ತೆಲುಗು , ತಮಿಳು ಚಿತ್ರರಂಗದಲ್ಲಿ 'ದರ್ಬಾರ್' ಮಾಡುತ್ತಿರುವ ನಟಿ ನಯನತಾರ ಮೊದಲ ಬಾರಿಗ್ ಲವ್, ಟ್ರಸ್ಟ್, ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.
ತಮಿಳು-ತೆಲುಗು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ವೃತ್ತಿ ಜೀವನಕ್ಕೆ ಫಿದಾ ಆಗಿರುವ ಅದೆಷ್ಟೋ ಅಭಿಮಾನಿಗಳು ಆಕೆಯ ವೈಯಕ್ತಿಕ ಜೀವನದ ವಿಷಯಗಳನ್ನು ತಿರಸ್ಕರಿಸುತ್ತಾರೆ.
ಚಿತ್ರೀಕರಣ ಹಾಗೂ ಅವಾರ್ಡ್ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ನಯನತಾರಾ ಲಾಕ್‌ಡೌನ್ ಆಗುವ ಮುನ್ನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ತಮ್ಮ ಪಾಸ್ಟ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ನಿರ್ದೇಶಕ ವಿಘ್ನೇಶ್ ಜೊತೆ ಮದುವೆಯಾಗುವುದು ಖಚಿತವಾದರೂ ಎಲ್ಲೋ ನಯನತಾರಾ ಹಾಗೂ ಪ್ರಭುದೇವ ಸಂಬಂಧ ಪ್ರಶ್ನೆಯಾಗಿ ಉಳಿಯುತ್ತಿದೆ.
'ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ನನ್ನ ಹಿಂದಿನ ಸಂಬಂಧದಲ್ಲೂ ಹಾಗೆ ಆಗಿದೆ ಆ ನಂತರ ನನಗೆ ತಿಳಿಯಿತು ನಂಬಿಕೆ ಇಲ್ಲದವರ ಜೊತೆ ಜೀವನ ಮಾಡುವುದಕ್ಕಿಂತ ಒಂಟಿಯಾಗಿ ಬಾಳುವುದು ಮೇಲು' ಎಂದು ಹೇಳಿಕೆ ನೀಡಿದ್ದಾರೆ.
ಪ್ರಭುದೇವ ಜೊತೆ ಬ್ರೇಕಪ್ ಆದ ನಂತರ ನಯನತಾರಾಳ ಹೆಸರು ನಟ ಸಿಂಬು ಜೊತೆ ಕೇಳಿ ಬಂದಿತ್ತು. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಸಿಂಬು ಸಿನಿಮಾ ದತ್ತ ಹೆಚ್ಚು ಗಮನಹರಿಸಿ ಗಾಸಿಪ್‌ಗೆ ಬ್ರೇಕ್ ಹಾಕಿದರು. ಸಿಂಗಲ್ ವುಮೆನ್ ಆಗಿ ಸೂಪರ್ ಲೈಫ್ ಲೀಡ್ ಮಾಡುತ್ತಿದ ನಯನತಾರಾಳ ಲೈಫ್‌ಗೆ ಲೈಟ್ ಆಗಿ ಬಂದವರು ನಿರ್ದೇಶಕ ವಿಫ್ನೇಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.