ಇತ್ತೀಚೆಗೆ ಬಿಡುಗಡೆಯಾದ ಸತ್ಯಪ್ರೇಮ್ ಕಿ ಕಥಾದಲ್ಲಿ ಕಿಯಾರಾ ಅಡ್ವಾಣಿ ಹಾಗೂ ಕಾರ್ತಿಕ್ ಆರ್ಯನ್ ಅವರ ರೊಮಾನ್ಸ್ ದೃಶ್ಯಗಳನ್ನು ನೋಡಿ ಕಿಯಾರಾ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಹೇಳಿದ್ದೇನು?
ಕಿಯಾರಾ ಅಡ್ವಾಣಿಯವರ ಇತ್ತೀಚಿಗೆ ಬಿಡುಗಡೆಯಾದ ರೋಮ್ಯಾಂಟಿಕ್ ಚಿತ್ರ ಸತ್ಯಪ್ರೇಮ್ ಕಿ ಕಥಾ. ಇದರಲ್ಲಿ ಅವರು ತಮ್ಮ ಭೂಲ್ ಭುಲೈಯಾ 2 ಸಹ-ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಮತ್ತೆ ಒಂದಾಗಿದ್ದಾರೆ. ಈ ಮೂಲಕ ಬಾಲಿವುಡ್ನಲ್ಲಿ ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್ ಆರ್ಯನ್ ಅವರು ಸೂಪರ್ ಹಿಟ್ ಜೋಡಿ ಎನಿಸಿಕೊಂಡಿದೆ. ‘ಸತ್ಯಪ್ರೇಮ್ ಕಿ ಕಥಾ’ (Satyaprem Ki Katha) ಸಿನಿಮಾ ಕೂಡ ಹಿಟ್ ಆಗಿದ್ದು, ವಿಶ್ವಾದ್ಯಂತ 100 ಕೋಟಿಗೂ ಅಧಿಕ ಹಣ ಗಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮದುವೆಯಾದ ನಂತರ ಕಿಯಾರಾ ಅವರಿಗೆ ಇದು ಮೊದಲ ಚಿತ್ರ. ಆದರೆ ಮದುವೆಯಾದ ಮೇಲೂ ಬೇರೊಬ್ಬ ನಟನ ಜೊತೆ ರೊಮಾನ್ಸ್ ಮಾಡಿರುವುದಕ್ಕೆ ಕಿಯಾರಾ ಸಕತ್ ಟ್ರೋಲ್ ಆಗಿದ್ದರು. ಇದರಿಂದ ನಟಿ ನೊಂದುಕೊಂಡಿದ್ದರು. ಆದರೆ ಈಗ ಈ ನಕಾರಾತ್ಮಕತೆಯಿಂದ ತಾವು ಹೇಗೆ ಪ್ರಭಾವಿತರಾಗಿದ್ದೆವು ಹಾಗೂ ಅದನ್ನು ಎದುರಿಸಲು ಸಿದ್ಧಾರ್ಥ್ ಹೇಗೆ ಸಹಾಯ ಮಾಡಿದರು ಎಂಬುದನ್ನು ತಿಳಿಸಿದ್ದಾರೆ.
ಸತ್ಯಪ್ರೇಮ್ ಕಿ ಕಥಾ’ ಸಿನಿಮಾದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ (Romantic Love Story) ಜೊತೆಗೆ ಒಂದು ಸೋಶಿಯಲ್ ಮೆಸೇಜ್ ಕೂಡ ಇದೆ. ಅದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಆದರೆ ಈ ರೊಮಾನ್ಸ್ನಿಂದ ನಟಿ ಸಕತ್ ಟ್ರೋಲ್ ಆಗಿದ್ದರು. ಈ ಕುರಿತು ಈಗ ಮಾತನಾಡಿರುವ ನಟಿ, 'ಸತ್ಯಪ್ರೇಮ್ ಕಿ ಕಥಾ ಹೊರಬರುತ್ತಿರುವ ಸಮಯದಲ್ಲಿ ನಾನು ಮೊದಲ ಬಾರಿಗೆ ಅತಿಯಾದ ನೋವನ್ನು ಅನುಭವಿಸಿದೆ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮಂದಿ ಟ್ರೋಲ್ ಮಾಡಿದ್ದರು. ಮದುವೆಯಾಗುವ ಮುನ್ನ ಈ ರೀತಿ ರೊಮಾನ್ಸ್ ಮಾಡಿದರೆ ಯಾರಿಗೂ ಏನೂ ಕಷ್ಟ ಇರಲಿಲ್ಲ. ಆದರೆ ನಾನು ಈಗಷ್ಟೇ ಮದುವೆಯಾಗಿದ್ದರಿಂದ ತುಂಬಾ ವಿಚಿತ್ರವಾದ ಕಮೆಂಟ್ಗಳ ಸುರಿಮಳೆಯಾಯಿತು. ಅವಳು ಯಾಕೆ ಹೀಗೆ ಮಾಡುತ್ತಿದ್ದಾಳೆ, ಯಾಕೆ ಹಾಗೆ ಮಾಡುತ್ತಿದ್ದಾಳೆ ಎಂದೆಲ್ಲಾ ಹೇಳುತ್ತಿದ್ದರು. ಇದು ನನಗೆ ತುಂಬಾ ನೋವನ್ನುಂಟು ಮಾಡಿತು ಎಂದು ಕಿಯಾರಾ (Kiara Advani) ಹೇಳಿದ್ದಾರೆ.
ನಟಿ ಕಿಯಾರಾ ಕ್ಯೂಟ್ ಫೋಟೋ ಶೇರ್ ಮಾಡಿದ್ರೆ, ಪ್ರೆಗ್ನೆಂಟಾ ಕೇಳ್ತಿದ್ದಾರೆ ಫ್ಯಾನ್ಸ್?
ನಾನು ಈ ಟ್ರೋಲ್ನಿಂದ ತುಂಬಾ ನೊಂದಿದ್ದೆ. ಜೊತೆಗೆ ಕೆಟ್ಟ ಕೆಟ್ಟ ಕಮೆಂಟ್ಗಳಿಂದ ಸಿದ್ಧಾರ್ಥ್ ಹೇಗೆ ರಿಯಾಕ್ಟ್ ಮಾಡುತ್ತಾರೆ ಎನ್ನುವ ಬಗ್ಗೆ ಭಯವಿತ್ತು ಇದು ನಿಜವಾಗಿಯೂ ನನ್ನ ಮೇಲೆ ಪರಿಣಾಮ ಬೀರಿತು. ಆದರೆ ನನ್ನ ಅದೃಷ್ಟ ಎಂದರೆ, ಈ ಟ್ರೋಲ್‌ಗಳಿಂದ ನಾನು ತಲೆಕೆಡಿಸಿಕೊಳ್ಳಬಾರದು ಎಂದು ಸಿದ್ಧಾರ್ಥ್ (Siddharth Malhotra) . ಅವರು ನನ್ನನ್ನು ಸಮಾಧಾನ ಪಡಿಸಿದರು ಎಂದು ನಟಿ ಕಿಯಾರಾ ಹೇಳಿದರು.
'ನೋಡು ಇಂಥ ಟ್ರೋಲ್ಗಳು ಸದಾ ಇರುತ್ತದೆ. ಈ ರೀತಿಯ ನೆಗೆಟಿವ್ ಟ್ರೋಲರ್‌ಗಳಿಗೆ ನೀನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಾದರೆ, ಮನೆಯಲ್ಲಿ ಕುಳಿತು ಅಳುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಆಗುವುದಿಲ್ಲ. ಆದ್ದರಿಂದ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಸಿದ್ಧಾರ್ಥ್ ಹೇಳಿದರು ಎಂದು ಕಿಯಾರಾ ಹೇಳಿದ್ದಾರೆ. ನಾವು ಮದುವೆಯಾದುದು ಕೆಲವರಿಗೆ ಇಷ್ಟವಾಗದೇ ಇರಬಹುದು. ನಮ್ಮಿಬ್ಬರ ಜೋಡಿ ನಿನ್ನ ಕೆಲ ಫ್ಯಾನ್ಸ್ಗೆ ಇಷ್ಟವಾಗದೇ ಇರಬಹುದು. ಅಂಥವರು ಟ್ರೋಲ್ಮಾಡುತ್ತಿದ್ದಾರಷ್ಟೆ ಎಂದು ಸಿದ್ಧಾರ್ಥ್ ಹೇಳಿದ ಮೇಲೆ ನನಗೆ ಧೈರ್ಯ ಬಂತು ಎಂದಿರುವ ನಟಿ, ದೇವರಿಗೆ ಧನ್ಯವಾದಗಳು, ಈ ವಿಷಯದಲ್ಲಿ ಬುದ್ಧಿವಂತಿಕೆ, ಪ್ರಬುದ್ಧತೆ (Maturity) ಮತ್ತು ಅನುಭವವನ್ನು ಹೊಂದಿರುವ ಯಾರಾದರೂ ನಮ್ಮ ಜೊತೆ ಇದ್ದರೆ ಇಂಥ ಸಮಸ್ಯೆ ಬರುವುದಿಲ್ಲ ಎಂದಿದ್ದಾರೆ.
Kiara Advani: ಮದ್ವೆಯಾದ ಮೇಲೆ ಹರಿದಾಡ್ತಿಗೆ ಬೆತ್ತಲೆ ಫೋಟೋ- ಏನಪ್ಪಾ ಅಂತಿದ್ದಾರೆ ನೆಟ್ಟಿಗರು!
ಅಂದಹಾಗೆ, ಕಿಯಾರಾ ಮತ್ತು ಸಿದ್ಧಾರ್ಥ್ ಅವರು 2021ರಿಂದ ಡೇಟಿಂಗ್ (Dating) ಮಾಡಲು ಪ್ರಾರಂಭಿಸಿದ್ದರು ಮತ್ತು ಕಳೆದ ಫೆಬ್ರವರಿ 7 ರಂದು ರಾಜಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾದರು.