ಮಹಿಳೆಯೊಂದಿಗೆ ಕ್ರೈಸ್ತ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್‌ ಮಾಡಿದ ಕಾಲಿವುಡ್ ನಟ ಅರೆಸ್ಟ್‌; ನೆಟ್ಟಿಗರ ವಿರೋಧ

Published : Jul 11, 2023, 11:45 AM ISTUpdated : Jul 11, 2023, 11:46 AM IST
ಮಹಿಳೆಯೊಂದಿಗೆ ಕ್ರೈಸ್ತ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್‌ ಮಾಡಿದ ಕಾಲಿವುಡ್ ನಟ ಅರೆಸ್ಟ್‌; ನೆಟ್ಟಿಗರ ವಿರೋಧ

ಸಾರಾಂಶ

ಟ್ವಿಟ್ಟರ್‌ನಲ್ಲಿ ಕ್ರೈಸ್ತ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಸೈಬರ್ ಕ್ರೈಂ ವಿಂಗ್ ಪೊಲೀಸರು ಜುಲೈ 1 ರಂದು ಕಾಲಿವುಡ್‌ ನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಚೆನ್ನೈ (ಜುಲೈ 11, 2023): ಕಾಲಿವುಡ್ ಸ್ಟಂಟ್ ಮಾಸ್ಟರ್ ಮತ್ತು ನಟ ಕನಲ್ ಕಣ್ಣನ್ ಅವರನ್ನು ಸೋಮವಾರ ಮುಂಜಾನೆ ನಾಗರ್‌ಕೋಯಿಲ್‌ನಲ್ಲಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಕ್ರೈಸ್ತ ಪಾದ್ರಿಯೊಬ್ಬರು ಮಹಿಳೆಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕನಾಲ್ ಅವರನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಿನಿಮಾ ಸ್ಟಂಟ್ ಮಾಸ್ಟರ್ ಹಾಗೂ ಹಿಂದೂ ಮುನ್ನಾನಿ ಪದಾಧಿಕಾರಿ ‘ಕನಲ್’ ಕಣ್ಣನ್ ಅವರನ್ನು ಕನ್ಯಾಕುಮಾರಿ ಜಿಲ್ಲೆಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

ಟ್ವಿಟ್ಟರ್‌ನಲ್ಲಿ ಕ್ರೈಸ್ತ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಸೈಬರ್ ಕ್ರೈಂ ವಿಂಗ್ ಪೊಲೀಸರು ಜುಲೈ 1 ರಂದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನ್ನ ದೂರಿನಲ್ಲಿ, ತಿಟ್ಟುವಿಲೈನ ಡಿಎಂಕೆ ಐಟಿ ವಿಭಾಗದ ಉಪ ಸಂಘಟಕ ಆಸ್ಟಿನ್ ಬೆನೆಟ್, ಕಣ್ಣನ್ ಅವರು ಪಾದ್ರಿಯೊಬ್ಬರು ಹುಡುಗಿಯ ಜೊತೆ ನೃತ್ಯ ಮಾಡುತ್ತಿರುವ ‘’ಮ್ಯಾನಿಪ್ಯುಲೇಟೆಡ್‌ ವಿಡಿಯೋ’’ವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು ವಿದೇಶಿ ಧರ್ಮದ ಸಂಸ್ಕೃತಿ ಎಂಬ ಕ್ಯಾಪ್ಷನ್‌ ಹಾಕಿಕೊಂಡಿದ್ದಾರೆ ಎಂದು ದೂರು ನೀಡಿದ್ದರು. 

ಇದನ್ನು ಓದಿ: ಲೈಂಗಿಕ ಕಿರುಕುಳ ಆರೋಪ: ತಮಿಳುನಾಡಿನ ರಾಮೇಶ್ವರಂನಲ್ಲಿ ಪಾದ್ರಿ ಬಂಧನ

ಸಾರ್ವಜನಿಕ ಶಾಂತಿಯನ್ನು ಹಾಳುಮಾಡಲು ಕ್ರೈಸ್ತ ಧರ್ಮದ ಚಿತ್ರಣವನ್ನು ಹಾಳುಮಾಡುವ ಮತ್ತು ವಿವಿಧ ಧರ್ಮಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ‘ಕನಲ್’ ಕಣ್ಣನ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಸೋಮವಾರ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ‘ಕನಲ್’ ಕಣ್ಣನ್ ತನ್ನ ವಕೀಲರೊಂದಿಗೆ ಪೊಲೀಸರ ಮುಂದೆ ಹಾಜರಾಗಿ, ವಿಚಾರಣೆ ಮುಗಿಯುವ ಮೊದಲು, ತಾನು ಮಧುಮೇಹಿ ಎಂದು ಹೇಳಿಕೊಂಡು ಊಟಕ್ಕೆ ಕಚೇರಿಯಿಂದ ಹೊರಬರಲು ಪ್ರಯತ್ನಿಸಿದನು. ಆದರೆ, ವಿಚಾರಣೆ ಮಧ್ಯೆ ಹೊರಗೆ ಹೋಗಲು ಸಾಧ್ಯವಿಲ್ಲ, ಕಚೇರಿಯಲ್ಲೇ ಊಟ ಬಡಿಸುವುದಾಗಿ ಹೇಳಿ ಪೊಲೀಸರು ತಡೆದರು.

ಸಮಯಕ್ಕೆ ಸರಿಯಾಗಿ ಊಟ ಮಾಡಲು ಬಿಡಬೇಕು ಎಂದು ಜತೆಗಿದ್ದ ವಕೀಲರು ಪೊಲೀಸರೊಂದಿಗೆ ವಾದ ಮಂಡಿಸಿದರೂ ಪೊಲೀಸರು ಅದಕ್ಕೊಪ್ಪಲಿಲ್ಲ. ಹಾಗೂ, ಸುಮಾರು 7 ಗಂಟೆಗೆ, 'ಕನಲ್' ಕಣ್ಣನ್ ಅವರ ವಿವಾದಾತ್ಮಕ ಟ್ವಿಟ್ಟರ್‌ ಪೋಸ್ಟ್‌ಗಾಗಿ ಬಂಧಿಸಲಾಯಿತು ಎಂದು ತಿಳಿದುಬಂದಿದೆ. ಕನಲ್ ಒಂದು ತಿಂಗಳ ಹಿಂದೆ ಈ ವಿಡಿಯೋ ಪೋಸ್ಟ್‌ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಮಹಿಳೆಯರಿಗೆ ಲೈಂಗಿಕ ಕಿರುಕುಳ: ಸೋಷಿಯಲ್‌ ಮೀಡಿಯಾದಲ್ಲಿ ಸೆಕ್ಸ್ ವಿಡಿಯೋ ವೈರಲ್‌; ಕ್ರೈಸ್ತ ಪಾದ್ರಿ ಬಂಧನ

ಕನಲ್ ಅವರು ಜೂನ್ 18 ರಂದು ತಮ್ಮ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ, ಕ್ರೈಸ್ತ ಪಾದ್ರಿಯೊಬ್ಬರು ಮಹಿಳೆಯೊಂದಿಗೆ ನೃತ್ಯ ಮಾಡುವುದನ್ನು ನೋಡಬಹುದು. ಅಲ್ಲದೆ, ಕನಲ್‌ ಅವರು ಈ ವಿಡಿಯೋಗೆ  "ಇದು ವಿದೇಶಿ ಧಾರ್ಮಿಕ ಸಂಸ್ಕೃತಿಯ ನಿಜವಾದ ಸ್ಥಿತಿ ???!!!! ಮತಾಂತರಗೊಂಡ ಹಿಂದೂಗಳೇ ಯೋಚಿಸಿ!!!! ಪಶ್ಚಾತ್ತಾಪ !!!’’ಎಂಬ ಕ್ಯಾಪ್ಷನ್‌ ಹಂಚಿಕೊಂಡಿದ್ದಾರೆ. ನಂತರ ವಿಡಿಯೋ ವೈರಲ್ ಆಗಿದ್ದು, ಕಾಲಿವುಡ್ ನಟನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಬಂಧನಕ್ಕೆ ಸಾಕಷ್ಟು ವಿರೋಧ ಕೇಳಿಬರುತ್ತಿದ್ದು, ಹಲವರು ಈ ವಿಡಿಯೋವನ್ನು ಪೋಸ್ಟ್‌ ಮಾಡಿಕೊಳ್ಳುತ್ತಿದ್ದಾರೆ. 

Video: ವಿವಾದಿತ ಪಾದ್ರಿ ಜೊತೆ ರಾಹುಲ್ ಮೀಟಿಂಗ್! ಭಾರತ್ ಜೋಡೋ ಯಾತ್ರೆ ಆರಂಭದಲ್ಲೇ ಇದೆಂಥಾ ಟ್ವಿಸ್ಟ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!