ಗಗನಕ್ಕೇರಿದೆ ಹಾಲಿವುಡ್‌ನ 'ಆಪನ್ಹೈಮರ್' ಸಿನಿಮಾ ಟಿಕೆಟ್ ಬೆಲೆ. ಭಾರತದಲ್ಲಿ ಮುಂಗಡ ಟಿಕೆಟ್‌ಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈಗಾಗಲೇ ಅನೇಕ ಕಡೆ ಬಹುತೇಕ ಶೋ ಹೌಸ್ ಫುಲ್ ಆಗಿದೆ.
ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಆಪನ್ಹೈಮರ್ ಸಿನಿಮಾ ಭಾರತದಲ್ಲೂ ಭಾರಿ ನಿರೀಕ್ಷೆ ಮೂಡಿಸಿದೆ. ಜುಲೈ 21ರಂದು ವಿಶ್ವಾದ್ಯಂತ ಆಪನ್ ರಿಲೀಸ್ ಆಗುತ್ತಿದ್ದು ಈಗಾಗಲೇ ಸಖತ್ ಕ್ರೇಜ್ ಸೃಷ್ಟಿ ಆಗಿದೆ. ಇದು ಐತಿಹಾಸಿಕ ಕಥೆಯನ್ನು ಹೊಂದಿರುವ ಸಿನಿಮಾ. ಅಣು ಬಾಂಬ್ ಕಂಡು ಹಿಡಿದ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನವನ್ನು ಆಧರಿಸಿದ ಚಿತ್ರವಿದು. ಟ್ರೇಲರ್ ಮೂಲಕ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದ್ದು ಭಾರತೀಯರು ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಆಪನ್ಹೈಮರ್ ಸಿನಿಮಾದ ಮುಂಗಡ ಟಿಕೆಟೆ ಬುಕ್ಕಿಂಗ್ ಓಪನ್ ಆಗಿದ್ದು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಬಹುತೇಕ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಭಾರತದಲ್ಲಿ ಅನೇಕ ನಗರಗಳಲ್ಲಿ ಶೋಗಳು ಹೌಸ್ ಫುಲ್ ಆಗಿವೆ. ಅಂದಹಾಗೆ ಅಂದೇ ಜುಲೈ 21ಕ್ಕೆ ಮತ್ತೊಂದು ಹಾಲಿವುಡ್ ಸಿನಿಮಾ ರಿಲೀಸ್ ಆಗುತ್ತಿದೆ. ಮಾರ್ಗಟ್ ರಾಬಿಯ ಅವರ ಬಾರ್ಬಿ ಸಿನಿಮಾ ಕೂಡ ಅವತ್ತೆ ರಿಲೀಸ್ ಆಗುತ್ತಿದೆ.
ಈಗಾಗಲೇ ಭಾರತದಲ್ಲಿ 2ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್ ಆಗಿವೆ ಎನ್ನಲಾಗಿದೆ. ಭಾರತದ ವಿವಿಧ ನಗರಗಳಲ್ಲಿ ಟಿಕೆಟ್ ಬೆಲೆ ವಿವಿಧ ರೀತಿಯಲ್ಲಿವೆ. ಗಗನಕ್ಕೇರಿದ ಟಿಕೆಟ್ ಬೆಲೆಯ ನಡುವೆಯೂ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ಬುಕ್ ಮಾಡುತ್ತಿದ್ದಾರೆ. ಕೆಲವು ಕಡೆ ಆಪನ್ಹೈಮರ್ ಟೆಕೆಟ್ ಬೆಲೆ 2,450 ರೂಪಾಯಿಗೆ ಮಾರಾಟವಾಗಿವೆ. ಆದರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಮುಂಬೈನಲ್ಲಿ PVR, PVR ICON: Phoenix Palladium, Lower Parel Mumbai ನಲ್ಲಿ ರಾತ್ರಿ ಶೋ ಟಿಕೆಟ್ ಬೆಲೆ ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ. 1,800 ರೂಪಾಯಿ ಟಿಕೆಟ್ ಬೆಲೆ ಇದೆ ಎನ್ನಲಾಗಿದೆ. ಆದರೂ ಬಹುತೇಕ ಟಿಕೆಟ್ ಮಾರಾಟವಾಗಿವೆ. ಭಾರತದ ಬಹುತೇಕ ನಗರಗಳಲ್ಲಿ ಬೆಳಗ್ಗೆ 3 ಗಂಟೆಗೆ ಶೋಗಳು ಪ್ರಾರಂಭವಾಗುತ್ತಿವೆ. ಮುಂಬೈನಲ್ಲಿ ರಾತ್ರಿ 12 ಗಂಟೆಗೆ ಮದ್ಯರಾತ್ರಿಯೇ ಮೊದಲ ಶೋ ಪ್ರಾರಂಭವಾಗುತ್ತಿವೆ.
60 ವರ್ಷಗಳಲ್ಲೇ ಹಾಲಿವುಡ್‌ನಲ್ಲಿ ಅತಿದೊಡ್ಡ ಮುಷ್ಕರ, ಬೀದಿಗಿಳಿದ ಬ್ರಾಡ್ ಪಿಟ್, ಜೆನಿಫರ್ ಲಾರೆನ್ಸ್!
ಆಪನ್ಹೈಮರ್ ಸಿನಿಮಾ ಬಗ್ಗೆ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಮೇಲೆ ಅಮೆರಿಕ ಎರಡು ಬಾರಿ ಅಣು ಬಾಂಬ್ ಹಾಕಿತ್ತು. ಆ ಘಟನೆ ಇಡೀ ಮನುಕುಲದ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿದೆ. ಒಂದೇ ಬಾರಿಗೆ ಲಕ್ಷಾಂತರ ಜನರನ್ನು ಕೊಲ್ಲುವಂತಹ, ಇಡೀ ಒಂದು ಮಹಾನಗರವನ್ನೇ ಕ್ಷಣಾರ್ಧದಲ್ಲಿ ನಿರ್ನಾಮ ಮಾಡುವಂತಹ ದೈತ್ಯ ಬಾಂಬ್ ಕಂಡು ಹಿಡಿದವರು ಜೆ. ರಾಬರ್ಟ್ ಆಪರ್ಹೈಮರ್. ಅವರ ಜೀವನದ ವಿವರಗಳನ್ನು ಈ ಸಿನಿಮಾದಲ್ಲಿ ನೋಡಬಹುದು.
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾಲಿವುಡ್ ಪ್ರತಿಭಟನೆ: ಪ್ರಿಯಾಂಕಾ ಚೋಪ್ರಾಗೆ ಬಿಗ್ ಶಾಕ್!
ಈ ಸಿನಿಮಾದಲ್ಲಿ ರಾಬರ್ಟ್ ಡೌನಿ ಜೂನಿಯರ್, ಕಿಲಿಯನ್ ಮರ್ಫಿ, ಮ್ಯಾಟ್ ಡೇಮನ್ ಸಿನಿಮಾದ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಜೆ. ರಾಬರ್ಟ್ ಆಪನ್ಹೈಮರ್ ಪಾತ್ರಕ್ಕೆ ಕಿಲಿಯನ್ ಮರ್ಫಿ ಬಣ್ಣ ಹಚ್ಚಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದಾರೆ. ರಾಬರ್ಟ್ ಡೌನಿ ಜೂನಿಯರ್ ಅವರು ಬಹುತೇಕ ಗುರುತೇ ಸಿಗದಂತೆ ಬದಲಾಗಿದ್ದಾರೆ.