ಸರ್ಜರಿ ಮಾಡಿಸಿಕೊಳ್ಳಲು ಸೈಲೆಂಟ್ ಆಗಿ ವಿದೇಶಕ್ಕೆ ಹಾರಿದ ನಟ ಸಿದ್ಧಾರ್ಥ್. ಮಾಹಿತಿಗಾಗಿ ಡಿಮ್ಯಾಂಡ್ ಮಾಡಿದ ನೆಟ್ಟಿಗರು...
'ಕನ್ನತಿಲ್ ಮುತ್ತಮಿತ್ತಲ್' (Kannathil Muthamittal) ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಚಾಕೋಲೇಟ್ ಬಾಯ್ ಸಿದ್ಧಾರ್ಥ್ (Siddharth). ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ತಿದ್ರೂ ಜನಪ್ರಿಯತೆಗೆ ಏನೂ ಕಡಿಮೆ ಆಗಿಲ್ಲ. ಸಿದ್ಧಾರ್ಥ್ ಎಲ್ಲೇ ಹೋದರೂ, ಬಂದರೂ ಪ್ಯಾಪರಾಜಿಗಳ (Paparazzi) ಕಣ್ಣಿಗೆ ಮೊದಲು ಕಾಣಿಸಿಕೊಳ್ಳುತ್ತಾರೆ. ಹಾಗೆಯೇ ತಮ್ಮ ಕುಟುಂಬಸ್ಥರು ಹಾಗೂ ತಮ್ಮ ಟೀಂ ವಿಮಾನ ನಿಲ್ದಾಣದಲ್ಲಿ (Airport) ಕಾಣಿಸಿಕೊಂಡಿದೆ. ಸಿನಿಮಾ ಕೆಲಸ ನಡೆಯುತ್ತಿರುವ ಚೆನ್ನೈನಲ್ಲಿ (Chennai) ಸಿದ್ಧಾರ್ಥ್ ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದಾಗ ಸಿಕ್ಕ ಉತ್ತರವೇ ಸರ್ಜರಿ.
ನಟ ಸಿದ್ಧಾರ್ಥ್ ಇನ್ನಿಲ್ಲ ಎಂದ ಯುಟ್ಯೂಬ್ ಚಾನೆಲ್ ವಿರುದ್ಧ ನೆಟ್ಟಿಗರು ಗರಂ!ಹೌದು! ನಟ ಸಿದ್ಧಾರ್ಥ್ ಚೆನ್ನೈನ ವಿಮಾನ ನಿಲ್ದಾಣದಿಂದ ಲಂಡನ್‌ಗೆ (London) ಹಾರಿದ್ದಾರೆ ಎನ್ನಲಾಗಿದೆ. ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಸಿದ್ಧಾರ್ಥ್ ಲಂಡನ್‌ನಲ್ಲಿ ಸಣ್ಣ ಸರ್ಜರಿ (Surgery) ಮಾಡಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಕಾಲ ಅಲ್ಲಿಯೇ ವಿಶ್ರಾಂತಿ ಪಡೆದುಕೊಂಡು, ಅನಂತರ ಚೆನ್ನೈಗೆ ಮರಳಲಿದ್ದಾರೆ. ಸಿದ್ಧಾರ್ಥ್ ಅಥವಾ ಅವರ ಟೀಂ ಇದರ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಒಟ್ಟಿನಲ್ಲಿ ಸಿದ್ಧಾರ್ಥ್ ಕ್ಷೇಮವಾಗಿದ್ದರೆ ಸಾಕು, ಎನ್ನುತ್ತಾರೆ ಅಭಿಮಾನಿಗಳು.
ಇತ್ತೀಚಿಗೆ 'ಅರುವಂ' (Aruvam) ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸಿದ್ದರು. ಹಾಕಿದ ಬಂಡವಾಳವಷ್ಟು ಪಡೆದುಕೊಂಡು ಜನಪ್ರಿಯತೆಯನ್ನೂ ಗಳಿಸಿದರು. ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಇದರ ಬೆನ್ನಲ್ಲೇ ತೆಲುಗು 'ಮಹಾ ಸಮುದ್ರಂ' (Maha Samudram) ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಚಿಕಿತ್ಸೆ ನಂತರ ಚಿತ್ರೀಕರಣದಲ್ಲಿ ಸಿದ್ಧಾರ್ಥ್ ಭಾಗಿಯಾಗಲಿದ್ದಾರೆ. ಮಹಾ ಸಮುದ್ರಂ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳ ಬಗ್ಗೆ ಮಾಹಿತಿ ನೀಡಲಾಗಿದೆ ಆದರೆ ಸಿದ್ಧಾರ್ಥ್ ಪಾತ್ರ ಸಸ್ಪೆನ್ಸ್ ಆಗಿಟ್ಟಿದ್ದಾರೆ. ಈ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಗರುಡಾ ರಾಮ್ (Garuda Ram) ಅಲಿಯಾ ರಾಮ ಚಂದ್ರ ವಿಲನ್ (villain) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟನ ನಂಬರ್ ಲೀಕ್ ಮಾಡಿದ ಬಿಜೆಪಿ: ಸಿದ್ಧಾರ್ಥ್ ಕುಟುಂಬಕ್ಕೆ ರೇಪ್ ಬೆದರಿಕೆಮಹಾ ಸಮುದ್ರಂ ಚಿತ್ರದ ನಂತರ 'ಟಕ್ಕರ್'(Takkar) ಹಾಗೂ 'ಇಂಡಿಯಾ 2' (India 2) ಸಿನಿಮಾ ಚಿತ್ರೀಕರಣಗಳಲ್ಲಿಯೂ ಸಿದ್ಧಾರ್ಥ್ ಭಾಗಿಯಾಗಲಿದ್ದಾರೆ. ತಮಿಳು 'ನವರಸ' ಧಾರಾವಾಹಿಯನ್ನು ಸಿದ್ಧಾರ್ಥ್ ನಿರ್ಮಾಣ ಮಾಡುತ್ತಿದ್ದಾರೆ. ಎಸ್ಕೇಪ್ ಲೈಫ್ (Escape Life) ಎಂಬ ವೆಬ್ ಸರಣೆಯಲ್ಲೂ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಸಿದ್ಧಾರ್ಥ್ ಲಿಸ್ಟ್‌ನಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. ಆದರೆ ಅವುಗಳ ಬಗ್ಗೆ ಮಾಹಿತಿ ಕೊರತೆ ಇದೆ.
ಇನ್ನು ಸಿದ್ಧಾರ್ಥ್ ಅನೇಕ ಟೀಕೆ ಹಾಗೂ ಟ್ರೋಲ್ (Trolls)ಗಳಿಗೆ ಒಳಗಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಿದ್ಧಾರ್ಥ್ ಬದುಕಿದರೂ ನಿಧನ ಎಂದು ಯುಟ್ಯೂಬ್ (Youtube) ಚಾನೆಲ್ ಒಂದು ಸುದ್ದಿ ಪ್ರಕಟ ಮಾಡಿತ್ತು. ದಿವಂಗತ ನಟ, ನಟಿಯರ ನಡುವೆ ಸಿದ್ಧಾರ್ಥ್ ಕೂಡ ಇನ್ನಿಲ್ಲ ಎಂದು ಹರಡಿಸಿದ ವಿಡಿಯೋ ಸಖತ್ ವೈರಲ್ ಆಗಿತ್ತು. ಹೀಗಾಗಿ ವಿಡಿಯೋ ಅಪ್ಲೋಡ್ ಮಾಡಿದ ಯುಟ್ಯೂಬ್ ಚಾನೆಲ್ ವಿರುದ್ಧ ದೂರು ದಾಖಲಿಸಿದ್ದರು.