ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಿಮಿಕ್ರಿ ಆರ್ಟಿಸ್ಟ್‌, ವಾಯ್ಸ್‌ ಮಿಮಿಕ್‌ ಮಾಡಿದ್ದಕ್ಕೆ ಜೈಲಿಗೂ ಹೋಗಿ ಬಂದ್ರು!

By Vinutha PerlaFirst Published Dec 23, 2023, 12:42 PM IST
Highlights

ಮಿಮಿಕ್ರಿ ಎನ್ನುವುದು ನಿರ್ದಿಷ್ಟ ವ್ಯಕ್ತಿಯನ್ನು ಗೇಲಿ ಮಾಡುವುದು ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ, ದೇಶದ ಅನೇಕ ಮಿಮಿಕ್ರಿ ಕಲಾವಿದರು ಇತರರನ್ನು ಅನುಕರಿಸುವ ಮೂಲಕ ದೊಡ್ಡ ಆದಾಯವನ್ನು ಗಳಿಸುತ್ತಿದ್ದಾರೆ. ಅವರ ಬಗ್ಗೆ ತಿಳಿಯೋಣ.

ಇತ್ತೀಚೆಗೆ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರನ್ನು ಅನುಕರಿಸಿದರು. ಈ ಘಟನೆ ದುರದೃಷ್ಟಕರ ಎಂದು ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ಇದೇ ವಿಷಯ ಹೆಚ್ಚು ಚರ್ಚೆಯಾದಾಗ ಕಲ್ಯಾಣ್ ಬ್ಯಾನರ್ಜಿ ಮುಂದೆ ಬಂದು ಸ್ಪಷ್ಟೀಕರಣವನ್ನು ನೀಡಬೇಕಾಯಿತು. ಮಿಮಿಕ್ರಿ ಒಂದು 'ಕಲೆ' ಮತ್ತು ಯಾರನ್ನೂ ನೋಯಿಸುವ ಉದ್ದೇಶವಿಲ್ಲ ಎಂದು ಅವರುಉ ಹೇಳಿದರು. ಅವರು ಸ್ಪಷ್ಟನೆ ನೀಡಿದರೂ ಮಿಮಿಕ್ರಿ ವಿವಾದ ಭುಗಿಲೆದ್ದಿದೆ. ಮಿಮಿಕ್ರಿ ಎನ್ನುವುದು ನಿರ್ದಿಷ್ಟ ವ್ಯಕ್ತಿಯನ್ನು ಗೇಲಿ ಮಾಡುವುದು ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ, ದೇಶದ ಅನೇಕ ಮಿಮಿಕ್ರಿ ಕಲಾವಿದರು ಇತರರನ್ನು ಅನುಕರಿಸುವ ಮೂಲಕ ದೊಡ್ಡ ಆದಾಯವನ್ನು ಗಳಿಸುತ್ತಿದ್ದಾರೆ. ಅವರ ಬಗ್ಗೆ ತಿಳಿಯೋಣ.

ಕಿಕು ಶಾರದಾ
ಕಿಕು ಶಾರದಾ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಒಂದು ಸಂಚಿಕೆಗೆ 5ರಿಂದ 6 ಲಕ್ಷ ರೂ. ಪಡೆಯುತ್ತಾರೆ. ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯವು ಸುಮಾರು 82 ಕೋಟಿ ರೂ. ಆಗಿದೆ. ಕಿಕು ಶಾರದಾ ಅವರು ಹಾಸ್ಯದಲ್ಲಿ ಪರಿಣಿತರು ಮಾತ್ರವಲ್ಲ, ಮಿಮಿಕ್ರಿ ಸಹ ಮಾಡುತ್ತಾರೆ. ಆದರೆ, ಒಮ್ಮೆ ಅದೇ ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದರು. ಒಮ್ಮೆ ಕಿಕು ಶಾರದಾ ಅವರು ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಡೇರಾ ಸಚ್ಚಾ ಸೌದಾ ಸಂತ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಅನುಕರಿಸಿದರು. ಈ ಕಾರಣದಿಂದಾಗಿ ಅವರನ್ನು ಬಂಧಿಸಲಾಯಿತು.

Latest Videos

ಕುಡುಕ ತಂದೆಯಿಂದ ಶಾಲೆ ತೊರೆದು ರಸ್ತೆ ಬದಿ ಪೆನ್‌ ಮಾರಾಟ ಮಾಡ್ತಿದ್ದ ವ್ಯಕ್ತಿ, ಈಗ ಭಾರತದ ನಂ.1 ಹಾಸ್ಯನಟ!

ಸುಗಂಧ ಮಿಶ್ರಾ
ಸುಗಂಧ ಮಿಶ್ರಾ ಅದ್ಭುತ ಹಾಸ್ಯನಟ ಮತ್ತು ಗಾಯಕಿ ಮಾತ್ರವಲ್ಲ, ಮಿಮಿಕ್ರಿ ಕೂಡ ಮಾಡುತ್ತಾರೆ. ಕಪಿಲ್ ಶರ್ಮಾ ಅವರ ಕಾರ್ಯಕ್ರಮಗಳಲ್ಲಿ ಆಶಾ ಭೋಂಸ್ಲೆಯಿಂದ ಲತಾ ಮಂಗೇಶ್ಕರ್ ವರೆಗೆ ಅವರು ಹಲವು ಗಾಯಕರನ್ನು ಅನುಕರಿಸುತ್ತಾರೆ.. ಸುಗಂಧ ಮಿಶ್ರಾ ಸರಾಸರಿ 50000 ರಿಂದ 1 ಲಕ್ಷ ರೂ. ಆದಾಯ ಪಡೆಯುತ್ತಾರೆ.

ಸಂಕೇತ್ ಭೋಸಲೆ
ಸಂಕೇತ್ ಭೋಸಲೆ ಸುಗಂಧ ಮಿಶ್ರಾ ಅವರ ಪತಿ, ಪ್ರಸಿದ್ಧ ವೈದ್ಯ, ಮತ್ತು ಭಾರತದ ಅಗ್ರ ಮಿಮಿಕ್ರಿ ಕಲಾವಿದರಲ್ಲಿ ಒಬ್ಬರು. ಸಂಜಯ್ ದತ್ ಮತ್ತು ಸಲ್ಮಾನ್ ಖಾನ್‌ನಿಂದ ಫರ್ಹಾನ್ ಅಖ್ತರ್‌ವರೆಗೆ ಎಲ್ಲರ ಮಿಮಿಕ್ರಿ ಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ವರದಿಗಳ ಪ್ರಕಾರ, ಸಂಕೇತ್‌ ಭೋಸಲೆ ಒಟ್ಟು ಆಸ್ತಿ ಮೌಲ್ಯ ಸುಮಾರು 7 ಕೋಟಿ ರೂ.

ನಿನಾದ್ ಕಾಮತ್
ನಿನಾದ್ ಕಾಮತ್ ಅವರ ಮುಖವನ್ನು ನೋಡಿದರೆ ಅವರೊಬ್ಬ ಸಾಮಾನ್ಯ ನಟ ಎನಿಸುತ್ತದೆ. ಆದರೆ ವಾಸ್ತವದಲ್ಲಿ ಅವರೊಬ್ಬ ಅದ್ಭುತ ಮಿಮಿಕ್ರಿ ಕಲಾವಿದ. ಅವರ ಧ್ವನಿಯನ್ನು ಕೇಳಿದರೆ, ಅಮಿತಾಬ್ ಬಚ್ಚನ್ ಮಾತನಾಡುತ್ತಿದ್ದಾರೆ ಎಂದೇ ಅನಿಸುತ್ತದೆ. ನಿನಾದ್ ಕಾಮತ್ ಅಮಿತಾಬ್ ಬಚ್ಚನ್‌ನಿಂದ ಹಿಡಿದು ಸಚಿನ್ ತೆಂಡೂಲ್ಕರ್, ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ವರೆಗೆ ಪ್ರತಿ ತಾರೆಯರನ್ನು ಅನುಕರಿಸುವಲ್ಲಿ ಪರಿಣತರಾಗಿದ್ದಾರೆ. ವರದಿಗಳ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 5.5 ಕೋಟಿ ರೂ.

ಹೀರೋಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಕಾಮಿಡಿಯನ್‌; ಸಿನ್ಮಾವೊಂದಕ್ಕೆ ಭರ್ತಿ 2 ಕೋಟಿ ರೂ.!

ಸುಮೇಧ ಶಿಂಧೆ
ವರದಿಗಳ ಪ್ರಕಾರ ಸುಮೇಧ್ ಶಿಂಧೆ ಅವರ ಶುಲ್ಕ 50,000 ರೂ.ನಿಂದ 1 ಲಕ್ಷ ರೂ. ಆಗಿದೆ. ಸುಮೇಧ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ, ಆದರೆ ಅವರ ಮಿಮಿಕ್ರಿ ಮೇಲಿನ ಒಲವು ಅವರನ್ನು ಹಾಸ್ಯನಟ ಮತ್ತು ಮಿಮಿಕ್ರಿ ಕಲಾವಿದರನ್ನಾಗಿ ಮಾಡಿತು. ಅಮೀರ್ ಖಾನ್‌ನಿಂದ ಹಿಡಿದು ಹೃತಿಕ್ ರೋಷನ್ ಮತ್ತು ಸೋನು ನಿಗಮ್ ವರೆಗೆ ಎಲ್ಲರನ್ನೂ ಅನುಕರಿಸುತ್ತಾರೆ.

ಜಯವಿಜಯ್ ಸಚನ್
ಕಪಿಲ್ ಶರ್ಮಾ ಅವರ ಶೋನಲ್ಲಿ ಜಯವಿಜಯ್ ಸಚನ್ ಅವರನ್ನು ನೋಡಿರಬೇಕು. ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರ ಮಿಮಿಕ್ರಿ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಸ್ವತಃ ಸಲ್ಮಾನ್ ಮತ್ತು ಶಾರುಖ್ ಕೂಡ ಜಯವಿಜಯ್ ಅವರನ್ನು ಹೊಗಳಿದ್ದರು. ಜಯವಿಜಯ್ ಅವರು ಸಚನ್, ಪಂಕಜ್ ತ್ರಿಪಾಠಿ ಮತ್ತು ಅಜಯ್ ದೇವಗನ್ ಅವರ ಅದ್ಭುತ ಮಿಮಿಕ್ರಿ ಮಾಡುತ್ತಾರೆ. ಆದರೆ, ಒಮ್ಮೆ ಶಾರುಖ್ ಖಾನ್ ಅವರನ್ನು ಅನುಕರಿಸಿದ್ದಕ್ಕಾಗಿ ಅವರಿಗೆ ಕೊಲೆ ಬೆದರಿಕೆಗಳು ಬಂದವು.

click me!