
ವಿದೇಶಿಯರಿಗೆ ಹಿಂದುತ್ವ, ದೇಶಿಯ ಸಂಸ್ಕೃತಿ, ಧರ್ಮ, ಗ್ರಂಥಗಳ ಕುರಿತು ವಿಶೇಷ ಆಕರ್ಷಣೆ. ಆಕರ್ಷಣೆಯಷ್ಟೇ ಅಲ್ಲ ರಾಮಾಯಣ, ಮಹಾಭಾರತದವನ್ನು ನಮ್ಮವರಿಗಿಂತ ಹೆಚ್ಚು ವಿದೇಶಿಗರೇ ಓದಿ ಅಳವಡಿಸಿಕೊಳ್ಳುತ್ತಾರೆ. ಬಹಳಷ್ಟು ಜನ ಇಲ್ಲಿ ಬಂದು ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ವಿದೇಶಿ ಸೆಲೆಬ್ರಿಟಿಗಳಿಗೂ ಈ ಕುರಿತು ವಿಶೇಷ ಆಕರ್ಷಣೆ. ವಿದೇಶಿ ನಟಿಯೊಬ್ಬರು ಈಗ ಸೀತಾಮಾತೆಯ ಟ್ಯಾಟೂವನ್ನು ತಮ್ಮ ಕೈಯಲ್ಲಿ ಹಾಕಿಕೊಂಡಿದ್ದಾರೆ.
ಸೋಷಿಲ್ ಮೀಡಿಯಾ ಪೋಸ್ಟ್‌ನಲ್ಲಿ, ನಟಿ ಮತ್ತು ಟಾಕ್-ಶೋ ನಿರೂಪಕಿ ಜಾಡಾ ಪಿಂಕೆಟ್ ಸ್ಮಿತ್ ತನ್ನ ಇತ್ತೀಚಿನ ಟ್ಯಾಟೂ ಮೂಲಕ ಭಾರತದ ಜೊತೆಗಿನ ತಮ್ಮ ಸಂಪರ್ಕವನ್ನು ಬಹಿರಂಗಪಡಿಸಿದ್ದಾರೆ. 49 ವರ್ಷದ ನಟಿ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಹೊಸ ಟ್ಯಾಟೂ ತೋರಿಸಿದ್ದಾರೆ. ನಾನು 60 ನೇ ವಯಸ್ಸಿಗೆ ಸಂಪೂರ್ಣ ತೋಳನ್ನು ಮುಚ್ಚಲು ಬಯಸುತ್ತೇನೆ ಎಂದು ಹೇಳಿದ್ದಾರೆ ನಟಿ.
ಅಮೆರಿಕನ್ ಸಿಂಗರ್ ತೋಳಲ್ಲಿ ಸಂಸ್ಕೃತ ಟ್ಯಾಟೂ
ಫೋಟೋದಲ್ಲಿ, ಸ್ಮಿತ್ ಹಸಿರು ಟ್ರ್ಯಾಕ್‌ಸೂಟ್‌ನಲ್ಲಿ ನೆಲದ ಮೇಲೆ ಕುಳಿತಿರುವಂತೆ ಕಾಣಿಸುತ್ತದೆ. ರಾಮಾಯಣದಲ್ಲಿ ಕಾಣಿಸಿಕೊಳ್ಳುವ ದೇವತೆಯಾದ ಮಾತೆ ಸೀತಾ ಅವರ ಟ್ಯಾಟೂವನ್ನು ಅವರು ಹಾಕಿಕೊಂಡಿದ್ದಾರೆ. ಸೀತಾಮಾತೆ, ಪರಿಶುದ್ಧತೆ, ದೈವತ್ವ, ತ್ಯಾಗ, ಸರಳತೆ ಮತ್ತು ಪ್ರೀತಿಯನ್ನು ಪ್ರತಿನಿಧಿಸುತ್ತಾರೆ.
ಕ್ಯಾಪ್ಶನ್‌ನಲ್ಲಿ ಉಲ್ಲೇಖಿಸಲಾದ ಇತರ ಹೆಸರುಗಳು ಅರೇಬಿಯನ್ ದೇವತೆ ಅಲ್ಲತ್, ಆಫ್ರಿಕನ್ ದೇವತೆ ಓಶುನ್ ಮತ್ತು ಬೌದ್ಧ ಬೋಧಿಸತ್ವ ಮಹಾನ್ ಸಹಾನುಭೂತಿ, ಕ್ವಾನ್ ಯಿನ್ ಎಂದಾಗಿದೆ. ನಟಿಯ ಹೊಸ ಟ್ಯಾಟೂ ಮೂರು ಹೂಬಿಡುವ ಕಮಲಗಳ ಟ್ಯಾಟೂಗಳ ಮೇಲೆ ಹಾಕಲಾಗಿದೆ. ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಟ್ಯಾಟೂ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿ, ಸುಂದರವಾಗಿದೆ. ಜೈ ಮಾತಾ ದಿ ಎಂದು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.