ಕಾಲಿವುಡ್‌ನಲ್ಲಿ ಮಾಫಿಯಾ ಎಂದ ಮೀರಾ ಮಿಥುನ್‌ಗೆ ನಟ ಸೂರ್ಯ ಖಡಕ್ ಉತ್ತರ!

Suvarna News   | Asianet News
Published : Aug 14, 2020, 03:22 PM ISTUpdated : Aug 14, 2020, 03:29 PM IST
ಕಾಲಿವುಡ್‌ನಲ್ಲಿ ಮಾಫಿಯಾ ಎಂದ ಮೀರಾ ಮಿಥುನ್‌ಗೆ ನಟ ಸೂರ್ಯ ಖಡಕ್ ಉತ್ತರ!

ಸಾರಾಂಶ

ವಿಜಯ್ ಹಾಗೂ ಕಾಲಿವುಡ್‌ ಮಾಫಿಯಾ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದ ನಟಿ ಮೀರಾ ಮಿಥುನ್‌ಗೆ ಟ್ಟಿಟರ್‌ನಲ್ಲಿ ನಟ ಸೂರ್ಯ ಉತ್ತರಿಸಿದ್ದಾರೆ...  

ತಮಿಳು ಚಿತ್ರರಂಗದ ಟಾಪ್‌ ಸ್ಟಾರ್‌ಗಳ ವಿರುದ್ಧ ಆರೋಪ ಮಾಡುತ್ತಿದ್ದ ಮಾಡಲ್‌ ಕಮ್ ನಟಿ ಮೀರಾ ಮಿಥುನ್‌ ಬಗ್ಗೆ ಟ್ಟಿಟರ್‌ನಲ್ಲಿ ಸೂರ್ಯ ಉತ್ತರಿಸಿದ್ದಾರೆ. ಸೂರ್ಯ ಉತ್ತರ ಕೊಡಲು ಕಾರಣವೇ ನಿರ್ದೇಶಕಿ ಭಾರತಿರಾಜ್‌ ಟ್ಟೀಟ್‌ ಮೂಲಕ ಎತ್ತಿದ ಧ್ವನಿ.

'ಅಡ್ಡದಾರಿ, ಅವರಿವರ ಜೊತೆ ಮಲಗಿ ಅವಕಾಶ ಪಡೆದುಕೊಂಡ ನಟಿ'; ಮಾಡಲ್ ಮೀರಾ ಆರೋಪ? 

ನಟಿ ತ್ರಿಷಾ, ಸೂರ್ಯ, ವಿಜಯ್ ಹಾಗೂ ರಜನಿಕಾಂತ್ ವಿರುದ್ಧ ಕಾಲಿವುಡ್‌ ಮಾಫಿಯಾ ಹಾಗೂ ಸ್ವಜನಪಕ್ಷಪಾತವಿದೆ ಎಂದು ಆರೋಪಿಸಿ ಮೀರಾ ಮಾಡುತ್ತಿದ್ದ ಬ್ಯಾಕ್ ಟು ಬ್ಯಾಕ್ ಟ್ಟೀಟ್ಸ್‌ಗೆ ಭಾರತಿರಾಜ್‌ ಖಂಡಿಸಿದ್ದಾರೆ. 'ವಿಜಯ್ ಹಾಗೂ ಸೂರ್ಯ ತುಂಬಾ ಸ್ಟ್ರಾಂಗ್ ಫೌಂಡೇಷನ್‌ನಿಂದ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿರುವುದು. ತಮ್ಮ ಫ್ಯಾಮಿಲಿ ಹಾಗೂ ಸಮಾಜದ ಜೊತೆ ಗೌರವಾನ್ವಿತ ಜೀವನ ನಡೆಸುತ್ತಿದ್ದಾರೆ. ಇವರನ್ನು  ಅವಾಚ್ಯ ಪದಗಳನ್ನು ಬಳಸಿ ಮೀರಾ ಅವಮಾನಿಸಿದ್ದಾಳೆ. ಚಿತ್ರರಂಗದ ಹಿರಿಯ ನಿರ್ದೇಶಕಿಯಾಗಿ ನಾನು ಈ ವಿಚಾರವನ್ನು ವಿರೋಧಿಸಲೇ ಬೇಕು.  ಪಬ್ಲಿಸಿಟಿ ಪಡೆಯಲು ಮಾಡುತ್ತಿರುವ ಈ ಹುಚ್ಚಾಟವನ್ನು ನಿಲ್ಲಿಸಬೇಕು. ಮೀರಾ ಜೀವನ ತುಂಬಾ ದೊಡ್ಡದು. ನೀನು ಇದೆಲ್ಲಾ ಪಕ್ಕಕ್ಕಿಟ್ಟು ಜೀವನದಲ್ಲಿ ಉದ್ಧಾರ ಆಗುವಂತ ಕೆಲಸ ಮಾಡು. ವಿಪರ್ಯಾಸ ಅಂದರೆ ಯಾವ ಸಿನಿಮಾ ಕಮ್ಯೂನಿಟಿಯೂ ಈಕೆಯ ನಡವಳಿಕೆಯನ್ನು ವಿರೋಧಿಸಿಲ್ಲ. ಎಲ್ಲಾ ಡಿಜಿಟಲ್‌ ಮಾಧ್ಯಮಗಳಲ್ಲಿ ಮನವಿ ಮಾಡಿಕೊಳ್ಳುವೆ, ದಯವಿಟ್ಟು ಈಕೆ ಮಾಡುವ ಯಾವ ಟ್ಟೀಟ್‌ ಬಗ್ಗೆ ಸುದ್ದಿ ಮಾಡಬೇಡಿ. ಇಲ್ಲದಿದ್ದರೆ ಈಕೆ ತಮ್ಮ ಹುಚ್ಚಾಟವನ್ನು, ಸುಳ್ಳು ಆರೋಪವನ್ನು ಮುಂದುವರಿಸುತ್ತಾರೆ,' ಎಂದು ಬರೆದಿದ್ದರು. ಈ ಟ್ಟೀಟ್‌ ಸರಣಿಗಳನ್ನು ಗಮನಿಸಿ ಸೂರ್ಯ ತಮ್ಮ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಸೂರ್ಯ ಮಾನವೀಯತೆ ಬಗ್ಗೆ ಮಾಡಿದ ಟ್ಟೀಟನ್ನು ಮತ್ತೆ ರಿಟ್ಟೀಟ್‌ ಮಾಡುವ ಮೂಲಕ ಮೀರಾ ಮಿಥುನ್‌ ಮಾಡುತ್ತಿರುವ ಕಿರಿಕ್ ಕೆಲಸದ ಬಗ್ಗೆ ಮಾತನಾಡಿದ್ದಾರೆ. 'ನಮ್ಮ ಬಗ್ಗೆ ಟ್ಟಿಟರ್‌ನಲ್ಲಿ ಮಾಡುತ್ತಿರುವ ಚೀಪ್‌ ಟೀಕೆಗಳು ಅಥವಾ ಗೌರವ ಕುಗ್ಗಿಸಲು ಕೆಲಸ ಮಾಡುತ್ತಿರುವವರ ಬಗ್ಗೆ ನಾನು ಚಿಂತಿಸುವ ಅಗತ್ಯವಿಲ್ಲ. ನಮ್ಮ ಸಮಯ ಹಾಗೂ ಶ್ರಮವನ್ನು ಈ ಸಮಯದಲ್ಲಿ ಸಮಾಜ ಉದ್ದಾರ ಮಾಡುವ ಕೆಲಸಕ್ಕೆ ಬಳಸಿಕೊಳ್ಳೋಣ. ನಿರ್ದೇಶಕ ಭಾರತಿರಾಜ್‌ ಅವರಿಗೆ ಹೃತ್ಪೂರ್ವಕ ಕೃತಜ್ಞತೆ' ಎಂದು ಹೇಳಿದ್ದಾರೆ.

ಬಾತ್‌ರೂಂನಲ್ಲಿ ಬಿಗ್ ಬಾಸ್‌ ಸ್ಪರ್ಧಿ ವಯ್ಯಾರ: ನೋಡೋರ್‌ ಕಣ್ಣಿಗೆ ಹಬ್ಬ!

 

ಸದ್ಯ ಸೂರರೈ ಪೋಟ್ರು ಸಿನಿಮಾ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಸೂರ್ಯ, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಮಾತನಾಡಿದ್ದರು. ಕ್ಯಾಪ್ಟನ್‌ ಜಿಆರ್‌ ಗೋಪಿನಾಥ್‌ ಜೀವನ ಆಧಾರಿತ ಕಥೆ ಇದಾಗಿದ್ದು ನಟಿಯಾಗಿ ಮಲಯಾಳಂನ ಅಪರ್ಣಾ ಬಾಲಾಮುರಿ ಅಭಿನಯಿಸಿದ್ದಾರೆ.

ಅತ್ತ ಎಂ.ಎಸ್.ಧೋನ್, ದಿ ಅನ್‌ಟೋಲ್ಡ್ ಚಿತ್ರದ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದೇ, ಶರಣಾಗಿದ್ದು ಬಾಲಿವುಡ್‌ನಲ್ಲಿ ನಡೆಯುತ್ತಿರುವ ನೆಪೋಟಿಸಂ ಬಗ್ಗೆ ವಿಪರೀತ ಪರ, ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಹೊರಗಿನಿಂದ ಬಂದ ನಟ, ನಟಿಯರಿಗೆ ಬಾಲಿವುಡ್ ಸುಲಭವಾಗಿ ಮಣೆ ಹಾಕುವುದಿಲ್ಲ. ಪ್ರತಿಭೆಯಿದ್ದರೂ ಬಿ ಗ್ರೇಡ್ ನಟರನ್ನಾಗಿಯೇ ಚಿತ್ರೋದ್ಯಮದಲ್ಲಿ ಗುರುತಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗುತ್ತೆ ಎಂಬ ಕೂಗು ಕೇಳಿ ಬರುತ್ತಿದೆ. ಬಾಲಿವುಡ್‌ನೊಂದಿಗೆ ಫ್ಯಾಮಿಲಿ ನಂಟು ಹೊಂದಿರುವವರು ಹಾಗೂ ಹೊರಗಿನಿಂದ ಬಂದವರು ಈ ಬಗ್ಗೆ ಆರೋಪ,  ಪ್ರತ್ಯಾರೋಪ ಮಾಡಿಕೊಳ್ಳುತ್ತಲೇ ಇದ್ದಾರೆ. ಈ ಬೆನ್ನಲ್ಲೇ ನಿರ್ದೇಶಕ ಮಹೇಶ್ ಭಟ್ ಹಾಗೂ ಮಗಳು ಆಲಿಯಾ ಭಟ್ ವಿರುದ್ಧವೂ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅವರ ಸಡಕ್-2 ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದ್ದು,  ಟ್ರೇಲರ್ ಬಿಡುಗಡೆಯಾಗಿದೆ. ಇದನ್ನು ಡಿಸ್ಲೈಕ್ ಮಾಡುವ ಮೂಲಕ ನೆಟ್ಟಿಗರು ಬಾಲಿವುಡ್ ಸ್ವಜನಪಕ್ಷಪಾತವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. 

ಅಯ್ಯೋ! ಪೋರ್ನ್ ಸೈಟ್‌ನಲ್ಲಿ ಸಿಗ್ತಿದೆ ಬಿಗ್ ಬಾಸ್‌ ಸ್ಪರ್ಧಿ ನಂಬರ್‌, ಫೋಟೋ!

ಅಷ್ಟೇ ಅಲ್ಲ ಕನ್ನಡ ಚಿತ್ರರಂಗಗ್ಗೂ ಇದೊಂದು ಅಂಟಿದ ಶಾಪವೆಂದು ಅಶ್ವಿನಿ ನಕ್ಷತ್ರ ಖ್ಯಾತಿಯ ಜಯರಾಮ್ ಕಾರ್ತಿಕ್ ಆರೋಪಿಸಿದ್ದರು. ಈ ಆರೋಪಕ್ಕೆ ಎಲ್ಲೋ ಕೆಲವೇ ಕೆಲವರು ಮಾತ್ರ ಧ್ವನಿಗೂಡಿಸಿದ್ದು, ಆ ಕೂಗು ಅಲ್ಲಿಯೇ ತಣ್ಣಗಾಗಿ ಹೋಯಿತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?