ಜೀವ ಬೆದರಿಕೆ; ಸ್ವಯಂ ರಕ್ಷಣೆಗೆ ಸಲ್ಮಾನ್ ಖಾನ್‌ಗೆ ಸಿಕ್ತು ಗನ್ ಲೈಸೆನ್ಸ್

By Shruiti G KrishnaFirst Published Aug 1, 2022, 11:12 AM IST
Highlights

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಗನ್ ಪರವಾನಗಿ ಸಿಕ್ಕಿದೆ. ಜೀವ ಬೆದರಿಕೆ ಬಂದ ಬಳಿಕ ಸಲ್ಮಾನ್ ಖಾನ್ ಗನ್ ಲೈಸೆನ್ಸ್ ಕೇಳಿ ಅರ್ಜಿ ಸಲ್ಲಿಸಿದ್ದರು. ಇದೀಗ ಸಲ್ಮಾನ್ ಖಾನ್ ಅವರಿಗೆ ಸ್ವಯಂ ರಕ್ಷಣೆಗೆ ಗನ್ ಹೊಂದಲು ಪರವಾನಗಿ ನೀಡಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಗನ್ ಪರವಾನಗಿ ಸಿಕ್ಕಿದೆ. ಜೀವ ಬೆದರಿಕೆ ಬಂದ ಬಳಿಕ ಸಲ್ಮಾನ್ ಖಾನ್ ಗನ್ ಲೈಸೆನ್ಸ್ ಕೇಳಿ ಅರ್ಜಿ ಸಲ್ಲಿಸಿದ್ದರು. ಇದೀಗ ಸಲ್ಮಾನ್ ಖಾನ್ ಅವರಿಗೆ ಸ್ವಯಂ ರಕ್ಷಣೆಗೆ ಗನ್ ಹೊಂದಲು ಪರವಾನಗಿ ನೀಡಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಮೇ ತಿಂಗಳಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಹಂತಕರಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಗನ್‌ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. 

ಕಳೆದ ತಿಂಗಳು ಸಲ್ಮಾನ್ ಖಾನ್ ಮುಂಬೈ ಪೊಲೀಸ್ ಆಯುಕ್ತರನ್ನು ಭೇಟಿಯಾದ ನಂತರ ಪರವಾನಗಿ ನೀಡುವ ಪ್ರಾಧಿಕಾರವು ಅಗತ್ಯ ತನಿಖೆಯನ್ನು ಪ್ರಾರಂಭಿಸಿತ್ತು. ಗನ್ ಲೈಸೆನ್ಸ್‌ಗಾಗಿ ಟಾಪ್ ಕಾಪ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಲು ಕಳೆದ ತಿಂಗಳ ಕೊನೆಯಲ್ಲಿ ನಟ ಮುಂಬೈ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಆಗ ತನ್ನನ್ನು ಮತ್ತು ತನ್ನ ಕುಟುಂಬದ ರಕ್ಷಣೆಗೆ ಗನ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದರು.  

ಬೆದರಿಕೆಗಳ ನಂತರ ಸಲ್ಮಾನ್ ಖಾನ್ ಶಸ್ತ್ರಸಜ್ಜಿತ ಮತ್ತು ಬುಲೆಟ್ ಪ್ರೂಫ್ ಲ್ಯಾಂಡ್ ಕ್ರೂಸರ್ ಕಾರನ್ನು ಅಪ್‌ಗ್ರೇಡ್ ಮಾಡಿದ್ದಾರೆ ಎನ್ನಲಾಗಿದೆ. 

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ ಎಂದು ಪೋಲಿಸ್‌ರು ಬಹಿರಂಗಪಡಿಸಿದ್ದರು. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ ಅವರ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದರು.

ಕೊಲೆ ಬೆದರಿಕೆ ಬೆನ್ನಲ್ಲೇ ಗನ್ ಲೈಸೆನ್ಸ್‌ಗಾಗಿ ಸಲ್ಮಾನ್ ಖಾನ್ ಅರ್ಜಿ, ಕಮಿಷನರ್ ಕಚೇರಿಗೆ ಭೇಟಿ!

ಕೃಷ್ಣ ಮೃಗ  ತನ್ನ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ (ಜಂಬಾಜಿ) ಅವರ ಪುನರ್ಜನ್ಮ ಎಂದು ಅವರ ಸಮಾಜವು ಪರಿಗಣಿಸುತ್ತದೆ. ಹಾಗಾಗಿ ಸಲ್ಮಾನ್ ಬೇಟೆಯ ಘಟನೆಯಿಂದ ಅವರಿಗೆ ತೀವ್ರ ನೋವಾಗಿದೆ  ಎಂದು ಬಿಷ್ಣೋಯ್ ಹೇಳಿದರು.

ಸಲ್ಮಾನ್ ಖಾನ್‌ರನ್ನು ಕ್ಷಮಿಸಲ್ಲ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ಜೀವ ಬೆದರಿಕೆ

ಸಲ್ಮಾನ್ ತಂದೆಗೆ ಬೆದರಿಕೆ ಪತ್ರ

ಕಳೆದ ತಿಂಗಳ 5 ರಂದು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಬೆಳಿಗ್ಗೆ ವಾಕಿಂಗ್ ಮುಗಿಸಿ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನ ಬೆಂಚ್ ಮೇಲೆ ಕುಳಿತಿದ್ದಾಗ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಕೆಲವು ದಿನಗಳ ಹಿಂದೆ ಗುಂಡಿಕ್ಕಿ ಕೊಂದ ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರಂತೆ ಕೊಲ್ಲಲಾಗುತ್ತೆ ಎಂದು ಪತ್ರದಲ್ಲಿತ್ತು ಎನ್ನಲಾಗಿದೆ.

click me!