
ಫಂಕಿ ಫಂಕಿ ಡ್ರೆಸ್ ಹಾಕಿ ಸುದ್ದಿ ಮಾಡೋ ರಣವೀರ್ ಸಿಂಗ್ ಈ ಬಾರಿ ಸುದ್ದಿಯಾಗಿದ್ದು ಬೇರೆ ಕಾರಣಕ್ಕೆ. ಅದೂ ಬಾಲಿವುಡ್(Bollywood) ನಟಿಯೊಬ್ಬರ ಜೊತೆ ಸುದ್ದಿಯಾಗಿದ್ದಾರೆ ದೀಪಿಕಾ ಪಡುಕೋಣೆ ಗಂಡ. ಅದೇನಾಯ್ತು ಅಂತೀರಾ ? ಇಲ್ಲಿ ಓದಿ.
ಅನನ್ಯಾ ಪಾಂಡೆ(Ananya Pandey) ಅವರು ಸದ್ಯ ಬಾಲಿವುಡ್‌ನ ಸಕ್ರಿಯ ನಟಿ. ಪರ್ವಾಗಿಲ್ಲ ಎನ್ನುವಷ್ಟು ಆಫರ್‌ಗಳನ್ನೂ ಪಡೆದು ಸಕ್ರಿಯರಾಗಿಬಿಟ್ಟಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್‌ನಿಂದ ತನ್ನ ಕೆಲಸದ ನಂತರ ಹಿಂದಿರುಗಿದ ನಟಿ, ಖೋ ಗಯೇ ಹಮ್ ಕಹಾನ್ ಎಂಬ ಇನ್ನೊಂದು ಪ್ರಾಜೆಕ್ಟ್ ನಾಯಕಿಯಾಗಿ ಸುದ್ದಿಯಾಗಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಅನನ್ಯಾ ಪಾಂಡೆ ಹಾಟ್ ಬಿಕಿನಿ ಲುಕ್: ಫೋಟೋಸ್ ನೋಡಿ
ಇದಕ್ಕಾಗಿ ಅವರು ಇತ್ತೀಚೆಗೆ ಸ್ಕ್ರಿಪ್ಟ್ ಓದುವುದನ್ನು ಪ್ರಾರಂಭಿಸಿದ್ದಾರೆ. ನಟಿ ಈಗ ತನ್ನ ಸಾಮಾಜಿಕ ಮಾಧ್ಯಮದಲ್ಲಿ ವಾರಾಂತ್ಯದಲ್ಲಿ ಮೂಡ್-ಸೆಟ್ ಮಾಡುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಅನನ್ಯಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ರಣವೀರ್ ಸಿಂಗ್ ಜೊತೆಗಿನ ತನ್ನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ನಟಿಹಸಿರು ಉಡುಗೆ ಧರಿಸಿ ಬಣ್ಣಬಣ್ಣದ ಛತ್ರಿ ಅಡಿಯಲ್ಲಿ ಕೂದಲನ್ನು ಫ್ರೀ ಬಿಟ್ಟು ಪೋಸ್ ಕೊಟ್ಟಿದ್ದಾರೆ. ನಟ ರಣವೀರ್ ಸಿಂಗ್ ಅನನ್ಯಾಗೆ ಛತ್ರಿ ಹಿಡಿದುಕೊಂಡಿದ್ದರು. ಅನನ್ಯಾ ಫೋಟೋ ಜೊತೆಗೆ ಶೀರ್ಷಿಕೆಯನ್ನು ಬರೆದಿದ್ದರು. ಕೊಡೆ ಸೂರ್ಯನನ್ನು ತಡೆಯಬಹುದು ಆದರೆ ಶಾಖವನ್ನಲ್ಲ . ಬೆಸ್ಟೀ ರಾನ್-ರನ್ ಎಂದು ಬರೆದಿದ್ದರು ಅನನ್ಯಾ.
ರಣವೀರ್ ಮತ್ತು ಅನನ್ಯಾ ಅವರ ಚಿತ್ರವು ಜೋಡಿಯ ನಡುವೆ ಏನಿದೆ ಎಂದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅಭಿಮಾನಿಗಳು ಹೊಸ ಪ್ರಾಜೆಕ್ಟ್ಗಾಗಿ ತೆರೆಯ ಮೇಲೆ ಇವರು ಜೋಡಿಯಾಗಿರುವುದನ್ನು ನೋಡಲು ಉತ್ಸುಕರಾಗಿದ್ದಾರೆ.
ಅನನ್ಯ ಪಾಂಡೆ ಕೆಲವು ಪ್ರಾಜೆಕ್ಟ್‌ಗಳ ಭಾಗವಾಗಲಿದ್ದಾರೆ. ನಟಿ ಖೋ ಗಯೇ ಹಮ್ ಕಹಾನ್, ಶಕುನ್ ಬಾತ್ರಾ ಅವರ ಇನ್ನೂ ಹೆಸರಿಡದ ಸಿನಿಮಾ ಮತ್ತು ಮುಂದಿನ ಪ್ಯಾನ್-ಇಂಡಿಯಾ ಸಿನಿಮಾ ಲಿಗರ್ ಸೇರಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.