ಬಾಲಿವುಡ್‌ನ ಜೋಡಿಗಳ ಹಿಂದೆ ಬಹಳಷ್ಟು ಕಥೆ ಇರುತ್ತದೆ. ಮುರಿದು ಹೋದ ಸಂಬಂಧ, ಮರು ವಿವಾಹಗಳು, ಮದುವೆಗೆ ಮೊದಲೇ ಗರ್ಭಿಣಿಯಾಗುವುದು ಹೀಗೆ ಬಹಳಷ್ಟು ಘಟನೆಗಳು ಬಾಲಿವುಡ್‌ನಲ್ಲಿ ಘಟಿಸುತ್ತವೆ. ಆದರೆ ಅವು ಯಾವುದೂ ಸಾಮಾನ್ಯವಾಗಿರುವುದಿಲ್ಲ. ಟಾಪ್ ಸ್ಟಾರ್‌ಗಳ ಜೀವನದಲ್ಲಿ ನಡೆಯುವ ಘಟನೆಗಳೆಲ್ಲ ಸ್ವಲ್ಪ ದಿನ ಚರ್ಚೆಯಾಗಿ ಮುಗಿದು ಹೋಗುತ್ತದೆ. ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಕೂಡಾ ಹಿಂದೊಮ್ಮೆ ಮನೆ ಮುರುಕಳೆಂಬ ಪಟ್ಟ ಹೊತ್ತುಕೊಂಡಿದ್ದರು. ವಿವಾಹಿತ ಬೋನಿ ಕಪೂರ್ ಜೊತೆ ಪ್ರೀತಿಯಲ್ಲಿ ಬಿದ್ದು ಇಂಥದ್ದೊಂದು ಪಟ್ಟ ಸಿಕ್ಕಿತ್ತು ನಟಿಗೆ.
ಬೋನಿ ಕಪೂರ್ ಪತ್ನಿ ಮೋನಾ ಶೌರಿ ಹಾಗೂ ಇಬ್ಬರು ಮಕ್ಕಳೊಂದಿಗೆ ಖುಷಿಯಾಗಿದ್ದರು. ಅವರ ಜೀವನದಲ್ಲಿ ಎಂಟ್ರಿಕೊಟ್ಟಿದ್ದು ಶ್ರೀದೇವಿ. ಮೋನಾಳ ಅಚ್ಚು ಮೆಚ್ಚಿನ ಗೆಳತಿಯಾದರು ಶ್ರೀದೇವಿ. ಆದರೆ ಅವರ ಸ್ನೇಹ ಬೆಳೆದ ಹಾಗೆಯೇ ಗೆಳತಿಯ ಗಂಡನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಶ್ರಿದೇವಿ. ನಿರ್ಮಾಪಕರಾಗಿದ್ದ ಬೋನಿ ಜೊತೆ ಟಾಪ್ ನಟಿ ಶ್ರೀದೇವಿ ಒಡನಾಟ ಅಪರೂಪವೇನಲ್ಲ. ಅವರ ಪ್ರೀತಿಯಿಂದ ಮೋನಾ ಶೌರಿ ದಾಂಪತ್ಯ ಜೀವನ ಕೊನೆಯಾಯಿತು. ಶ್ರೀದೇವಿ ಹಾಗೂ ಬೋನಿ ಮದುವೆಯಾಗಿ ದಾಂಪತ್ಯ ಜೀವನ ಶುರು ಮಾಡಿದರು.
undefined
ಮಕ್ಕಳು ಸಿನಿಮಾ ಸ್ಟಾರ್‌ಗಳಾಗೋದು ಬೇಡ ಎಂದ ಬೇಬೋ: ಮತ್ತೇನಾಗ್ಬೇಕು ?
ಶ್ರೀದೇವಿಗಾಗಿ ಲಕ್ಷಾಂತರ ಹೃದಯಗಳು ಮಿಡಿಯುತ್ತಿದ್ದವು. ಅವರು ಬಾಲಿವುಡ್‌ನ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿದ್ದರು. ಅನೇಕ ನಟರು ಆಕೆಯೊಂದಿಗೆ ಇರಲು ಬಯಸುವಾಗ ಶ್ರೀದೇವಿ ಈಗಾಗಲೇ ಮದುವೆಯಾಗಿದ್ದ ನಿರ್ಮಾಪಕ ಬೋನಿ ಕಪೂರ್ ಅವರನ್ನು ಪ್ರೀತಿಸುತ್ತಿದ್ದರು. ವ್ಯಾನಿಟಿ ವ್ಯಾನ್‌ಗಳು ಮತ್ತು ವೈಯಕ್ತಿಕ ಸಹಾಯಕರು ಕೇಳದಿದ್ದಾಗ, ಬೋನಿ ಅವರು ಶ್ರೀದೇವಿಗೆ ವಿಶೇಷವಾದ ವ್ಯಾನ್ ಅನ್ನು ಏರ್ಪಡಿಸಿದ್ದರು.
ಶ್ರೀದೇವಿ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದಳು ಎಂಬುದು ರಹಸ್ಯವಲ್ಲ. ಆ ದಿನಗಳಲ್ಲಿ, ಅವರು 'ಹೋಮ್-ಬ್ರೇಕರ್' ಎಂದು ಕರೆಯಲ್ಪಟ್ಟರು. ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಶೌರಿ ಕಪೂರ್ ಅವರ ಸ್ನೇಹಿತೆಯಾಗಿದ್ದು ನಂತರ ಆಕೆಯ ಸವತಿಯಾದರು ಶ್ರೀದೇವಿ.
ತಂದೆಯ ಸಾವಿನ ಸಂದರ್ಭ ಬೋನಿ ಶ್ರೀದೇವಿ ಕುಟುಂಬದ ಜೊತೆ ನಿಂತಿದ್ದರು. ಆರಂಭದಲ್ಲಿ ಶ್ರೀದೇವಿ ಅವರ ಸಂಬಂಧವನ್ನು ಸ್ವೀಕರಿಸದ ಅವರ ಸಹೋದರಿ ನಂತರ ಅದನ್ನು ಒಪ್ಪಿಕೊಂಡರು. ಬೋನಿ ವಿವಾಹಿತರಾಗಿದ್ದ ಕಾರಣ ಬಹಳಷ್ಟು ದ್ವಂದಕ್ಕೆ ಸಿಲುಕಿದ್ದರು ಶ್ರೀದೇವಿ. ಆದರೆ ಅವರ ಪ್ರೀತಿಯ ಸೆಳೆತ ಇಬ್ಬರನ್ನೂ ಒಂದು ಮಾಡಿತು.