
ತಮಿಳು ಚಿತ್ರರಂಗದಲ್ಲಿ ತಿಂಗಳಿಗೊಂದು ವಿವಾದ ಮೈ ಮೇಲೆ ಎಳೆದುಕೊಳ್ಳುವ ನಟಿ ಅಂದ್ರೆ ಮೀರಾ ಮಿಥುನ್. ಸ್ಟಾರ್ ನಟರನ್ನು ಎದುರು ಹಾಕಿಕೊಳ್ಳುವುದು, ಇಲ್ಲವಾದರೆ ಒಂದು ಸಮುದಾಯದ ಬಗ್ಗೆ ಹೇಳಿಕೆ ನೀಡುವುದು. ಇತ್ತೀಚಿಗೆ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪೊಲೀಸರು ಈ ನಟಿಯನ್ನು ಬಂಧನದಲ್ಲಿದ್ದಾರೆ.
ಮೀರಾ ಮಿಥುನ್ ಬಂಧನ ಆಗುತ್ತಿದ್ದಂತೆ, ಆಕೆಯ ಬಾಯ್ ಫ್ರೆಂಡ್ ಸ್ಯಾಮ್ ಅಭಿಷೇಕ್‌ರನ್ನೂ ಪೊಲೀಸರು ಬಂಧಿಸಿದ್ದಾರೆ. ಮೀರಾ ದಲಿತರ ವಿರುದ್ಧ ಮಾತನಾಡುವುದಕ್ಕೆ ಅವರ ಬಾಯ್‌ಫ್ರೆಂಡ್ ಸಾಥ್ ಕೂಡ ಇದೆ ಎನ್ನಲಾಗಿದೆ. ಅಲ್ಲದೇ ಇಬ್ಬರೂ ಕೆಲವು ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಪೋಟೋಗಳಿಗೆ ಟ್ರೋಲ್ ಆಗುತ್ತಿದ್ದರು, ಯುವತಿಗೆ ದಾರಿ ತಪ್ಪಿಸುತ್ತಿದ್ದಾರೆಂದು ನೆಟ್ಟಿಗರಿಂದ ಕಾಮೆಂಟ್ ಬರುತ್ತಿತ್ತು.
ದಲಿತರ ವಿಚಾರವಾಗಿ ಹಾಗೂ ಅಸಭ್ಯ ಪೋಟೋ ಶೇರ್ ಮಾಡಿಕೊಳ್ಳುತ್ತಾರೆ, ಎಂದು ಸೈಬರ್ ಕ್ರೈಂ ಸ್ಯಾಮ್ ವಿರುದ್ಧ ದೂರು ದಾಖಲಿಸಿಕೊಂಡಿದೆ. 'ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಹಾಗೂ ಕೆಲವರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಚಿತ್ರರಂಗದಿಂದ ಹೊರ ಹಾಕಬೇಕು,' ಎಂದು ಮೀರಾ ಹೇಳಿಕೆ ನೀಡಿದ್ದರು. ವಿಡುತಲೈ ಚಿರುತೈಗಳ್ ಕಚ್ಚಿ ಸಂಘದ ನಾಯಕ ವನ್ನಿ ಅರಸು ದೂರು ನೀಡಿದ ಬಳಿಕ, ಮೀರಾ ಕೇರಳಕ್ಕೆ ಪರಾರಿ ಆಗಿದ್ದರು.
ಕೇರಳ ಪೊಲೀಸರ ಸಹಾಯದಿಂದ ಮೀರಾರನ್ನು ಬಂಧಿಸಲಾಗಿದೆ. ಈ ವೇಳೆಯೂ ಲೈವ್ ವಿಡಿಯೋ ಮಾಡುವ ಮೂಲಕ ಪೊಲೀಸರು ತನ್ನೊಟ್ಟಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ, ಹಲ್ಲೆ ಮಾಡುತ್ತಿದ್ದಾರೆ ಎಂದು ಹೈಡ್ರಾಮಾ ಮಾಡಿದ್ದರು. ಇಬ್ಬರು ಪ್ರೇಮಿಗಳು ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.