'ವೆಂದು ತಾನಿಂಧತ್ತು ಕಾದು' ಚಿತ್ರಕ್ಕೆ ತೂಕ ಇಳಿಸಿಕೊಂಡ ನಟ ಸಿಂಬು. ಇದು ವೇಟ್‌ಲಾಸ್ ಅಲ್ಲ ಕಾಯಿಲೆ ಎಂದು ಗಾಬರಿಯಾದ ನೆಟ್ಟಿಗರು.
ಕಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ನಟ ಸಂಬು ಅಲಿಯಾಸ್ ಸಿಲಂಬರಸನ್ ಸದ್ಯ 'ವೆಂದು ತಾನಿಂಧತ್ತು ಕಾದು' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದ ವೇಳೆ ಕ್ಯಾರಾವ್ಯಾನ್‌ನಲ್ಲಿ ಸೆರೆ ಹಿಡಿದ ಫೋಟೋವನ್ನು ಹಂಚಿಕೊಂಡು, ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಸಿಂಬು ಯಾವ ಪಾತ್ರಕ್ಕೆ ಇಷ್ಟೊಂದು ಸಣ್ಣ ಆಗಿದ್ದಾರೆ?
ನಯನತಾರಾರ ಎಕ್ಸ್ ಬಾಯ್‌ಫ್ರೆಂಡ್ ಸಿಂಬು ಮದುವೆಯಾಗ್ತಾರಾ ತ್ರಿಶಾ?ವೃತ್ತಿ ಜೀವನದಲ್ಲಿ ಸಿಂಬು ಇದೇ ಮೊದಲ ಬಾರಿ ಇಂಥ ನಿರ್ಧಾರ ಕೈಗೊಂಡಿರುವುದು. ಬರೋಬ್ಬರಿ 15ಕೆಜಿ ತೂಕ ಇಳಿಸಿಕೊಂಡು ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದ್ದು, ಗೌತಮ್ ಮೆನನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಆರಂಭದಲ್ಲಿ ಸಿಂಬು ಇದ್ದ ಸೈಜ್ ಹಾಗೂ ಈಗ ಇರುವ ಸೈಜ್ ಫೋಟೋ ಹಂಚಿಕೊಂಡು ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲವರು ಸಿಂಬು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದರೆ ಇನ್ನೂ ಕೆಲವರೂ ಇದು ವರ್ಕೌಟ್ ಎಂದು ಹೇಳುತ್ತಾರೆ. ಸ್ವತಃ ಸಿಂಬು ಎಲ್ಲಿಯೂಈ ಬಗ್ಗೆ ಕ್ಲಾರಿಟಿ ನೀಡಿಲ್ಲ. ಅಲ್ಲದೇ ಸಿಂಬು ಸುತ್ತ ಮತ್ತೊಂದು ವಿವಾದ ಸುತ್ತಿಕೊಂಡಿದೆ. ಸಿಂಬು ಕೆಲವು ನಿರ್ಮಾಪಕರಿಂದ ಹಣ ಪಡೆದುಕೊಂಡು ಶೂಟಿಂಗ್ ಡೇಟ್ ಫಿಕ್ಸ್ ಆಗಿದ್ದರೂ, ಸರಿಯಾದ ಸಮಯಕ್ಕೆ ಚಿತ್ರೀಕರಣ ಮಾಡಿಕೊಡುತ್ತಿಲ್ಲ. ಬದಲಿಗೆ ಒಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇದರಿಂದ ಮೊದಲು ಬಂಡವಾಳ ಹಾಕಿರುವ ನಿರ್ಮಾಪಕರಿಗೆ ತೊಂದರೆ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ತಮಿಳುನಾಡು ಚಲನಚಿತ್ರ ನಿರ್ಮಾಪಕರ ಮಂಡಳಿ ಈ ವಿಚಾರದ ಬಗ್ಗೆ ದಕ್ಷಿಣ ಭಾರತದ ಚಲನಚಿತ್ರ ನೌಕರರ ಒಕ್ಕೂಟ ಚರ್ಚಿಸಿ 'ವೆಂದು ತಾನಿಂಧತ್ತು ಕಾದು' ಚಿತ್ರಕ್ಕೆ ಯಾವುದೇ ರೀತಿಯ ಸಹಕಾರ ನೀಡದಂತೆ ತೀರ್ಮಾನಿಸಿದ್ದಾರೆ.