
ಕಾಲಿವುಡ್ ಮಾಸ್ಟರ್ ವಿಜಯ್ ದಳಪತಿ ಏಕೈಕ ಪುತ್ರ ಜಾಸನ್ ಸಂಜಯ್ ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗದೆ ಸಿಲುಕಿಕೊಂಡಿರುವ ಸಂತೋಷ್ ಆರೋಗ್ಯ ಬಗ್ಗೆ ವಿಜಯ್ ಚಿಂತಿಸುತ್ತಿದ್ದಾರೆ.
ಕೊರೋನಾಗೂ ಕ್ಯಾರೆ ಅನ್ನದ ಫ್ಯಾನ್ಸ್ ಶುರು ಮಾಡ್ಕೊಂಡ್ರು ಸ್ಟಾರ್ ವಾರ್!
ತಂದೆಯಂತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂದು ಸಂಜಯ್ ಕೆನಡಾದಲ್ಲಿ ಫಿಲ್ಮ್ ಮೇಕಿಂಗ್ ಬಗ್ಗೆ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಸಂಜಯ್ ಸಿನಿಮಾ ಮಾಡುತ್ತಾರೆ ಎಂಬ ಗಾಳಿ ಮಾತುಗಳು ಹರಿದಾಡುತ್ತಿದ್ದವು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಜಯ್ ಪುತ್ರನಿಗೆ ಈ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮುಖ್ಯ ಅಷ್ಟೇ ಅಲ್ಲದೆ ಆತ ಬ್ಯಾಡ್ಮಿಂಟನ್ ಪ್ಲೇಯರ್ ಹಾಗಾಗಿ ಅವರಿಗೆ ಇಚ್ಚೆ ಇರುವ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು ಎಂದು ವಿಜಯ್ ಹೇಳಿದ್ದರು.
ವಿಜಯ್ ದಳಪತಿ 'ಮಾಸ್ಟರ್' ಹಾಡಿನಲ್ಲಿ ವಿಜಯ್ ಸೇತುಪತಿ; ವಿಡಿಯೋ ವೈರಲ್!
ಇನ್ನಿತ್ತರ ದೇಶಗಳಿಗೆ ಹೊಲಿಸಿದರೆ ಕೆನಡಾದಲ್ಲಿ ಕೊರೋನಾ ವೈರಸ್ ಪ್ರಮಾಣ ಬಹಳ ಕಡಿಮೆ ಆದರೂ ಕೆನಡಾ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಸಂಜಯ್ ಭಾರತಕ್ಕೆ ಬರಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿದ್ದಾರೆ. ಮನೆಯಿಂದ ದೂರವಿರುವ ಪುತ್ರನ ಆರೋಗ್ಯ ಬಗ್ಗೆ ಚಿಂತಿಸುತ್ತಿರುವ ವಿಜಯ್ ಮನೆಯಿಂದ ಹೊರ ಬಾರದಂತೆ ಪುತ್ರನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.