
KGF ನಟ ಯಶ್ ಮತ್ತು ಬಾಲಿವುಡ್ ನಟಿ ವಿದ್ಯಾಬಾಲನ್ಗೆ ನೇರವಾಗಿ ಯಾವುದೇ ಲಿಂಕ್ ಇಲ್ಲ ಎಂಬುದು ನಮಗೆಲ್ಲರಿಗೂ ಗೊತ್ತು. ಇವರಿಬ್ಬರು ಸಿನಿಮಾ ಮಾಡಿದ್ರೆ ಹೇಗಿರಬಹುದು..?
ಕಳೆದೊಂದು ದಶಕ್ಕಿಂತ ಹೆಚ್ಚು ಕಾಲದಿಂದ ವಿದ್ಯಾಬಾಲನ್ ಮಹಿಳಾ ಪ್ರಧಾನ ಪಾತ್ರಗಳ ಮೂಲಕ, ಸಿನಿಮಾಗಳ ಮೂಲಕ ಸಿನಿಪ್ರಿಯರ ಮನಸು ಗೆದ್ದಿದ್ದಾರೆ. ನಟ ಯಶ್ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್, ಸ್ಟೈಲಿಷ್ ಲುಕ್, ಸ್ಟೈಲ್ನಿಂದ ಎಲ್ಲೆಡೆ ಫೇಮಸ್ ಆಗಿದ್ದಾರೆ.
KGF2 ರಿಲೀಸ್ ಡೇಟ್ ಅನೌನ್ಸ್, ಯಶ್ ಅಭಿಮಾನಿಗಳಿಂದ ಹೊಸ ಡಿಮ್ಯಾಂಡ್..!
ಯಶ್ ವಿದ್ಯಾ ಬಾಲನ್ ಜೊತೆ ಕನ್ನಡದಲ್ಲಿ ಅಭಿನಯಿಸುವ ಆಸೆ ವ್ಯಕ್ತಪಡಿಸಿದ್ದು ನಿಮಗೆ ಗೊತ್ತಾ..? ಇದಕ್ಕೆ ವಿದ್ಯಾ ಬಾಲನ್ ಪ್ರತಿಕ್ರಿಯೆ ಹೇಗಿತ್ತು..? ಇವರಿಬ್ಬರೂ ಸಿನಿಮಾ ಮಾಡಿದ್ರೆ ಹೇಗಿರಬಹುದು..?
ಕಾರ್ಯಕ್ರಮವೊಂದರಲ್ಲಿ ಯಶ್ ಹಾಗೂ ವಿದ್ಯಾಬಾಲನ್ ಇಬ್ಬರೂ ಜೊತೆಯಾಗಿ ಭಾಗವಹಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡಾ ಇದ್ದರು.
ಆಸ್ಕರ್ ನಾಮಿನೇಷನ್‌ಗೆ ವಿದ್ಯಾ ಬಾಲನ್ ಶಾರ್ಟ್ ಫಿಲ್ಮ್
ಈ ಸಂದರ್ಭ ಮಾತನಾಡಿದ ಯಶ್, ಮ್ಯಾಮ್ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿ ಎಂದು ಕೇಳಿಕೊಂಡಿದ್ದಾರೆ.
ಇದಕ್ಕೆ ವಿದ್ಯಾಬಾಲನ್ ಹೇಗೆ ಪ್ರತಿಕ್ರಿಯಿಸಿದ್ದರು...? ಕನ್ನಡದಲ್ಲಿ ನಟಿಸಿ ಎಂದು ಯಶ್ ಕೇಳಿದಾಗ, ನೀವು ನನಗೊಂದು ಸಿನಿಮಾ ಆಫರ್ ಮಾಡಿ ಎಂದಿದ್ದಾಎ ವಿದ್ಯಾ ಬಾಲನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.