ಬಾಲಿವುಡ್‌ಗೆ ಹಾರಿದ 'ಮಹಾನಟಿ' ಕೀರ್ತಿ: ಖ್ಯಾತ ನಟನ ಜೊತೆ ರೊಮ್ಯಾನ್ಸ್

By Shruthi Krishna  |  First Published Jul 18, 2023, 5:31 PM IST

ಸೌತ್ ಸುಂದರಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಹಾರಿದ್ದಾರೆ. ಹಿಂದಿ ಸಿನಿಮಾ ಮಾಡುವುದು ಕೀರ್ತಿಯ ದೊಡ್ಡ ಆಸೆಯಾಗಿತ್ತು. ಇದೀಗ ಉತ್ತಮ ಪಾತ್ರ ಸಿಕ್ಕಿದ್ದು ಕೀರ್ತಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. 


ಸೌತ್ ಸುಂದರಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಹಾರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹಿಂದಿ ಸಿನಿಮಾ ಮಾಡಬೇಕು ಎನ್ನುವುದು ಕೀರ್ತಿ ಸುರೇಶ್ ಅವರ ಆಸೆ. ಉತ್ತಮ ಪಾತ್ರಕ್ಕಾಗಿ ಕೀರ್ತಿ ಎದುರು ನೋಡುತ್ತಿದ್ದರು. ಅದರಂತೆ ಈಗ ಬಾಲಿವುಡ್‌ಗೆ ಜಿಗಿಯುತ್ತಿದ್ದಾರೆ. ತನ್ನಿಷ್ಟದ ಪಾತ್ರ ಸಿಕ್ಕಿದ ಕಾರಣ ಕೀರ್ತಿ ಧೈರ್ಯವಾಗಿ ಹಿಂದಿಗೆ ಹಾರುತ್ತಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಇದೀಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  

ಅಂದಹಾಗೆ ಕೀರ್ತಿ ಬಾಲಿವುಡ್‌ ಖ್ಯಾತ ನಟನ ಜೊತೆ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಆಂಗ್ಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕೀರ್ತಿ ಮತ್ತು ವರುಣ್ ಧವನ್ ಇಬ್ಬರನ್ನು ಒಟ್ಟಿಗೆ ನೋಡಲು ಅಭಿಮಮಾನಿಗಳು ಕಾತರರಾಗಿದ್ದಾರೆ.  ಚಿತ್ರಕ್ಕೆ ಸದ್ಯ VD18 ಎಂದು ಹೆಸರಿಡಲಾಗಿದೆ. ಅಂದಹಾಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಮೊದಲನೆ ನಾಯಕಿಯಾಗಿ ಕೀರ್ತಿ ಆಯ್ಕೆಯಾಗಿದ್ದಾರೆ. 2ನೇ ನಾಯಕಿಯಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ. 

Tap to resize

Latest Videos

ಈ ಸಿನಿಮಾ ಪಕ್ಕ ಆಕ್ಷನ್-ಪ್ಯಾಕ್ಡ್ ಆಗಿರಲಿದೆಯಂತೆ.  ಈ ಚಿತ್ರದಲ್ಲಿ ವರುಣ್ ಧವನ್ ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ. ಅಂದಹಾಗೆ ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಪತ್ನಿ ಪ್ರಿಯಾ ಅಟ್ಲೀ ನಿರ್ಮಾಣ ಮಾಡುತ್ತಿದ್ದಾರೆ. ಜವಾನ್ ನಿರ್ದೇಶಕ ಅಟ್ಲಿ ಕುಮಾರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಶಾರುಖ್ ಬಳಿಕ ಮತ್ತೋರ್ವ ಹಿಂದಿ ಸ್ಟಾರ್‌ಗೆ ಆಟ್ಲೀ ಕುಮಾರ್ ಸಿನಿಮಾ: ಯಾರದು?

ವರುಣ್ ಧವನ್ ಸದ್ಯ ಬವಾಲ್ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಜೊತೆಗೆ ಸಿಟಾಡೆಲ್ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ವರುಣ್ ಸಿಟಾಡೆಲ್‌ನಲ್ಲಿ ಸೌತ್ ಸುಂದರಿ ಸಮಂತಾ ಜೊತೆ ನಟಿಸಿದ್ದಾರೆ. ಮೊದಲ ಬಾರಿಗೆ ಸ್ಯಾಮ್ ಮತ್ತು ವರುಣ್ ಒಟ್ಟಿಗೆ ಕಾಣಿಸಿಕೊಂಡಿದ್ದು ಇಬ್ಬರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾಗೆ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದೆ ಎಂದು ಸಮಂತಾ ಬಹಿರಂಗ ಪಡಿಸಿದ್ದರು.  

'ಮಾಮನ್ನನ್' ಎಂಟ್ರಿಗೆ ಕೀರ್ತಿ ಸಖತ್ ಎಕ್ಸೈಟ್; ಫೋಟೋ ವೈರಲ್

ನಟಿ ಕೀರ್ತಿ ಸುರೇಶ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಿವೆ. ಈ ನಡುವೆ ಈಗ ಬಾಲಿವುಡ್‌ಗೆ ಹಾರುತ್ತಿದ್ದಾರೆ. ಕೀರ್ತಿ ನಟಿಸಿದ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ದೊಡ್ಡ ಸಕ್ಸಸ್‌ಗೆ ಕಾಯುತ್ತಿದ್ದ ಕೀರ್ತಿಗೆ ಮಾಮನ್ನನ್ ಸಿನಿಮಾ ಮತ್ತೆ ಗೆಲುವಿನ ಟ್ರ್ಯಾಕ್‌ಗೆ  ಮರಳಿದ್ದರು. ತಮಿಳಿನ ಮಾಮನ್ನನ್ ಸಿನಿಮಾ ಸಕ್ಸಸ್ ಆಗಿದ್ದು ಕೀರ್ತಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

click me!