ಕಾಫಿ ವಿತ್ ಕರಣ್‌ನಲ್ಲಿ ಸಮಂತಾ: KGF ಬಗ್ಗೆ ಹೇಳಿ ಕರಣ್ ಕಾಲೆಳೆದ ಸೌತ್ ಸ್ಟಾರ್

Published : Jul 03, 2022, 11:23 AM ISTUpdated : Jul 03, 2022, 11:24 AM IST
ಕಾಫಿ ವಿತ್ ಕರಣ್‌ನಲ್ಲಿ ಸಮಂತಾ: KGF ಬಗ್ಗೆ ಹೇಳಿ ಕರಣ್ ಕಾಲೆಳೆದ ಸೌತ್ ಸ್ಟಾರ್

ಸಾರಾಂಶ

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಸಮಂತಾ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಜೊತೆ ಸಮಂತಾ (Samantha), ಕರಣ್ ಶೋಗೆ ಹಾಜರಾಗಿದ್ದಾರೆ. ಈ ಶೋನಲ್ಲಿ ಸಮಂತಾ ಹೇಳಿರುವ ಡೈಲಾಗ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಿಂದಿಯ ಜನಪ್ರಿಯ ಚಾಟ್ ಶೋ ಕಾಫಿ ವಿತ್ ಕರಣ್ (Koffee With Karan) ಪ್ರಾರಂಭಕ್ಕೆ ದಿನಗಣೆ ಪ್ರಾರಂಭವಾಗಿದೆ. ಈಗಾಗಲೇ ಕಾಫಿ ವಿತ್ ಕರಣ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಕಾಫಿ ವಿತ್ ಕರಣ್‌ನಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಟ್ರೈಲರ್ ರಿಲೀಸ್ ಮಾಡುವ ಮೂಲಕ ಯಾರೆಲ್ಲ ಸೆಲೆಬ್ರಿಟಿಗಳು ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.  ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಚಾಟ್ ಶೋ ಕಾಫಿ ವಿತ್ ಕರಣ್ 7ರ ಟ್ರೈಲರ್ ಶನಿವಾರ ಸಂಜೆ ಬಿಡುಗಡೆಯಾಗಿದೆ. ಅಂದಹಾಗೆ ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ (OTT) ಪ್ರಸಾರವಾಗುತ್ತಿದೆ. 

ಒಟಿಟಿಗಳ ದೈತ್ಯ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ (Disney Plus Hotstar) ಪ್ರಾರವಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನ ಹೈಲೆಟ್ ಅಂದರೆ ಸಮಂತಾ. ಹೌದು ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಸಮಂತಾ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಜೊತೆ ಸಮಂತಾ (Samantha), ಕರಣ್ ಶೋಗೆ ಹಾಜರಾಗಿದ್ದಾರೆ. ಈ ಶೋನಲ್ಲಿ ಸಮಂತಾ ಹೇಳಿರುವ ಡೈಲಾಗ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಮಂತಾ, ಕರಣ್ ಜೋಹರ್‌ಗೆ 'ಅಸಂತೋಷದ ಮದುವೆಗೆ ನೀವೆ ಕಾರಣ. ನೀವು ಜೀವನವನ್ನು ಕೆ3ಜಿ ( ಕಭಿ ಖುಷಿ ಕಭಿ ಗಮ್) ಎಂದು ಹೇಳಿದ್ದೀರಿ. ಆದರೆ ರಿಯಾಲಿಟಿ ಎಂದರೆ ಕೆಜಿಎಫ್' ಎಂದು ಹೇಳಿದ್ದಾರೆ.    

ಸೌತ್ ಸ್ಟಾರ್ ಸಮಂತಾ ರುತ್ ಪ್ರಭು, ಅಕ್ಷಯ್ ಕುಮಾರ್ ಅವರೊಂದಿಗೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಅಂದಹಾಗೆ ಉಳಿದ ಅತಿಥಿಗಳೆಂದರೆ  ಆಲಿಯಾ ಭಟ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್, ವರುಣ್ ಧವನ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ಜಾನ್ವಿ ಕಪೂರ್, ವಿಜಯ್ ದೇವರಕೊಂಡ ಮತ್ತು ಕೃತಿ ಸನೋನ್ ಸೇರಿದ್ದಾರೆ. ಎಲ್ಲರೂ ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಜೊತೆ ಸಮಂತಾ ರೊಮ್ಯಾನ್ಸ್? 'ನೋ ಎಂಟ್ರಿ'ಗೆ ಸ್ಯಾಮ್ ಎಂಟ್ರಿ

 

ಸಮಂತಾ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ಬಳಿಕ ಸಮಂತಾ ಖ್ಯಾತಿ ಹೆಚ್ಚಾಗಿದೆ. ಈ ವೆಬ್ ಸರಣಿ ಬಳಿಕ ಸಮಂತಾ ಬೇಡಿಕೆಯೂ ಹೆಚ್ಚಾಗಿದೆ. ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಲು, ತೆಲುಗು ಜೊತೆಗೆ ಹಿಂದಿಯಲ್ಲೂ ಸಮಂತಾ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಸಮಂತಾ ಶಾಕುಂತಲಂ ಸಿನಿಮಾ ರಿಲೀಸ್‌ಗೆ  ರೆಡಿಯಾಗುತ್ತಿದೆ. ಜೊತೆಗೆ ಯಶೋಧ ಮತ್ತು ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇನ್ನು ಹಿಂದಿಯಲ್ಲಿ ವೆಬ್ ಸರಣಿ ಒಂದಕ್ಕೆ ಸಹಿ ಹಾಕಿದ್ದಾರೆ. ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. 

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಹಬ್ಬಿಸಿದವರಿಗೆ ಶೋಭಿತಾ ಹೀಗ್ ಹೇಳೋದಾ.!

ಸಮಂತಾ ಸದಾ ಸುದ್ದಿಯಲ್ಲಿರುವ ನಟಿ. ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಮಂತಾ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ನಾಗ ಚೈತನ್ಯ ಡೇಟಿಂಗ್ ವದಂತಿ ವೈರಲ್ ಆಗಿತ್ತು. ನಾಗ ಚೈತನ್ಯ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಮತ್ತು ಶೋಭಿತಾ ಬಗ್ಗೆ ವದಂತಿ ಹಬ್ಬಿಸಿದ್ದು ಸಮಂತಾ ಪಿಆರ್ ಟೀಂ ಎಂದು ನಾಗ ಚೈತನ್ಯ ಅಭಿಮಾನಿಗಳು ಆರೋಪ ಮಾಡಿದ್ದರು. ಇದರಿಂದ ಕೆರಳಿದ್ದ ಸಮಂತಾ ನೆಟ್ಟಿಗರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದರು. 'ಇಂತ ಮಾತುಗಳನ್ನು ಹೇಳುತ್ತಾ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಕೆಲಸಗಳ ಕಡೆ ಮೊದಲು ಗಮನ ಹರಿಸಿ, ನಿಮ್ಮ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ತಿವಿದಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?