ಕೊರೋನಾ ವೈರಸ್ ಲಾಕ್‌ಡೌನ್ ಇದ್ದರೂ ಮನೆಯಿಂದ ಹೊರಕ್ಕೆ ಕಾಲಿಟ್ಟ ತೆಲಗು ನಟ ವಿಜಯ್ ದೇವರಕೊಂಡ ಪಾಡು ಕೇಳೋರು ಯಾರು ? ನಿಜಕ್ಕೂ ಆಗಿದ್ದಾದ್ರೂ ಏನು? ಇಲ್ಲಿದೆ ನೋಡಿ....
ತೆಲಗು ಚಿತ್ರರಂಗದಲ್ಲಿ ಲವರ್ ಬಾಯ್ ಎಂದೇ ಖ್ಯಾತರಾದ ವಿಜಯ್ ದೇವರಕೊಂಡ ಕೊರೋನಾ ವೈರಸ್ ಲಾಕ್‌ಡೌನ್ ಇದ್ದರೂ ಮನೆಯಿಂದ ಹೊರ ಬಂದಿದ್ದಾರೆ. ಬಂದವರೇ ಸೀದಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಿಚಾರ ಕೇಳುತ್ತಿದ್ದಂತೆ ಶಾಕ್ ಆದ ಅಭಿಮಾನಿಗಳು ಕಾರಣವೇನೆಂದು ಹುಡುಕಲು ಶುರು ಮಾಡಿದಾಗ ತಿಳಿದು ಬಂದ ಸತ್ಯವಿದು.
ಹೌದು! ಕೊರೋನಾ ವೈರಸ್ ಪ್ರಮಾಣ ಹೆಚ್ಚಾದಂತೆ ಪೊಲೀಸರ ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ. ಈ ಕಾರಣದಿಂದ ವಿಜಯ್ ಕೊರೋನಾ ವಾರಿಯರ್ಸ್ ಆದ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಲು ಹೈದರಾಬಾದ್ ಪೊಲೀಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.
ಹೈದರಾಬಾದ್‌ನ ಪೊಲೀಸ್ ಕಂಟ್ರೋಲ್ ರೂಂಗೆ ಭೇಟಿ ನೀಡಿದ್ದ ವಿಜಯ್, ಉಚಿತ ಮಾಸ್ಕ್ ವಿತರಿಸಿದ್ದಾರೆ. ವಿಶ್ರಾಂತಿ ಇಲ್ಲದೇ ದುಡಿದು ದಣಿದ ಪೊಲೀಸರಿಗೆ ಸಿನಿಮಾ ವಿಚಾರಗಳ ಬಗ್ಗೆ ಮಾತನಾಡಿ ಉತ್ಸಾಹ ತುಂಬಿದ್ದಾರೆ. ವಿಜಯ್ ಕಂಟ್ರೋಲ್ ರೂಂಗೆ ಭೇಟಿ ನೀಡಿರುವ ಫೋಟೋಗಳನ್ನು ಹೈದರಾಬಾದ್ ಪೊಲೀಸರು ಟ್ಟಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಅದಕ್ಕೂ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿರುವುದು ಮಾತ್ರ ದುರಂತ.
ಸದ್ಯಕ್ಕೆ ತೆರೆ ಕಾಣಲು ಸಿದ್ಧವಾಗುತ್ತಿರುವ 'ಫೈಟರ್' ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಅನೇಕ ದೃಶ್ಯಗಳು ರಿವೀಲ್ ಆಗಿದ್ದು ಈ ಸಿನಿಮಾದಲ್ಲೂ ವಿಜಯ್ ಲವರ್ ಬಾಯ್ ಹೋದೋ ಅಲ್ಲವೋ ಎನ್ನುವ ಕುತೂಹಲ ಅಭಿಮಾನಿಗಳದ್ದು.
ಏನೇ ಅನ್ನಿ ವಿಜಯ್ ಈ ನಡೆ ಈ ಮಾತ್ರ ಎಲ್ಲರೂ ಮೆಚ್ಚುವಂಥದ್ದು. ಇಂಥ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿರುವ ಕೊರೋನಾ ವೈರಸ್ ವಾರಿಯರ್ಸ್‌ಗೆ ಈ ರೀತಿ ಮನೋಸ್ಥೈರ್ಯ ತುಂಬುವ ಕೆಲಸವನ್ನು ಎಲ್ಲ ಸೆಲೆಬ್ರಿಟಿಗಳು ಮಾಡಿದರೊಳಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.