ದಿಯಾ ಮಿರ್ಝಾ ಮದುವೆ ನಡೆಸ್ಕೊಟ್ಟಿದ್ದು ಪುರೋಹಿತನಲ್ಲ ಪುರೋಹಿತೆ..!

Suvarna News   | Asianet News
Published : Feb 17, 2021, 02:19 PM ISTUpdated : Feb 17, 2021, 10:59 PM IST
ದಿಯಾ ಮಿರ್ಝಾ ಮದುವೆ ನಡೆಸ್ಕೊಟ್ಟಿದ್ದು ಪುರೋಹಿತನಲ್ಲ ಪುರೋಹಿತೆ..!

ಸಾರಾಂಶ

ದಿಯಾ ಮಿರ್ಝಾ ಮದುವೆ ಕಳೆದ ಕೆಲವು ದಿನಗಳಿಂದ ವೈರಲ್ ಆಗಿತ್ತು. ರೀಸನ್ ಏನು ಗೊತ್ತಾ..? ಇವರ ಮದುವೆಯಲ್ಲಿ ಮಂತ್ರ ಹೇಳಿ ಶಾಸ್ತ್ರ ಮಾಡಿದ್ದು ಪುರೋಹಿತರಲ್ಲ, ಪುರೋಹಿತೆ

ದಿಯಾ ಮಿರ್ಝಾ ಇತ್ತೀಚೆಗಷ್ಟೇ ಉದ್ಯಮಿ ವೈಭವ್ ರೇಖಿಯವರನ್ನು ಮದುವೆಯಾದರು. ಅವರ ವಿವಾಹ ಖಾಸಗಿ ಕಾರ್ಯಕ್ರಮವಾಗಿತ್ತು. ಸೋಮವಾರ ವಿವಾಹ ಕಾರ್ಯಕ್ರಮ ನಡೆದಿದ್ದು, ಇದೀಗ ನಟಿ ತಮ್ಮ ಮದುವೆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಒಂದು ಫೋಟೋ ಮಾತ್ರ ಇದರಲ್ಲಿ ಹೆಚ್ಚು ವಿಶೇಷವಾಗಿದೆ. ಮಹಿಳಾ ಪುರೋಹಿತೆ ಮದುವೆ ಶಾಸ್ತ್ರಗಳನ್ನು ನಡೆಸುತ್ತಿರುವುದನ್ನು ನೀವಿಲ್ಲಿ ಕಾಣಬಹುದು. ಪುರೋಹಿತೆ, ಸ್ರ್ತೀವಾದದಲ್ಲಿ ನಿಜವಾಗಿ ಬದುಕುತ್ತಿರುವಾಕೆ ಎಂದು ಕಮೆಂಟಿಸಿದ್ದಾರೆ ಫ್ಯಾನ್ಸ್.

ನಟಿ ದಿಯಾ ಮಿರ್ಜಾ ಮತ್ತು ವೈಭವ್‌ ರೇಖಿ ಮದುವೆ ಫೋಟೋಸ್ ವೈರಲ್‌!

ಇವರು ಮಹಿಳಾ ಪುರೋಹಿತೆ ಅಲ್ವಾ ಮಂತ್ರ ಹೇಳುತ್ತಿರುವುದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಫೋಟೋದಲ್ಲಿ ದಿಯಾ ಮತ್ತ ವೈಭವ್ ಅಗ್ನಿ ಕುಂಡದ ಮುಂದೆ ಕುಳಿತಿದ್ದು, ಬದಿಯಲ್ಲಿ ಕುಳಿತ ಹಿರಿಯ ಮಹಿಳೆ ಅಗ್ನಿಗೆ ತುಪ್ಪ ಎರೆಯುತ್ತಿರುವುದನ್ನು ಕಾಣಬಹುದು.

ಪ್ರೀತಿ ನಮ್ಮ ಮನೆಗೆ ಆಗಮಿಸಲಿದೆ. ಪ್ರೀತಿ ಬಾಗಿಲು ತಟ್ಟುವುದನ್ನು ಕೇಳಲು ಎಷ್ಟು ಹಿತವಾಗಿದೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ವಿವಾಹ ಕಾರ್ಯಕ್ರಮಕ್ಕೆ ಅದಿತಿ ರಾವ್ ಹೈದರಿ, ನಿರ್ದೇಶಕ ಕುನಾಲ್ ದೇಶ್ಮುಖ್ ಬಂದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?