
ಬಹುಭಾಷ ನಟಿ ಕಿಯಾರಾ ಅಡ್ವಾಣಿ (Kiara Advani) ಸಾಲು ಸಾಲು ಸಿನಿಮಾಗಳ ಸಕ್ಸಸ್‌ನ ಅಲೆಯಲ್ಲಿ ತೇಲುತ್ತಿದ್ದಾರೆ. ಕಿಯಾರಾ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇತ್ತೀಚಿಗಷ್ಟೆ ಜಗ್ ಜಗ್ ಜಿಯೋ (Jugjugg Jeeyo) ಸಿನಿಮಾ ಕೂಡ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಲು ಸಾಲು ಸಿನಿಮಾಗಳ ಸಕ್ಸಸ್‌ನ ಸಂತಸದಲ್ಲಿರುವ ಕಿಯಾರಾ ಜಗ್ ಜಗ್ ಜಿಯೋ ಸಿನಿಮಾದ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಕಿರಾಯಾ ಧರಿಸಿದ್ದ ಹಳದಿ ಲೆಹಂಗಾ (Yellow Lehenga) ಎಲ್ಲರ ಗಮನ ಸೆಳೆದಿದೆ. ಕಿರಾಯಾ ಧರಿಸಿದ್ದ ಲೆಹಂಗಾದಲ್ಲಿ ಅಂತಾದ್ದು ಏನಿದೆ ವಿಶೇಷ ಅಂತೀರಾ. ಹಳದಿ ಬಣ್ಣದ ಗ್ರ್ಯಾಂಡ್ ಲೆಹಂಗಾದ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ.
ಡೀಪ್ ನೆಕ್ ಹಳದಿ ಬಣ್ಣದ ಲಹಂಗಾದ ಬೆಲೆ ಬರೊಬ್ಬರಿ 68 ಸಾವಿರ ರೂಪಾಯಿ. ಈ ಬೆಲೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಒಂದು ಸಿನಿಮಾ ಪ್ರಮೋಷನ್‌ಗೆ ಇಷ್ಟು ದುಬಾರಿ ಬೆಲೆಯ ಬಟ್ಟೆ ಧರಿಸುತ್ತಾರಾ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಸಿದ್ಧಾರ್ಥ್ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ 'ಕಿಯಾರಾ ಬೆಸ್ಟ್ ವೈಫ್ ಆಗ್ತಾಳೆ' ಎಂದ ನೀತು ಕಪೂರ್
ನಟಿ ಕಿಯಾರಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಅಭಿಮಾನಿಗಳ ಮನಸೆಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಜಗ್‌ಜಗ್ ಜಿಯೋ ಸಿನಿಮಾ ಪ್ರಮೋಷನ್ ನಲ್ಲಿ ತರಹೇವಾರಿ ಟ್ರಡೀಷ್‌ನಲ್ ಬಟ್ಟೆ ಧರಿಸಿದ್ದರು. ಕಿಯಾರಾ ತನ್ನ ವಿಭಿನ್ನ ಜೀವನದ ಶೈಲಿಯೊಂದಿಗೆ ನೋಡುಗರ ಗಮನ ಸೆಳೆದಿದ್ದಾರೆ. ಕಿಯಾರಾ ಹೊಸ ಲುಕ್ ಅನ್ನು ಸ್ಟೈಲಿಸ್ಟ್ ಲಕ್ಷ್ಮಿ ಲೆಹರ್ ಅವರು ಡಿಸೈನ್ ಮಾಡಿದ್ದಾರೆ. ಕಿಯಾರಾ ಹೊಸ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
Kiara Advani ಮತ್ತು Sidharth Malhotra ಮತ್ತೆ ಒಂದಾಗಿದ್ದು ಹೇಗೆ?
ಶೇರ್ ಶಾ, ಭೂಲ್ ಭುಲೈಯಾ-2 ಮತ್ತು ಜಗ್ ಜಗ್ ಜಿಯೋ ಸಿನಿಮಾದ ಹ್ಯಾಟ್ರಿಕ್ ಸಕ್ಸಸ್‌ನಲ್ಲಿರುವ ಕಿಯಾರಾ ಅಡ್ವಾಣಿ ಸದ್ಯ ಇನ್ನು ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೋವಿಂದ ನಾಮ್ ಮೇರಾ ಮತ್ತು ರಾಮ್ ಚರಣ್ ಜೊತೆ RC15 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗೋವಿಂದ ನಾಮ್ ಮೇರಾ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು ರಿಲೀಸ್ ಗೆ ರೆಡಿಯಾಗುತ್ತಿದೆ. ಸದ್ಯ ರಾಮ್ ಚರಣ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.