕೋರಲಾಗಿದೆ. ಈ ಅರ್ಜಿ ಇದೇ ಶುಕ್ರವಾರ ಅಥವಾ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಹೈಕೋರ್ಟ್ ಏಕಸದಸ್ಯ ನೀಡಿದ್ದ ಮಧ್ಯಮಂತ್ರ ಜಾಮೀನು ಅರ್ಜಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಪ್ರಮುಖವಾಗಿ ನಟ ದರ್ಶನ್ ಜಾಮೀನು ಪಡೆದು ಒಂದು ತಿಂಗಳ ಬಳಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಶಸ್ತ್ರಚಿಕಿತ್ಸೆ ಕಾರಣಕ್ಕೆ ಜಾಮೀನು ಪಡೆದ ದರ್ಶನ್ ಇದೀಗ ಸರ್ಜರಿ ನಿರಾಕರಿಸಿದ್ದಾರೆ. ಹೀಗಾಗಿ ಈ ಕಾರಣಗಳನ್ನು ಮುಂದಿಟ್ಟು ನಟ ದರ್ಶನ್ ಮಧ್ಯಂತರ ಜಾಮೀನು ರದ್ದುಗೊಳಿಸುವಂತೆ ವಾದ ನಡೆಯಲಿದೆ. ಇತ್ತ ನಟ ದರ್ಶನ್ ಪರ ವಕೀಲರು ಪ್ರತಿವಾದ ಮಂಡಿಸಲಿದ್ದಾರೆ. 

10 ದಿನದಲ್ಲಿ ದರ್ಶನ್ ಬೇಲ್ ಅವಧಿ ಮುಕ್ತಾಯ; ಆತಂಕದಲ್ಲಿ ಸರ್ಜರಿಗೆ ಓಕೆ ಅಂದುಬಿಟ್ರಾ?

ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ನಟ ದರ್ಶನ್ ಜಾಮೀನು ಪಡೆದಿದ್ದಾರೆ. ಅಕ್ಟೋಬರ್ 30 ರಂದು ಕರ್ನಾಟಕ ಹೈಕೋರ್ಟ್ ದರ್ಶನ್‌ಗೆ ಮಧ್ಯಮಂತರ ಜಾಮೀನು ಮಂಜೂರು ಮಾಡಿತ್ತು. ಪೊಲೀಸರ ಸುಪರ್ದಿಯಲ್ಲೇ ನಟ ದರ್ಶನ್‌ಗೆ ಚಿಕಿತ್ಸೆ ಕೊಡಿಸಲು ಸರ್ಕಾರ ವಾದ ಮಂಡಿಸಿತ್ತು. ಆದರೆ ದರ್ಶನ್ ಪರ ವಾದ ಮಂಡಿಸಿದ ವಕೀಲ ಸಿವಿ ನಾಗೇಶ್, ಶಸ್ತ್ರಚಿಕಿತ್ಸೆ ಮಾಡದಿದ್ದರೆ ಲಕ್ವ ಹೊಡೆಯುವ ಸಾಧ್ಯತೆ ಇದೆ ಎಂದು ವಾದಿಸಿದ್ದರು. ಆರೋಗ್ಯದ ಗಂಭೀರತೆ, ಚಿಕಿತ್ಸೆ ಎಲ್ಲವನ್ನು ಪರಿಗಣಿಸಿದ ನ್ಯಾಯಲಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.  ಆದರೆ ಜಾಮೀನು ಪಡೆದ ದರ್ಶನ್, ಫಿಸೋಯಥೆರಪಿ ಮಾತ್ರ ಪಡೆದುಕೊಂಡಿದ್ದಾರೆ.ಬೆನ್ನು ನೋವಿಗೆ ಸರ್ಜರಿ ಬೇಡ ಎಂದಿದ್ದಾರೆ.

ಇದರ ನಡುವೆ ದರ್ಶನ್ ಕುರಿತ ವರದಿಯನ್ನು ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ನಟ ದರ್ಶನ್‌ಗೆ ಬಿಪಿ ಏರಿಳಿತ ಆಗಿದೆ. ಹೀಗಾಗಿ ಸರ್ಜರಿ ಮಾಡಲಾಗಿಲ್ಲ ಎಂದು ಕಾರಣವನ್ನು ನೀಡಲಾಗಿದೆ. ಹೀಗಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ನಟ ದರ್ಶನ್‌ಗೆ ಫಿಸಿಯೋ ಥೆರಪಿ ನೀಡಲಾಗುತ್ತಿದೆ. ದರ್ಶನ್ ಬೇಲ್ ಅವಧಿ ಮುಂದುವರಿಸಲು ಕಸರತ್ತುಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿರುವುದು ನಟ ದರ್ಶನ್ ತಲೆನೋವು ಹೆಚ್ಚಿಸಿದೆ.

ನಟ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಗಿಯಲು ಇನ್ನು ಕೆಲವೇ ದಿನ ಮಾತ್ರ ಬಾಕಿ. ಆದರೆ ಈ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಇರುವ ಕಾರಣ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಜಾಮೀನು ಪಡೆದ ಒಂದು ತಿಂಗಳ ಬಳಿಕ ದರ್ಶನ್ ಚಿಕಿತ್ಸೆಗೆ ಹಾಜರಾಗಿದ್ದರು.ಅಕ್ಟೋಬರ್ 30 ರಂದು ಬೇಲ್ ಪಡೆದು ನವೆಂಬರ್ 1 ರಂದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ದರ್ಶನ್‌ಗೆ ಪ್ರತಿ ದಿನ 30 ನಿಮಿಷ ಫಿಸಿಯೋಥೆರಪಿ ಮಾಡಲಾಗುತ್ತಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?